‘ಡೆವಿಲ್’ ಸಿನೆಮಾ ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್
ಇದೇ ಡಿಸೆಂಬರ್ 5ಕ್ಕೆ ‘ಡೆವಿಲ್’ ಸಿನೆಮಾದ ಟ್ರೇಲರ್ ರಿಲೀಸ್
ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ
ಅದ್ಧೂರಿಯಾಗಿ ‘ಡೆವಿಲ್’ ಟ್ರೇಲರ್ ಬಿಡುಗಡೆ ಮಾಡಲು ಯೋಜನೆ
ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ಖ್ಯಾತಿಯ ನಟ ದರ್ಶನ್ ತೂಗುದೀಪ ಅಭಿನಯದ ‘ಡೆವಿಲ್’ ಸಿನೆಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಡಿಸೆಂಬರ್ 11ರಂದು ದರ್ಶನ್ ಅಭಿನಯಿಸಿರುವ ‘ಡೆವಿಲ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
ಇನ್ನು ‘ಡೆವಿಲ್’ ಸಿನೆಮಾ ಟ್ರೇಲರ್ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಅಂದಹಾಗೆ, ‘ಡೆವಿಲ್’ ಸಿನೆಮಾದ ಟ್ರೇಲರ್ ಇದೇ 2025ರ ಡಿಸೆಂಬರ್ 5ರಂದು ಬಿಡುಗಡೆಯಾಗುತ್ತಿದೆ.
ಹೌದು, ‘ಡೆವಿಲ್’ ಚಿತ್ರತಂಡ ಈ ವಿಷಯವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದೆ. 2025ರ ಡಿಸೆಂಬರ್ 5ರಂದು ಬೆಳಿಗ್ಗೆ 10.05ಕ್ಕೆ ‘ಸರೆಗಮ’ ಮ್ಯೂಸಿಕ್ ಯು-ಟ್ಯೂಬ್ ಚಾನೆಲ್‌ನಲ್ಲಿ ‘ಡೆವಿಲ್’ ಸಿನೆಮಾದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಡೆವಿಲ್’ ಸಿನೆಮಾದ ಹಾಡುಗಳಿಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸುಧಾಕರ್ ಎಸ್. ರಾಜ್ ಛಾಯಾಗ್ರಹಣವಿದ್ದು, ಹರೀಶ್ ಕೊಮ್ಮೆ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಾಮ್ ಲಕ್ಷ್ಮಣ್ ಸಾಹಸ ಮತ್ತು ಸಂತು ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ ‘ಡೆವಿಲ್’ ಸಿನೆಮಾದ ಹಾಡುಗಳು ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ‘ಡೆವಿಲ್’ ಟ್ರೇಲರ್ ಹೇಗಿರಬಹುದು..? ಎಂಬ ಕುತೂಹಲಕ್ಕೆ ಡಿಸೆಂಬರ್ 5ರಂದು ತೆರೆ ಬೀಳಲಿದೆ.















