‘ಕ್ವೀನ್ ಪ್ರೀಮಿಯರ್ ಲೀಗ್’ 2.0 ಲೋಗೋ ಬಿಡುಗಡೆ
QPL-2.0 ಲೋಗೋ ಲಾಂಚ್ ಗೆ ಮೋಹಕತಾರೆ ರಮ್ಯಾ ಸಾಥ್
ಮತ್ತೆ ಬಂದಿದೆ ‘ಕ್ವೀನ್ ಪ್ರೀಮಿಯರ್ ಲೀಗ್’ (QPL)
ಎರಡನೇ ಆವೃತ್ತಿಗೆ ಕಾಲಿಟ್ಟ ‘ಕ್ವೀನ್ ಪ್ರೀಮಿಯರ್ ಲೀಗ್’
‘ಕ್ವೀನ್ ಪ್ರೀಮಿಯರ್ ಲೀಗ್’ ಮತ್ತೆ ಬಂದಿದೆ. ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಬ್ಯಾಟ್ ಬಾಲು ಹಿಡಿದು ಮತ್ತೆ ಅಖಾಡಕ್ಕೆ ಇಳಿಯಲು ರೆಡಿಯಾಗುತ್ತಿದ್ದಾರೆ. ‘ಕ್ರಿಯೇಟಿವ್ ಹೆಡ್’ ಕಂಪನಿ ಈ ಪಂದ್ಯಾವಳಿಗೆ ವೇದಿಕೆ ಕಲ್ಪಿಸುತ್ತಿದೆ.
‘ಕ್ವೀನ್ ಪ್ರೀಮಿಯರ್ ಲೀಗ್’ 2.0 ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ‘ಸ್ಯಾಂಡಲ್ ವುಡ್ ಮೋಹಕತಾರೆ’ ರಮ್ಯಾ ಅವರು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಹೆಣ್ಮಕ್ಕಳಿಗೆ ಶುಭಾಶಯ ತಿಳಿಸಿದರು. ಬಾಲಿವುಡ್ ನಟಿ ಎಲಿ ಅವ್ರಾಮ್, ನಟರಾದ ನಿರೂಪ್ ಭಂಡಾರಿ, ಅನಿರುದ್ಧ್, ಧನ್ಯಾ ರಾಮ್ ಕುಮಾರ್, ಆಶಾ ಭಟ್, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ರಚನಾ ಇಂದರ್ ಕಾರ್ಯಕ್ರಮ ಮತ್ತಷ್ಟು ಮೆರಗು ನೀಡಿದರು.
ಲೋಗೋ ಬಿಡುಗಡೆ ಮಾಡಿದ ರಮ್ಯಾ
ಲೋಗೋ ಬಿಡುಗಡೆ ಬಳಿಕ ನಟಿ ರಮ್ಯಾ ಮಾತನಾಡಿ, ‘ನಾನು ಇಂಡಸ್ಟ್ರಿಗೆ ಬಂದು ಇಪ್ಪತ್ತು ವರ್ಷ ಆಗಿದೆ. ಒಂದು ಸರಿ ಯಾರು ಕೂಡ ಈ ರೀತಿ ಕಾರ್ಯಕ್ರಮವನ್ನು ನಮಗೋಸ್ಕರ ಮಾಡಿರಲಿಲ್ಲ. ಒಂದೊಳ್ಳೆ ಯೋಚನೆ ಇಟ್ಕೊಂಡು ಈ ರೀತಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಹೀರೋಯಿನ್ಸ್ ಬಗ್ಗೆ ಯಾರು ಯೋಚನೆ ಮಾಡಲ್ಲ.
ನಮಗೆ ಗುರುತಿಸುವುದು ಕಡಿಮೆ. ನಮಗೋಸ್ಕರ ಕ್ರೀಡೋತ್ಸವ ಮಾಡುತ್ತಿದ್ದೀರ. ಖುಷಿಯಾಗುತ್ತಿದೆ. ನಮ್ಮ ಎಲ್ಲ ಹೀರೋಯಿನ್ಸ್ ನೋಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಕಳೆದ ಬಾರಿ ಕ್ರಿಕೆಟ್ ಅಷ್ಟೇ ಮಾಡಿದ್ದರು. ಈ ಬಾರಿ ಮತ್ತಷ್ಟು ಆಟಗಳನ್ನು ಸೇರಿಸಿದ್ದಾರೆ. ನಾನು ನಿಮ್ಮ ಜೊತೆ ಕೈ ಜೋಡಿಸಿರುವುದು ಹೆಮ್ಮೆ ಎನಿಸುತ್ತಿದೆ’ ಎಂದರು.
‘ಡ್ರಗ್ ಫ್ರೀ ಸಮಾಜ’ ಎಂಬ ಉದ್ದೇಶ…
ಆಯೋಜಕರಾದ ಮಹೇಶ್ ಗೌಡ ಮಾತನಾಡಿ, ”ಕ್ವೀನ್ ಪ್ರೀಮಿಯರ್ ಲೀಗ್’ಗೆ ರಾಣಿ ಹುಡುತ್ತಿದ್ದೇವು. ಅವರು ಸಿಕ್ಕಿದ್ದಾರೆ. ಅದಕ್ಕಿಂತ ಬೇರೆ ಸಂತೋಷ ಏನಿದೆ. ಅವರು ಮಾತನಾಡಿದರೆ ಎಷ್ಟು ಜನಕ್ಕೆ ತಲುಪಲಿದೆ. ಕಳೆದ ಬಾರಿ ಜನರಲ್ ಆಗಿ ಶುರು ಮಾಡಿದೆವು. ಅದಕ್ಕೆ ಒಂದೊಳ್ಳೆ ಸಕ್ಸಸ್ ಸಿಕ್ಕಿದೆ. ಡ್ರಗ್ ಫ್ರೀ ಸಮಾಜ ಎಂಬ ಉದ್ದೇಶ ಇಟ್ಕೊಂಡು ಈ ಬಾರಿ ಪಂದ್ಯಾವಳಿ ಆಯೋಜಿಸಲಾಗಿದೆ’ ಎಂದು ಹೇಳಿದರು. 
ಎರಡನೇ ಆವೃತ್ತಿಯಲ್ಲಿ 10 ಟೀಂ… 12 ವಿವಿಧ ಗೇಮ್
ಆಯೋಜಕರಾದ ಪ್ರಮೋದ್ ಮಾತನಾಡಿ, ‘ಆರ್ ಸಿಬಿ ಗೆದ್ದಮೇಲೆ ಮಹೇಶ್ ಗೌಡ್ರ ತಲೆಯಲ್ಲಿ ಇದು ಶುರುವಾಗಿದ್ದು. ನಾವು ಎರಡನೇ ಆವೃತ್ತಿಗೆ ಈಗ ಕಾಲಿಟ್ಟಿದ್ದೇವೆ. ಕಳೆದ ಬಾರಿ 10 ಟೀಂ ಇದೆ. ಆಗ ಕ್ರಿಕೆಟ್ ಅಷ್ಟೇ ಆಡಿಸಿದ್ದೇವು. ಈಗ 12 ವಿವಿಧ ಗೇಮ್ ಇರಲಿದೆ. ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಡ್ರಗ್ಸ್ ಫ್ರೀ ಅಭಿಯಾನಕ್ಕೆ ಈ ಬಾರಿ ಕೈ ಜೋಡಿಸುತ್ತಿದ್ದೇವೆ’ ಎಂದರು. ಈ ಬಾರಿ ‘ಕ್ವೀನ್ ಪ್ರೀಮಿಯರ್ ಲೀಗ್’ ವಿಶೇಷ ಎಂದರೆ, ಆನ್‌ಲೈನ್ ಮೊಬೈಲ್ ಗೇಮ್ ಮತ್ತು ಆಫ್‌ಲೈನ್ ಗೇಮ್‌ಗಳನ್ನು ಬಿಟ್ಟು ಹೆಚ್ಚಾಗಿ ದೈಹಿಕ ಚಟುವಟಿಕೆ ತೊಡಗಿಸಿಕೊಳ್ಳುವಂತಹ ಆಟಗಳನ್ನು ಆಡಿಸಲಾಗುವುದು.















