Video

‘ಟಾಕ್ಸಿಕ್’ ಲೇಡಿಸ್ ಸ್ಪೆಷಲ್‌ ಟೀಸರ್ ಔಟ್!

‘ಟಾಕ್ಸಿಕ್’ ಚಿತ್ರದ ಹೊಸ ಟೀಸರ್ ಬಿಡುಗಡೆ

‘ಟಾಕ್ಸಿಕ್’ ಹೊಸ ಟೀಸರಿನಲ್ಲಿ ಹೀರೋಯಿನ್ಸ್‌ ಕ್ಯಾರೆಕ್ಟರ್‌ ಹೈಲೈಟ್ಸ್‌…

ಟೀಸರಿನಲ್ಲಿ ಪಂಚ ನಾಯಕಿಯರ ಪರಿಚಯ

1 ಜು. 2026, ಬೆಂಗಳೂರು: ನಟ ‘ರಾಕಿಂಗ್‌ ಸ್ಟಾರ್’ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಮತ್ತೊಂದು ಅಪ್ಡೇಟ್‌ ಹೊರಬಂದಿದೆ. ಅದೇನೆಂದರೆ, ಚಿತ್ರದ ಲೇಡೀಸ್ ಟೀಸರ್. ಹೌದು ಇಂದು (ಜುಲೈ 1) ‘ಟಾಕ್ಸಿಕ್’ ಸಿನೆಮಾದ ಹೊಸ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನ ಆರಂಭದಲ್ಲಿಯೇ ಚಿತ್ರತಂಡ ನೋಡುಗರಿಗೆ ಎಚ್ಚರಿಕೆಯನ್ನು ನೀಡಿ ಟೀಸರ್‌ ತೋರಿಸಿದೆ! ಮಕ್ಕಳು ಈ ಟೀಸರ್​ ನೋಡಬೇಡಿ, ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ ಎಂದು ಪೋಷಕರಿಗೆ, ವಯಸ್ಸಾದವರು ನಿಮ್ಮ ರಿಸ್ಕ್​​ನಲ್ಲಿ ನೋಡಿ ಎಂಬ ಎಚ್ಚರಿಕೆಯನ್ನು ‘ಟಾಕ್ಸಿಕ್‌’ ಸಿನೆಮಾದ ಟೀಸರಿನಲ್ಲಿ ಆರಂಭದಲ್ಲಿಯೇ ನೀಡಲಾಗಿದೆ. ಸದ್ಯ ಬಿಡುಗಡೆ ಆಗಿರುವ ‘ಟಾಕ್ಸಿಕ್‌’ ಟೀಸರ್​​ನಲ್ಲಿ ಸಿನೆಮಾದಲ್ಲಿ ಅಭಿನಯಿಸಿರುವ ನಾಯಕಿಯರ ಪಾತ್ರಗಳ ಸಣ್ಣ ಝಲಕ್ ಅನ್ನು ಹೈಲೈಟ್‌ ಮಾಡಿ ತೋರಿಸಲಾಗಿದೆ.

‘ಟಾಕ್ಸಿಕ್’ ಸಿನೆಮಾದ ಟೀಸರಿನಲ್ಲಿ ಹೀರೋಯಿನ್ಸ್‌ ಹೈಲೈಟ್ಸ್‌!

ಹೌದು, ‘ಟಾಕ್ಸಿಕ್’ ಟೀಸರಿನಲ್ಲಿ ಸಿನೆಮಾದ ನಾಯಕಿಯರು, ಅವರ ಪಾತ್ರದ ಹೈಲೆಟ್ ಮಾಡಲಾಗಿದೆ. ಟೀಸರ್​​ನಲ್ಲಿ ‘ಟಾಕ್ಸಿಕ್’ ಸಿನೆಮಾನಲ್ಲಿ ನಟಿಸಿರುವ ಐದು ನಾಯಕಿಯರು ಸಖತ್ ಪವರ್​ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಸಿನೆಮಾನಲ್ಲಿ ನಟಿಸಿರುವ ಐವರು ನಾಯಕಿಯರ ವಿಶೇಷ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಯಶ್ ಅವರಂತೆಯೇ ಸಿನಿಮಾದ ನಾಯಕಿಯರ ಪಾತ್ರಗಳು ಸಹ ಬಲು ಪವರ್​​ಫುಲ್ ಆಗಿವೆ ಎಂಬುದನ್ನು ನಿರ್ದೇಶಕಿ ಗೀತು ಮೋಹನ್‌ ದಾಸ್‌ ಟೀಸರಿನಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

ಇದೀಗ ಬಿಡುಗಡೆಯಾಗಿರುವ ‘ಟಾಕ್ಸಿಕ್’ ಸಿನೆಮಾದ ಹೊಸ ಟೀಸರ್​​ನಲ್ಲಿ ಸಿನೆಮಾನಲ್ಲಿ ನಟಿಸಿರುವ ನಾಯಕಿಯರಾದ ಕಿಯಾರಾ ಅಡ್ವಾಣಿಯ ಸೌಂದರ್ಯ, ನಯನತಾರಾ ಅವರ ಸಾಹಸ, ರುಕ್ಮಿಣಿ ವಸಂತ್ ಪಾತ್ರದ ಧೈರ್ಯ, ಹುಮಾ ಅವರ ಪಾತ್ರದ ತಂತ್ರ, ತಾರಾ ಸುತಾರಿಯಾ ಪಾತ್ರದ ಬಿಂದಾಸ್ ತನಗಳನ್ನು ಟೀಸರ್​​ನಲ್ಲಿ ತೋರಿಸಲಾಗಿದೆ. ‘ಟಾಕ್ಸಿಕ್’ ಸಿನೆಮಾದ ಕಥೆಯ ಪ್ರಧಾನ ಅಂಶ ಯಶ್ ವರ್ಸಸ್‌ ನಾಯಕಿಯರು ಎಂಬುದನ್ನು ಸಹ ಈಗ ಬಿಡುಗಡೆ ಆಗಿರುವ ಟೀಸರ್ ನಲ್ಲಿ ತೋರಿಸಲಾಗಿದೆ.

ಟೀಸರ್​​ನಲ್ಲಿ ಕೆಲವು ದೃಶ್ಯಗಳಲ್ಲಿ ಯಶ್, ನಾಯಕಿಯರೊಡನೆ ಚೆಲ್ಲಾಟ ಆಡುತ್ತಿದ್ದಾರೆ. ಇನ್ನು ಕೆಲವು ದೃಶ್ಯಗಳಲ್ಲಿ ನಾಯಕಿಯರು ಯಶ್ ಅವರನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾರೆ. ಟೀಸರ್​ನ ಕೊನೆಯ ದೃಶ್ಯದಲ್ಲಂತೂ ಹಲವು ಮಹಿಳೆಯರು ಒಂದೇ ರೀತಿ ಬಟ್ಟೆ ತೊಟ್ಟು ಯಶ್ ವಿರುದ್ಧ ಫೈಟಿಂಗ್ ಮಾಡುತ್ತಿದ್ದಾರೆ. ಯಶ್, ನಿರ್ದಯವಾಗಿ ಒಬ್ಬ ಮಹಿಳೆಯ ಬಾಯಿಗೆ ಬಂದೂಕಿಟ್ಟು ಗುಂಡು ಹಾರಿಸುವ ದೃಶ್ಯವೂ ಇದೆ. ಒಟ್ಟಾರೆ, ಈ ಸಿನಿಮಾ, ಮಹಿಳೆ ವರ್ಸಸ್‌ ಪುರುಷ ಇದ್ದಂತಿದೆ.

‘ಟಾಕ್ಸಿಕ್’ ಸಿನೆಮಾದ ಲೇಡಿಸ್‌ ಅಂಡ್‌ ಲೇಡಿಸ್‌ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ಟಾಕ್ಸಿಕ್’ ಸಿನೆಮಾದಲ್ಲಿ ಬರೋಬ್ಬರಿ ಐವರು ನಾಯಕಿಯರು ನಟಿಸಿದ್ದಾರೆ. ಸಿನೆಮಾನಲ್ಲಿ ನಯನತಾರಾ ಗಂಗಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ, ಕಿಯಾರಾ ಅಡ್ವಾಣಿ ನಾಡಿಯಾ ಹೆಸರಿನ ಪಾತ್ರ, ತಾರಾ ಸುತಾರಿಯಾ ರೆಬೆಕಾ ಹೆಸರಿನ ಪಾತ್ರ, ಹುಮಾ ಖುರೇಷಿ ಎಲಿಜಬೆತ್ ಹೆಸರಿನ ಪಾತ್ರ ಮತ್ತು ರುಕ್ಮಿಣಿ ವಸಂತ್ ಮೆಲಿಸಾ ಹೆಸರಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರುಗಳು ಮಾತ್ರವೇ ಅಲ್ಲದೆ, ಕೆಲ ವಿದೇಶಿ ನಟಿಯರು ಸಹ ‘ಟಾಕ್ಸಿಕ್’ ಸಿನೆಮಾದ  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನೆಮಾದ ಕಥೆ ನಾಯಕಿ ಪ್ರಧಾನವೇ ಆಗಿದೆ ಎನ್ನಲಾಗುತ್ತಿದ್ದು, ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೇಕಿದೆ.

Related Posts

error: Content is protected !!