Video

ಉಪೇಂದ್ರ ಬರ್ತ್​ಡೇ ಸ್ಪೆಷಲ್‌; ‘ಭಾರ್ಗವ’ ಟೀಸರ್‌ ರಿಲೀಸ್‌

ಉಪ್ಪಿ ಅಭಿಮಾನಿಗಳಿಗೆ ‘ಭಾರ್ಗವ’ನ ಸ್ಪೆಷಲ್‌ ಗಿಫ್ಟ್‌

ಹುಟ್ಟುಹಬ್ಬಕ್ಕೆ ‘ಭಾರ್ಗವ’ ಚಿತ್ರತಂಡದ ಕಡೆಯಿಂದ ಟೀಸರ್‌ ಬಿಡುಗಡೆ

ಮತ್ತೊಂದು ಮಾಸ್‌ ಗೆಟಪ್‌ನಲ್ಲಿ ಉಪ್ಪಿ ಎಂಟ್ರಿ 

ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ನಟ ಕಂ ನಿರ್ದೇಶಕ ಉಪೇಂದ್ರ ಇದೇ 18 ಸೆಪ್ಟೆಂಬರ್‌ 2025ರಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಉಪೇಂದ್ರ ಅವರ ಜನ್ಮದಿನಕ್ಕೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗ ಗಣ್ಯರು ಒಂದೆಡೆ ಶುಭ ಹಾರೈಸುತ್ತಿದ್ದರೆ, ಮತ್ತೊಂದೆಡೆ, ಉಪೇಂದ್ರ ಅವರ ಜನ್ಮದಿನದ ಪ್ರಯುಕ್ತ ಅವರ ಮುಂಬರುವ ಸಿನೆಮಾ ‘ಭಾರ್ಗವ’ ನ ಟೀಸರ್‌ ಕೂಡ ಬಿಡುಗಡೆಯಾಗಿದೆ. ಹೌದು, ಉಪೇಂದ್ರ ಅವರ ಜನ್ಮದಿನದ ಪ್ರಯುಕ್ತ ಉಪೇಂದ್ರ ಅಭಿನಯದ ಮುಂಬರುವ ‘ಭಾರ್ಗವ’ ಸಿನೆಮಾದ ಮೊದಲ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಹೇಗಿದೆ ‘ಭಾರ್ಗವ’ ಟೀಸರ್‌..?

‘ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ಭಾರ್ಗವ’ ಸಿನೆಮಾದ ಮೊದಲ ಟೀಸರ್‌ ಬಿಡುಗಡೆಯಾಗಿದೆ. ನಟ ವಸಿಷ್ಟ ಸಿಂಹ ಅವರ ಕಂಚಿನ ಕಂಠದಲ್ಲಿ ‘ಭಾರ್ಗವ’ ಸಿನೆಮಾದ ಟೀಸರ್‌ ಅನಾವರಣವಾಗಿದೆ. ಟೀಸರ್‌ನಲ್ಲಿ ನಾಯಕ ನಟ ಉಪೇಂದ್ರ ಔಟ್‌ ಅಂಡ್‌ ಔಟ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಭಾರ್ಗವ’ ಸಿನೆಮಾವನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ಎಂ. ಬಿ ಬಾಬು (ಸೂರಪ್ಪ ಬಾಬು) ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಭಾರ್ಗವ’ ಸಿನೆಮಾದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

ಉಪೇಂದ್ರ ಅಭಿನಯದ ‘ಭಾರ್ಗವ’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಸದ್ಯ ‘ಭಾರ್ಗವ’ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಉಪೇಂದ್ರ ‘ಭಾರ್ಗವ’ನ ಅವತಾರದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ. ಇನ್ನು ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಭಾರ್ಗವ’ ಸಿನೆಮಾದ ಟೀಸರ್‌ ಉಪ್ಪಿ ಅಭಿಮಾನಿಗಳ ಗಮನವನ್ನು ಒಂದಷ್ಟು ಸೆಳೆಯಲು ಯಶಸ್ವಿಯಾಗಿದೆ. ಉಳಿದಂತೆ ‘ಭಾರ್ಗವ’ ತೆರೆಮೇಲೆ ಹೇಗಿರಲಿದ್ದಾನೆ? ಎಂಬ ಕುತೂಹಲಕ್ಕೆ ಸಿನೆಮಾ ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.

Related Posts

error: Content is protected !!