Video

ಕಿಚ್ಚನ ‘ಮಾರ್ಕ್’ ಟ್ರೇಲರ್ ರಿಲೀಸ್ ಔಟ್‌!

ಹೊರಬಂತು ಕಿಚ್ಚ ಸುದೀಪ್‌ ‘ಮಾರ್ಕ್’ ಟ್ರೇಲರ್ 

‘ಮಾರ್ಕ್’ ಟ್ರೇಲರಿನಲ್ಲಿ ಸಿಕ್ಕಾಪಟ್ಟೆ ಮಾಸ್ ಲುಕ್‌ನಲ್ಲಿ ಕಿಚ್ಚ ಸುದೀಪ್‌ ಎಂಟ್ರಿ…

ಟ್ರೇಲರ್‌ನಲ್ಲಿ ‘ಮಾರ್ಕ್’ ಕಥೆಯ ಎಳೆಬಿಟ್ಟುಕೊಟ್ಟ ಚಿತ್ರತಂಡ

ನಟ ಕಿಚ್ಚ ಸುದೀಪ್‌ ಅಭಿನಯದ, ಈ ವರ್ಷದ ಬಹುನಿರೀಕ್ಷಿತ ‘ಮಾರ್ಕ್’ ಚಿತ್ರದ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ ‘ಮಾರ್ಕ್’ ಚಿತ್ರದ ಇಂಟ್ರೋ ಟೀಸರ್ ಬಿಡುಗಡೆಯಾಗಿದ್ದು, ಈ ಟೀಸರ್‌ ಸುದೀಪ್‌ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ‘ಮಾರ್ಕ್’ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದ್ದು, ಚಿತ್ರತಂಡ ಅದ್ಧೂರಿಯಾಗಿ ‘ಮಾರ್ಕ್’ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ಮಾರ್ಕ್’ ಸಿನೆಮಾದ ಟ್ರೇಲರ್‌..?

ಇನ್ನು ಬಿಡುಗಡೆಯಾಗಿರುವ ‘ಮಾರ್ಕ್’ ಸಿನೆಮಾದ ಟ್ರೇಲರ್‌ ತುಂಬಾ ಮಾಸ್ ಆಗಿ ಮೂಡಿಬಂದಿದೆ. ‘ಮಾರ್ಕ್’ ಟ್ರೇಲರಿನಲ್ಲಿ ನಾಯಕ ನಟ ಕಿಚ್ಚ ಸುದೀಪ್ ಅವರು ಆ್ಯಕ್ಷನ್ ಮೂಲಕ ಅಬ್ಬರಿಸಿದ್ದಾರೆ. ಟ್ರೇಲರ್ ನೋಡಿದ ಬಳಿಕ ‘ಮಾರ್ಕ್’ ಸಿನೆಮಾದ ಕಥೆ ಏನು ಎಂಬುದರ ಬಗ್ಗೆ ನೋಡುಗರಿಗೆ ಸಣ್ಣ ಸುಳಿವನ್ನೂ ನೀಡಲಾಗಿದೆ. ಮಕ್ಕಳ ಅಪಹರಣದ ಕಥೆಯ ಸುತ್ತ ‘ಮಾರ್ಕ್’ ಸಿನೆಮಾದ ಕಥಾಹಂದರ ಸಾಗಲಿದ್ದು, ಮಕ್ಕಳನ್ನು ಅಪಹರಿಸುವ ದುರುಳರಿಗೆ ‘ಮಾರ್ಕ್’ ಹೇಗೆ ಪಾಠ ಕಲಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರ. ಅದು ಸಂಪೂರ್ಣವಾಗಿ ಹೇಗಿರಲಿದೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.

‘ಮಾರ್ಕ್’ ಸಿನೆಮಾದ ಟ್ರೇಲರ್‌ ಅದ್ದೂರಿಯಾಗಿ ಮೂಡಿಬಂದಿದ್ದು, ಟ್ರೇಲರ್​ ನೋಡಿ ಮಾಸ್‌ ಆಡಿಯನ್ಸ್‌ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಮಾರ್ಕ್’ ಸಿನೆಮಾದಲ್ಲಿ ಕಿಚ್ಚ ಸುದೀಪ್ ಅವರ ಆ್ಯಕ್ಷನ್ ಅಬ್ಬರ ಜೋರಾಗಿ ಇರಲಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳಂ ಚಿತ್ರರಂಗದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಸ್ಟಾರ್ ಕಲಾವಿದರು ‘ಮಾರ್ಕ್’ ಸಿನೆಮಾದಲ್ಲಿ ನಟಿಸಿದ್ದಾರೆ. ಟ್ರೇಲರ್​​ನಲ್ಲಿ ಎಲ್ಲ ಪಾತ್ರಗಳ ಝಲಕ್ ತೋರಿಸಲಾಗಿದೆ.

‘ಮಾರ್ಕ್’ ಸಿನೆಮಾದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ಕ್ರಿಸ್‌ಮಸ್‌ಗೆ ‘ಮಾರ್ಕ್’ ಅಬ್ಬರ…

‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಮೂಲಕ ‘ಮಾರ್ಕ್’ ಸಿನೆಮಾ ನಿರ್ಮಾಣ ಆಗಿದೆ. ಈ ಮೊದಲು ಇದೇ ಕಾಂಬಿನೇಷನ್​ನಲ್ಲಿ ನಿರ್ಮಾಣ ಆಗಿದ್ದ ‘ಮ್ಯಾಕ್ಸ್’ ಸಿನೆಮಾ ಕೂಡ ಡಿಸೆಂಬರ್ 25ರಂದು ಬಿಡುಗಡೆಯಾಗಿತ್ತು. ಈ ವರ್ಷ ಡಿಸೆಂಬರ್ 25ಕ್ಕೆ ‘ಮಾರ್ಕ್’ ಸಿನೆಮಾ ಎಲ್ಲ ಕಡೆಗಳಲ್ಲಿ ಅಬ್ಬರಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಾರ್ಕ್’ ಸಿನೆಮಾ ತೆರೆಕಾಣಲಿದೆ. ‘ಮಾರ್ಕ್’ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕಾರ್ತಿಕೇಯನ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ.

Related Posts

error: Content is protected !!