Quick ಸುದ್ದಿಗೆ ಒಂದು click

‘ಕಾಂತಾರ’ ಚಾಪ್ಟರ್-1 ಚಿತ್ರೀಕರಣ ಪೂರ್ಣ..!

ಬಹುನಿರೀಕ್ಷಿತ ‘ಕಾಂತಾರ’ ಚಾಪ್ಟರ್-1 ಶೂಟಿಂಗ್‌ ಕಂಪ್ಲೀಟ್‌…

250 ದಿನಗಳ ಕಾಲ ‘ಕಾಂತಾರ’ ಶೂಟಿಂಗ್ ನಡೆಸಿದ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ

‘ಕಾಂತಾರ’ ಚಾಪ್ಟರ್-1 ಶೂಟಿಂಗ್‌ ವಿಡಿಯೋ ಹಂಚಿಕೊಂಡ ಚಿತ್ರತಂಡ

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಚಾಪ್ಟರ್-1 ಚಿತ್ರದ 250 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ’ ಚಾಪ್ಟರ್-1 ಕೆಲಸದಲ್ಲಿ ತೊಡಗಿಕೊಂಡಿತ್ತು. ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ‘ಕಾಂತಾರ’ ಚಾಪ್ಟರ್-1 ಚಿತ್ರದ ಚಿತ್ರೀಕರಣ ಮಾಡಲಾಗಿದೆ.

ಇದೀಗ ‘ಕಾಂತಾರ’ ಚಾಪ್ಟರ್-1 ಚಿತ್ರದ  ಚಿತ್ರೀಕರಣ ಪೂರ್ಣಗೊಂಡಿರುವ ಸುದ್ದಿಯನ್ನು ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಅಧಿಕೃತವಾಗಿ ಸೋಶಿಯಲ್‌ ಮೀಡಿಯಾಗಳ ಮೂಲಕ ಹಂಚಿಕೊಂಡಿದೆ. ಸದ್ಯ ‘ಕಾಂತಾರ’ ಚಾಪ್ಟರ್-1 ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ‘ಕಾಂತಾರ’ ಚಾಪ್ಟರ್-1 ಚಿತ್ರದ ಮೇಕಿಂಗ್‌ ಝಲಕ್‌ ಅನ್ನು ತೋರಿಸಲಾಗಿದೆ.

‘ಕಾಂತಾರ’ ಚಾಪ್ಟರ್-1 ಚಿತ್ರದ ಮೇಕಿಂಗ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಅಕ್ಟೋಬರ್ 2ರಂದು ‘ಕಾಂತಾರ’ ಚಾಪ್ಟರ್-1 ತೆರೆಗೆ

ಇನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ’ ಚಾಪ್ಟರ್-1 ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ತನ್ನ ಯೂ-ಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಮಾಡಿರುವ ‘ಕಾಂತಾರ’ ಚಾಪ್ಟರ್-1 ಚಿತ್ರದ ಮೇಕಿಂಗ್‌ ವಿಡಿಯೋ ಚಿತ್ರದ ಅದ್ದೂರಿತನವನ್ನು ತೋರಿಸುತ್ತಿದೆ. ಅಂದಹಾಗೆ, ‘ಕಾಂತಾರ’ ಚಾಪ್ಟರ್-1 ಚಿತ್ರ ಇದೇ 2025ರ ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿದೆ. ‘ಕಾಂತಾರ’ ಚಾಪ್ಟರ್-1 ಚಿತ್ರ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ.

Related Posts

error: Content is protected !!