Video

ಟ್ರೇಲರ್‌ನಲ್ಲಿ ‘ವೆಂಕಟೇಶ’ನ ದರ್ಶನ!

ಹೊಸಬರ ‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್‌ ರಿಲೀಸ್‌

ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಹೊಸ ಚಿತ್ರ

ವಿಜಯ್‌ ಭಾರದ್ವಾಜ್‌-ಅನ್ವಿತಾ ಜೋಡಿಯ ಹೊಸ ಪ್ರೇಮಕಥೆ

ಕೆಲ ದಿನಗಳ ಹಿಂದಷ್ಟೇ ತನ್ನ ಟೈಟಲ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದ ‘ನಮೋ ವೆಂಕಟೇಶ’ ಚಿತ್ರತಂಡ, ಇದೀಗ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ನಮೋ ವೆಂಕಟೇಶ’ ಔಟ್‌ ಅಂಡ್‌ ಔಟ್‌ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಸಿನೆಮಾ. ಒಂದು ನವಿರಾದ ಪ್ರೇಮಕಥೆಯ ಜೊತೆಗೆ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ‘ನಮೋ ವೆಂಕಟೇಶ’ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ.

ಹೇಗಿದೆ ‘ನಮೋ ವೆಂಕಟೇಶ’ ಟ್ರೇಲರ್‌..?

ಇನ್ನು ಬಿಡುಗಡೆಯಾಗಿರುವ ‘ನಮೋ ವೆಂಕಟೇಶ’ ಸಿನೆಮಾದ ಟ್ರೇಲರ್ ನಲ್ಲಿಯೂ ಈ ಎಲ್ಲಾ ಅಂಶಗಳನ್ನು ಪ್ರೇಕ್ಷಕರ ಮುಂದೆ ಹೇಳುವ ಕೆಲಸ ಮಾಡಿದೆ ಚಿತ್ರತಂಡ. ಸುಂದರವಾದ ಮಲೆನಾಡಿನ ಹಿನ್ನೆಲೆಯ ಪರಿಸರ, ಒಂದು ಲವ್‌ ಸ್ಟೋರಿ, ಜೊತೆಗೊಂದಷ್ಟು ಕಚಗುಳಿಯಿಡುವ ಕಾಮಿಡಿ ಸನ್ನಿವೇಶಗಳನ್ನು ‘ನಮೋ ವೆಂಕಟೇಶ’ ಸಿನೆಮಾದ ಟ್ರೇಲರ್‌ ನಲ್ಲಿ ಕಟ್ಟಿಕೊಡಲಾಗಿದೆ. ಬಹುತೇಕ ಹೊಸ ಕಲಾವಿದರ ಜೊತೆಗೆ ಹಿರಿಯ ಕಲಾವಿದರ ಸಮಾಗಮ ಕೂಡ ‘ನಮೋ ವೆಂಕಟೇಶ’ ಟ್ರೇಲರ್‌ ನಲ್ಲಿ ಕಾಣುತ್ತಿದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಎಲ್ಲವೂ ‘ನಮೋ ವೆಂಕಟೇಶ’ ಟ್ರೇಲರ್‌ ಅನ್ನು ಅಂದವಾಗಿಸಿದೆ ಎನ್ನಬಹುದು.

‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಶೀಘ್ರದಲ್ಲಿಯೇ ‘ನಮೋ ವೆಂಕಟೇಶ’ನ ಸಂಪೂರ್ಣ ದರ್ಶನ

‘ಆರುಶ್ ಪಿಕ್ಚರ್ಸ್’ ಬ್ಯಾನರಿನಲ್ಲಿ ಶ್ರೀನಿವಾಸ ಗೆಜ್ಜಲಗೆರೆ ನಿರ್ಮಿಸಿರುವ, ‘ನಮೋ ವೆಂಕಟೇಶ’ ಚಿತ್ರಕ್ಕೆ ಮೈಸೂರು ಮೂಲದ ಯುವ ಪ್ರತಿಭೆ ವಿಜಯ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ನಮೋ ವೆಂಕಟೇಶ’ ಚಿತ್ರದಲ್ಲಿ ನಿರ್ದೇಶಕ ವಿಜಯ್ ಭಾರದ್ವಾಜ್ ಅವರೇ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಈಗಾಗ ಅನ್ವಿತಾ ಸಾಗರ್ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶ್ಯಾಮ ಸುಂದರ್, ನಾಗರಾಜ ರಾವ್, ರವಿಕುಮಾರ್, ದೀಪಾ, ಮಂಜುನಾಥ ಹೆಗ್ಡೆ, ಸುಧಾ ಪ್ರಸನ್ನ ಮೊದಲಾದ ಕಲಾವಿದರು ‘ನಮೋ ವೆಂಕಟೇಶ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಟ್ರೇಲರ್‌ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ‘ನಮೋ ವೆಂಕಟೇಶ’ ಚಿತ್ರವನ್ನು ಇದೇ ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಥಿಯೇಟರಿಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

Related Posts

error: Content is protected !!