Video

ಟೀಸರ್‌ನಲ್ಲಿ ‘ವೃಷಭ’ ರಾಜನಾಗಿ ಮೋಹನ್ ಲಾಲ್ ಎಂಟ್ರಿ

ಬಹು ನಿರೀಕ್ಷಿತ ‘ವೃಷಭ’ ಸಿನೆಮಾದ ಟೀಸರ್‌ ಬಿಡುಗಡೆ

ರಾಜನಾಗಿ ತೆರೆಮೇಲೆ ರಾಯಲ್‌ ಲುಕ್‌ನಲ್ಲಿ ಕಾಣಿಸಿಕೊಂಡ ಮೋಹನ್ ಲಾಲ್

ಮೊದಲ ಟೀಸರ್‌ನಲ್ಲೇ ಅಭಿಮಾನಿಗಳ ಗಮನ ಸೆಳೆದ ‘ವೃಷಭ’

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಬಹು ನಿರೀಕ್ಷಿತ ‘ವೃಷಭ’ ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಸುಮಾರು 1 ನಿಮಿಷ 43 ಸೆಕೆಂಡ್ ಇರುವ ‘ವೃಷಭ’ ಸಿನೆಮಾದ ಮೊದಲ ಟೀಸರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇನ್ನು ‘ವೃಷಭ’ ಸಿನೆಮಾದಲ್ಲಿ ಮೋಹಲ್ ಲಾಲ್ ಎಂಟ್ರಿ ಭರ್ಜರಿಯಾಗಿದ್ದು, ಟೀಸರ್‌ನಲ್ಲಿ ಮೋಹನ್‌ ಲಾಲ್‌ ರಾಜನಾಗಿ ಸಖತ್‌ ರಾಯಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ವೃಷಭ’ ಸಿನೆಮಾಕ್ಕೆ ಆಂಥೋನಿ ಸ್ಯಾಮ್ಸನ್ ಛಾಯಾಗ್ರಹಣವಿದ್ದು, ಕೆ. ಎಂ. ಪ್ರಕಾಶ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ವೃಷಭ’ ಸಿನೆಮಾದ ಹಾಡುಗಳಿಗೆ ಸ್ಯಾಮ್ ಸಿ. ಎಸ್ ಸಂಗೀತವಿದ್ದು ಟೀಸರ್‌ನಲ್ಲಿ ಮೇಕಿಂಗ್‌ ಮತ್ತು ಹಿನ್ನೆಲೆ ಸಂಗೀತ ಹೈಲೆಟ್ ಆಗಿ ಕಾಣುತ್ತಿದೆ. ನಿರ್ದೇಶಕ ನಂದ ಕಿಶೋರ್ ಕಥೆ ಬರೆದು ‘ವೃಷಭ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮಿಂಚಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸರ್ಮಜಿತ್, ಬಹು ನಿರೀಕ್ಷಿತ ‘ವೃಷಭ’ ಚಿತ್ರದಲ್ಲಿ ಮೋಹನ್ ಲಾಲ್ ಮಗನಾಗಿ ಅಭಿನಯಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

‘ವೃಷಭ’ ಚಿತ್ರದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ದೀಪಾವಳಿಕೆ ಬಹು ನಿರೀಕ್ಷಿತ ‘ವೃಷಭ’ ತೆರೆಗೆ

ಬಹು ನಿರೀಕ್ಷಿತ ‘ವೃಷಭ’ ಚಿತ್ರವನ್ನು ಇದೇ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ‘ಕನೆಕ್ಟ್ ಮೀಡಿಯಾ’, ‘ಬಾಲಾಜಿ ಟೆಲಿಫಿಲ್ಮ್ಸ್’ ಮತ್ತು ‘ಅಭಿಷೇಕ್ ಎಸ್. ವ್ಯಾಸ್
ಸ್ಟುಡಿಯೋಸ್’ ಜೊತೆಗೂಡಿ ಪ್ರಸ್ತುತಪಡಿಸುತ್ತಿರುವ ‘ವೃಷಭ’ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್. ಕಪೂರ್, ಸಿ. ಕೆ. ಪದ್ಮಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್. ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ‘ವೃಷಭ’ ಚಿತ್ರವನ್ನು, ಹಿಂದಿ ಮತ್ತು ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ. ಇದೇ ದೀಪಾವಳಿ ಹಬ್ಬದ ವೇಳೆಗೆ ‘ವೃಷಭ’ ಚಿತ್ರ ತೆರೆಗೆ ಬರಲಿದ್ದು, ಚಿತ್ರದ ಬಗ್ಗೆ ಇರುವ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.

Related Posts

error: Content is protected !!