Pop Corner

ಸಿನೆಮಾಕ್ಕೆ ಎಂಟ್ರಿ ಕೊಡಲು ಸ್ಟಾರ್ಟಪ್‌ ಉದ್ಯಮಿ ಅನಿಲ್‌ ಶೆಟ್ಟಿ ರೆಡಿ

ಹೀರೋ ಆಗೋಕೆ ವಾಣಿಜ್ಯೋದ್ಯಮಿ, ಯುವ ರಾಜಕಾರಣಿ ಅನಿಲ್ ಶೆಟ್ಟಿ ತಯಾರಿ

ಚಿತ್ರೋದ್ಯಮದಲ್ಲೂ ಛಾಪನ್ನು ಮೂಡಿಸಲು ಅನಿಲ್‌ ಸಿದ್ಧತೆ

ಶೀಘ್ರದಲ್ಲಿಯೇ ಹೊಸ ಸಿನೆಮಾ ಘೋಷಣೆ

ಸ್ಟಾರ್ಟಪ್ ಉದ್ಯಮಿ ಆಗಿರುವುದರ ಜೊತೆಗೆ ರಾಜಕಾರಣದಲ್ಲಿ ಸಹ ಸಕ್ರಿಯ ರಾಗಿರುವಂತಹ ಅನಿಲ್ ಬೆಂಗಳೂರು ನಗರದ ಯುವ ನಾಯಕರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಅನಿಲ್ ಅವರು ಚಿತ್ರರಂಗಕ್ಕೆ ಸೇರುವ ತಮ್ಮ ಬಹಳ ದಿನಗಳ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ.

ತಮ್ಮ ಮೊದಲ ಚಿತ್ರದಲ್ಲೇ ಅನಿಲ್ ನಟನಾಗಿ ಮಾತ್ರವಲ್ಲದೆ, ಬರಹಗಾರರಾಗಿಯೂ ಸಹ ಗುರುತಿಸಿಕೊಳ್ಳುತ್ತಿರುವುದು ವಿಶೇಷ. ಚಲನಚಿತ್ರಗಳಲ್ಲಿ ಬಹು ಕಾಲದಿಂದ ಆಸಕ್ತಿ ಹೊಂದಿದ್ದ ಇವರಿಗೆ, ಕನ್ನಡ ಚಿತ್ರರಂಗದ ಹೆಸರಾಂತ ವ್ಯಕ್ತಿಯೊಬ್ಬರು ನಟನೆಯತ್ತ ಗಮನ ಹರಿಸುವಂತೆ ವರ್ಷಗಳ ಹಿಂದೆಯೇ ಪ್ರೇರೇಪಿಸಿದ್ದರು. ಈವರೆಗೂ ವ್ಯವಹಾರ, ರಾಜಕಾರಣ ಹಾಗೂ ಸಮಾಜಸೇವೆಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದ ಅನಿಲ್, ಇದೀಗ ಚಿತ್ರರಂಗದ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.

ಸಿನೆಮಾ ಕ್ಷೇತ್ರದ ಜೊತೆಗೆ, ಅನಿಲ್ ಶೆಟ್ಟಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು, ಕ್ರಿಕೆಟಿಗ ಕೆ. ಎಲ್. ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರೊಂದಿಗೆ ‘ಡ್ರಿಪ್ ಪ್ರಾಜೆಕ್ಟ್’ ಮತ್ತು ‘ಮೆಟಮನ್’ ಎನ್ನುವ ಎರಡು ಫ್ಯಾಷನ್ ಬ್ರಾಂಡ್‌ಗಳನ್ನು ಸ್ಥಾಪಿಸುವುದರಿಂದ ಹಿಡಿದು, ಬೇರೆ ಅನೇಕ ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಬಂಡವಾಳ ಸಂಗ್ರಹಿಸುವಲ್ಲಿ ಸಹ ಸಹಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ತಂಡದ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಚಲನಚಿತ್ರರಂಗದ ಟಾಪ್ ಟ್ಯಾಲೆಂಟ್‌ಗಳ ಜೊತೆಗೆ ಕೆಲಸ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Posts

error: Content is protected !!