Video

‘ಗಣಿ’ಯ ಮೊದಲ ಮಧುರ ಗೀತೆ ಬಿಡುಗಡೆ…

‘ನಮ್ ಗಣಿ ಬಿ. ಕಾಂ‌ ಪಾಸ್-2’ ಸಿನೆಮಾದ ಮೊದಲ ಹಾಡು ರಿಲೀಸ್…

‘ನನ್ನ ಜೀವ ನೀನು…’ ಎಂಬ ಮೆಲೋಡಿ ಗೀತೆಯಲ್ಲಿ ಮಿಂಚಿದ ಅಭಿಷೇಕ್ ಶೆಟ್ಟಿ-ಹೃತಿಕಾ ಶ್ರೀನಿವಾಸ್‌

ಅಭಿಷೇಕ್‌ ಶೆಟ್ಟಿ ನಟನೆ, ನಿರ್ದೇಶನದ ಹೊಸಚಿತ್ರ

‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ಅಭಿಷೇಕ್‌ ಶೆಟ್ಟಿ.‌ ಇದೀಗ ನಟ ಕಂ ನಿರ್ದೇಶಕ ಅಭಿಷೇಕ್ ಇದೇ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್ ಅನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಹೌದು, ‘ನಮ್ ಗಣಿ ಬಿ. ಕಾಂ ಪಾಸ್’ ಸಿನೆಮಾದ ಸೀಕ್ವೆಲ್‌ ಆಗಿರುವ ‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರದ ಬಹುತೇಕ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ‘ನಮ್ ಗಣಿ ಬಿ. ಕಾಂ. ಪಾಸ್-2’ ಸಿನೆಮಾದ ಮೊದಲ ಹಾಡು ಅನಾವರಣಗೊಂಡಿದೆ.

‘ನಮ್ ಗಣಿ’ಯ ಮೊದಲ ಮೆಲೋಡಿ ಗೀತೆ…

ಅಂದಹಾಗೆ, ‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರದ ಮೊದಲ ಗೀತೆ ‘ಅಭಿಷೇಕ್ ಶೆಟ್ಟಿ‌ ಫಿಲ್ಮಸ್’ ಯೂ-ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ‘ನನ್ನ ಜೀವ ನೀನು… ನನಗೆ ಜಗವು ನೀನು…’ ಎಂಬ ಸಾಲುಗಳಿಂದ ಶುರುವಾಗುವ ಈ ಮೆಲೋಡಿ ಹಾಡಿಗೆ ಪ್ರಮೋದ್‌ ಮರವಂತೆ ಸಾಹಿತ್ಯ ಬರೆದಿದ್ದಾರೆ. ಚೇತನ್ ಗಂಧರ್ವ ಹಾಗೂ ಹರ್ಷಿಕಾ ದೇವನಾಥ್ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ಆನಂದ್ ರಾಜವಿಕ್ರಂ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಈ ಮೆಲೋಡಿ ಹಾಡಿನಲ್ಲಿ ನಾಯಕ ನಟ ಅಭಿಷೇಕ್ ಶೆಟ್ಟಿ ಹಾಗೂ ನಾಯಕಿ ಹೃತಿಕಾ ಶ್ರೀನಿವಾಸ್‌ ಜೋಡಿಯಾಗಿ ಮಿಂಚಿದ್ದಾರೆ. ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರದ ಮೊದಲ ಮೆಲೋಡಿ ಗೀತೆ ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿದ್ದು, ಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಹೊಸವರ್ಷದ ಆರಂಭದಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.

‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರದ ‘ನನ್ನ ಜೀವ ನೀನು…’ ಎಂಬ ಮೆಲೋಡಿ ಗೀತೆಯ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

2026ರ ಫೆಬ್ರವರಿಗೆ ‘ನಮ್ ಗಣಿ ಬಿ. ಕಾಂ ಪಾಸ್-2’ ತೆರೆಗೆ…

‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರವನ್ನು ಬಿ. ಎಸ್. ಪ್ರಶಾಂತ್ ಶೆಟ್ಟಿ ಹಾಗೂ ಪ್ರಶಾಂತ್ ರೆಡ್ಡಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಸುಮಂತ್ ಆಚಾರ್ಯ ಕ್ಯಾಮೆರಾ ಹಿಡಿಯುತ್ತಿದ್ದಾರೆ. ವಿಜೇತ್ ಚಂದ್ರ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ನಮ್ ಗಣಿ ಬಿ. ಕಾಂ ಪಾಸ್-2’ ಚಿತ್ರದ ಹಾಡುಗಳಿಗೆ ಆನಂದ್ ರಾಜವಿಕ್ರಮ್‌ ಸಂಗೀತ ಸಂಯೋಜನೆಯಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ 2026ರ ಫೆಬ್ರವರಿ 12ಕ್ಕೆ ‘ನಮ್ ಗಣಿ ಬಿ. ಕಾಂ ಪಾಸ್-2’ ಸಿನೆಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!