Video

ಕುತೂಹಲ ಮೂಡಿಸುತ್ತ ಬಂತು ‘ಅನಂತ ಕಾಲಂ’ ಟೀಸರ್

ಹೊಸಪ್ರತಿಭೆಗಳ ‘ಅನಂತ ಕಾಲಂ’ ಟೈಟಲ್‌ ಟೀಸರ್‌ ರಿಲೀಸ್‌

ಮೈನಡುಗಿಸುವಂಥ ಕಥೆಯ ಎಳೆಯನ್ನು ಬಿಚ್ಚಿಟ್ಟ ಚಿತ್ರತಂಡ…

ಟೀಸರ್ ನಲ್ಲೇ ಸಿನಿಮಂದಿಯ ಗಮನ ಸೆಳೆದ ‘ಅನಂತ ಕಾಲಂ’

ಕೆಲವೊಂದು ಸಿನೆಮಾಗಳು ತಮ್ಮ ಕಾಸ್ಟಿಂಗ್‌ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಮೇಕಿಂಗ್‌, ಕಥಾಹಂದರದ ಮೂಲಕ ಗಮನ ಸೆಳೆಯುತ್ತವೆ. ಸದ್ಯ ಅಂಥದ್ದೇ ಒಂದು ಚಿತ್ರ ‘ಅನಂತ ಕಾಲಂ’ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ತನ್ನ ಟೈಟಲ್‌ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಅಂದಹಾಗೆ, ‘ಅನಂತ ಕಾಲಂ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಚಿತ್ರ. ಸದ್ಯ ಈ ಸಿನೆಮಾದ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ವೇಳೆ ಚಿತ್ರತಂಡ ‘ಅನಂತ ಕಾಲಂ’ ಚಿತ್ರದ ಟೈಟಲ್‌ ಟೀಸರ್‌ ಅನ್ನು ಬಿಡುಗಡೆ ಮಾಡಿದೆ.

ಸಿನೆಮಾ ವಿಚಾರದಲ್ಲಿ ಒಂದಷ್ಟು ಜಾನರ್ ಗಳು ಇದಾವೆ ಅದರಲ್ಲಿ ಒಂದೊಂದು ಜಾನರ್ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಅದರಲ್ಲೂ ಹಾರಾರ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಇಷ್ಟ ಪಡುವವರು ಹೆಚ್ಚಾಗಿದ್ದಾರೆ. ಅನಂತ ಕಾಲಂ ಸಿನಿಮಾ ಹಾರಾರ್ ಅಂತ ಹೇಳೋದಕ್ಕೆ ಆಗಲ್ಲ. ಆದ್ರೆ ಪಕ್ಕಾ ಸಸ್ಪೆನ್ಸ್- ಥ್ರಿಲ್ಲರ್ ಅನ್ನೋದನ್ನ ಊಹೆ ಮಾಡಬಹುದು. ಹಾಗಂತ ಅಂತಿಥ ಸಸ್ಪೆನ್ಸ್-ಥ್ರಿಲ್ಲರ್ ಅಲ್ಲ, ನಿಜಕ್ಕೂ ಥ್ರಿಲ್ಲಿಂಗ್ ಆಗಿನೆ ಇದೆ. ಒಮ್ಮೆ ಈ ಟೀಸರ್ ಅನ್ನ ನೀವೂ ನೋಡಿದ್ರೆ ನಿಮ್ಮ ಎದೆ ನಡುಗದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮನಸ್ಸೊಳಗೆ ಆ ದೃಶ್ಯಗಳೇ ಕೆಲ ಸೆಕೆಂಡ್ ಗಳು ಆವರಿಸಿ ಬಿಡುತ್ತವೆ. ಒಟ್ಟಾರೆ ‘ಅನಂತ ಕಾಲಂ’ ಆರಂಭದಲ್ಲಿಯೇ ಒಂದಷ್ಟು ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಿನೆಮಾ ತೆರೆಮೇಲೆ ಹೇಗೆ ಬರಲಿದೆ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

ಹೇಗಿದೆ ‘ಅನಂತ ಕಾಲಂ’ ಟೈಟಲ್‌ ಟೀಸರ್‌..?

ಟೀಸರ್ ಶುರುವಾಗುವುದು ಒಂದು ಸಿಗರೇಟ್ ಮ್ಯಾಟರ್ ನಿಂದ. ಪೊಲೀಸ್ ಬಂದ್ರು ಅಂತ ಎಲ್ಲ ಓಡುವಾಗ, ಅವನೊಬ್ಬ ಮೆಸ್ ಒಳಗಡೆ ನೋಡುತ್ತಾ ಸಿಗರೇಟ್ ಸೇದುತ್ತಾ ಇರುತ್ತಾನೆ. ಆದರೆ ಹಿಂದೆ ಯಾವುದೋ ಫೋಟೋ ಒಂದು ಸುಟ್ಟು ಕರಕಲಾಗುತ್ತಿರುತ್ತದೆ. ಸಿಗರೇಟ್ ಮುಗಿದ ಮೇಲೆ ಯಾರೋ ಕರೆದಂತೆ ಭಾಸವಾಗುತ್ತದೆ. ನೋಡಿದರೆ ಯಾರಿಲ್ಲ. ಮತ್ತದೆ ಧ್ವನಿ, ಬಲೂನ್ ತಗೋ ಎಂಬ ವ್ಯಾಘ್ರ ಧ್ವನಿ. ತೆಗೆದುಕೊಳ್ಳಲು ನಿರಾಕರಿಸಿದಾಗ ಭಯಗೊಳಿಸಿದ ಧ್ವನಿಯದು. ಹೆದರಿದ ಹೀರೋ ಬಲೂನ್ ತೆಗೆದುಕೊಂಡರೆ ನಿನ್ನ ಸಾವು ಈಗಲೇ ಬರುತ್ತೆ ಅನ್ನೋದಾ..? ಹಿಂದೆ ತಿರುಗಿ ನೋಡಿದರೆ ಆಕ್ಸಿಡೆಂಟ್ ಆಗಿಯೇ ಬಿಡುತ್ತೆ. ಅಯ್ಯಯ್ಯೋ ಇದೇನಾಯ್ತು ಎಂದುಕೊಳ್ಳುವಾಗಲೇ ಸ್ಟೋರಿ ಉಲ್ಟಾ ಆಗುತ್ತೆ. ಅದು ಅದೊಂದು ಹೊಳೆಯುವ ಖಡ್ಗದಿಂದ. ಟೀಸರ್ ಎಷ್ಟು ಭಯಗೊಳಿಸುವಂತೆ ಇದೆ ಅನ್ನೋದನ್ನ ಟೀಸರ್ ನಲ್ಲಿಯೇ ನೋಡಬೇಕು.

‘ಅನಂತ ಕಾಲಂ’ ಸಿನೆಮಾದ ಟೈಟಲ್‌ ಟೀಸರ್‌ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಹೊಸ ಪ್ರತಿಭೆಗಳ ವಿನೂತನ ಪ್ರಯತ್ನ ‘ಅನಂತ ಕಾಲಂ’

ಅಂದಹಾಗೆ, ಮೊದಲೇ ಹೇಳಿದಂತೆ ‘ಅನಂತ ಕಾಲಂ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಚಿತ್ರ. ಇಂಥದ್ದೊಂದು ಕುತೂಹಲ ಭರಿತವಾದ ಕಥೆಗೆ ನವ ನಿರ್ದೇಶಕ ವಿಜಯ್ ಮಂಜುನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರದ ಮೂಲಕ ಯುವ ಪ್ರತಿಭೆ ಪೃಥ್ವಿರಾಜ್ ಶೆಟ್ಟಿ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ‘ವಿಲಿಯಂಟ್ ವಿಷನ್ ಕ್ರಿಯೇಷನ್ಸ್’ ಬ್ಯಾನರಿನಲ್ಲಿ ಈ ಸಿನೆಮಾ  ನಿರ್ಮಾಣವಾಗುತ್ತಿದೆ. ಉಳಿದಂತೆ ಈ ಚಿತ್ರಕ್ಕೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭುವನ್ ಶಂಕರ್ ಮತ್ತು ಸನ್ಸ್ ಕಾರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವೆಂಕಟ್ ಪಿ. ಎಸ್ ಕಥೆ ಬರೆದಿದ್ದಾರೆ. ಸದ್ಯ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!