Pop Corner

‘ಮಿರಾಯ್’ನಲ್ಲಿ ಸೂಪರ್‌ ಯೋಧನಾಗಿ ತೇಜ್‌ ಸಜ್ಜಾ ಎಂಟ್ರಿ

ಆಕ್ಷನ್‌ ಪ್ಯಾಕ್ಡ್‌ ‘ಮಿರಾಯ್‌’ ಟೀಸರ್‌ನಲ್ಲಿ ತೇಜ್‌ ಸಜ್ಜಾ ಎಂಟ್ರಿ…!

‘ಹನುಮಾನ್‌’ ಸೂಪರ್‌ ಹಿಟ್‌ ಬಳಿಕ ತೇಜ್‌ ಸಜ್ಜಾ ನಟಿಸುತ್ತಿರುವ ಮತ್ತೊಂದು ಚಿತ್ರ

ಮತ್ತೊಮ್ಮೆ ಸೂಪರ್‌ ಹೀರೋ ಆಗಿ ಅಬ್ಬರ

ತೆಲುಗಿನ ಯುವನಟ ತೇಜ್‌ ಸಜ್ಜಾ ‘ಹನುಮಾನ್‌’ ಸೂಪರ್‌ ಹಿಟ್‌ ಬಳಿಕ ನಟಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನೆಮಾ ‘ಮಿರಾಯ್’.‌ ‘ಹನುಮಾನ್‌’ನಲ್ಲಿ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ತೇಜ್‌ ಮತ್ತೊಮ್ಮೆ ಸೂಪರ್‌ ಹೀರೋ ಆಗಿ ಅಬ್ಬರಿಸಿದ್ದಾರೆ. ತೇಜ್‌ ಸಜ್ಜಾ ನಟನೆಯ ‘ಮಿರಾಯ್‌’ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಆಕ್ಷನ್‌ ಪ್ಯಾಕ್ಡ್‌ ಥ್ರಿಲ್ಲಿಂಗ್‌ ಟೀಸರ್‌ ಸಿನಿರಸಿಕರಿಗೆ ಕಿಕ್‌ ಕೊಟ್ಟಿದೆ. ಸೂಪರ್‌ ಯೋಧನಾಗಿ ತೇಜ್‌ ಅಭಿನಯಿಸಿದ್ದು, ಖಳನಾಯಕನಾಗಿ ಮನೋಚ್‌ ಮಂಚು ತೊಡೆ ತಟ್ಟಿದ್ದಾರೆ. ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಗೆ ಆಧುನಿಕ ಸಾಹಸದ ಟಚ್‌ ಕೊಟ್ಟು ‘ಮಿರಾಯ್‌’ ಟೀಸರ್‌ ಕಟ್‌ ಮಾಡಲಾಗಿದೆ.

‘ಮಿರಾಯ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2D ಮತ್ತು 3D ಫಾರ್ಮ್ಯಾಟ್ ಅಲ್ಲಿಯೇ ರಿಲೀಸ್ ಆಗುತ್ತಿದೆ. ಅತಿ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಇದೇ ವರ್ಷ ಆಗಸ್ಟ್-1 ರಂದು ‘ಮಿರಾಯ್’ 8 ಭಾಷೆಯಲ್ಲಿಯೇ ತೆರೆಗೆ ಬರಲಿದೆ. ಈ ಮೂಲಕ ಸಿನಿಮಾದ ನಾಯಕ ತೇಜ್ ಸಜ್ಜಾ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಹೊಸ ಅನುಭವ ಕೊಡಲು ಬರ್ತಿದ್ದಾರೆ.

‘ಮಿರಾಯ್’ ಸಿನೆಮಾದ ಮೂಲಕ ನಾಯಕ ನಟ ತೇಜ್ ಸಜ್ಜಾ ಮತ್ತೆ ಸೂಪರ್ ಹೀರೋ ಆಗಿಯೇ ಬರ್ತಿದ್ದಾರೆ. ‘ಮಿರಾಯ್’ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ಯಡಿ ಟಿ. ಜಿ. ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧಾ ಪಾತ್ರದಲ್ಲಿ ತೇಜ್ ಸಜ್ಜಾ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ಗಟ್ಟಮ್ನೇನಿ ‘ಮಿರಾಯ್‌’ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Related Posts

error: Content is protected !!