Video

ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ರಿಲೀಸ್

ಹೊರಬಂತು ‘ದಿ ರೈಸ್ ಆಫ್ ಅಶೋಕ’ ಟ್ರೇಲರ್

ಮಾಸ್‌ ಆಡಿಯನ್ಸ್‌ ಗಮನ ಸೆಳೆಯುವಂಥ ಆಕ್ಷನ್‌-ಥ್ರಿಲ್ಲರ್‌ ಟ್ರೇಲರ್‌ ಝಲಕ್‌…!

ಟ್ರೇಲರ್‌ ಮೂಲಕ ‘ದಿ ರೈಸ್ ಆಫ್ ಅಶೋಕ’ ಪ್ರಚಾರಕ್ಕೆ ಚಾಲನೆ

ನಟ ಸತೀಶ್ ನೀನಾಸಂ ಅಭಿನಯದ ಹೊಸಚಿತ್ರ ‘ದಿ ರೈಸ್ ಆಫ್ ಅಶೋಕ’ ಇದೇ 2026ರ ಫೆಬ್ರವರಿ 27ರಂದು ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಸದ್ಯ ‘ದಿ ರೈಸ್‌ ಆಫ್‌ ಅಶೋಕ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರಾದ ಕ್ರೇಜಿಸ್ಟಾರ್‌ ವಿ. ರವಿಚಂದ್ರನ್​, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್, ಶಿವರಾಜ್ ಕೆ. ಆರ್. ಪೇಟೆ ಮೊದಲಾದವರು ‘ದಿ ರೈಸ್‌ ಆಫ್‌ ಅಶೋಕ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹೇಗಿದೆ ‘ದಿ ರೈಸ್‌ ಆಫ್‌ ಅಶೋಕ’ ಟ್ರೇಲರ್‌..?

ಸದ್ಯ ಬಿಡುಗಡೆಯಾಗಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್‌ ಜಾತಿ ಮತ್ತು ವರ್ಗ ಸಂಘರ್ಷದ ಕಥೆಯನ್ನು ತೆರೆಮೇಲೆ ಹೇಳುವಂತಿದೆ. ಹಳ್ಳಿಯ ಗ್ರಾಮೀಣ ಪರಿಸರದಲ್ಲಿ ಶೋಷಿತ ಸಮುದಾಯ ಮತ್ತು ಮೇಲ್ವರ್ಗದ ಸಂಘರ್ಷದ ಕಥೆಯ ಸಣ್ಣ ಝಲಕ್‌ ಅನ್ನು ‘ದಿ ರೈಸ್‌ ಆಫ್‌ ಅಶೋಕ’ ಟ್ರೇಲರಿನಲ್ಲಿ ತೆರೆದಿಡಲಾಗಿದೆ. ನಾಯಕ ನಟ ಸತೀಶ್‌ ನೀನಾಸಂ ಚಿತ್ರದಲ್ಲಿ ಬಡ ಜನಗಳ ಪರವಾಗಿ ಹೋರಾಡುವ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸತೀಶ್​ಗೆ ಜೋಡಿಯಾಗಿ ‘ಕಾಂತಾರ’ ಸಿನೆಮಾ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ  ಬಿ. ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ‘ವಿಕ್ರಮ್ ವೇದ’ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ಮೊದಲಾದ ಕಲಾವಿದರ ಬೃಹತ್‌ ತಾರಾಬಳಗವೇ ಚಿತ್ರದಲ್ಲಿದೆ.

‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ 2026ರ ಫೆ. 27ಕ್ಕೆ ‘ದಿ ರೈಸ್ ಆಫ್ ಅಶೋಕ’ ತೆರೆಗೆ

ಅಂದಹಾಗೆ, ಇದೇ 2026ರ ಫೆಬ್ರವರಿ 27 ರಂದು ‘ದಿ ರೈಸ್ ಆಫ್ ಅಶೋಕ’ ಚಿತ್ರ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ‘ದಿ ರೈಸ್ ಆಫ್ ಅಶೋಕ’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ‘ವೃದ್ಧಿ ಕ್ರಿಯೇಷನ್’ ಹಾಗೂ ‘ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್’ ನಡಿ ‘ದಿ ರೈಸ್ ಆಫ್ ಅಶೋಕ’ ಚಿತ್ರ ನಿರ್ಮಾಣವಾಗಿ ಮೂಡಿ‌ಬರುತ್ತಿದೆ. ಚಿತ್ರಕ್ಕೆ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ನಿರ್ಮಾಪಕರಾಗಿ ಬಂಡವಾಳ ಹಾಕಿದ್ದಾರೆ.

Related Posts

error: Content is protected !!