Pop Corner

‘ರಿಪ್ಪನ್ ಸ್ವಾಮಿ’ ಎಂಟ್ರಿಗೆ ಡೇಟ್‌ ಫಿಕ್ಸ್‌

ಆಗಸ್ಟ್‌ 29ಕ್ಕೆ ‘ರಿಪ್ಪನ್ ಸ್ವಾಮಿ’ ಸಿನೆಮಾ ರಿಲೀಸ್‌

ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್ ಸ್ವಾಮಿ’ ಬಿಡುಗಡೆಗೆ ದಿನಾಂಕ ನಿಗದಿ

ವಿಜಯ ರಾಘವೇಂದ್ರ ‘ರಿಪ್ಪನ್ ಸ್ವಾಮಿ’ ಅವತಾರ

ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸಿನೆಮಾಗಳಲ್ಲೂ ಹೊಸಥರದ ಪಾತ್ರಗಳನ್ನು ಹುಡುಕಿ ಪ್ರೇಕ್ಷಕರ ಮುಂದೆ ಬರುತ್ತಿರುವ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈ ಬಾರಿ ಅಂಥದ್ದೇ ಮತ್ತೊಂದು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.  ಆ ಸಿನೆಮಾದ ಹೆಸರು ‘ರಿಪ್ಪನ್ ಸ್ವಾಮಿ’.

ಈ ಮೊದಲು ‘ಮಾಲ್ಗುಡಿ ಡೇಸ್’ ಸಿನೆಮಾ ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಕಿಶೋರ್ ಮೂಡಬಿದ್ರೆ ‘ರಿಪ್ಪನ್ ಸ್ವಾಮಿ’ ಸಿನೆಮಾಗೆ ಆಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ತನ್ನ ಟೈಟಲ್‌ ಮತ್ತು ಪೋಸ್ಟರ್‌ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ರಿಪ್ಪನ್ ಸ್ವಾಮಿ’ ಸಿನೆಮಾ, ಇದೇ 2025ರ ಆಗಸ್ಟ್‌ 29ರಂದು ತೆರೆಗೆ ಬರುತ್ತಿದೆ. ಸದ್ಯ ‘ರಿಪ್ಪನ್ ಸ್ವಾಮಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಇದೇ ಆಗಸ್ಟ್‌ 29ಕ್ಕೆ ‘ರಿಪ್ಪನ್ ಸ್ವಾಮಿ’ ಕುತೂಹಲಕ್ಕೆ ಉತ್ತರ

ಇನ್ನು ನಟ ವಿಜಯ್ ರಾಘವೇಂದ್ರ ಸಿನೆಮಾ ಅವರ ಜೀವನದಲ್ಲಿಯೇ ‘ರಿಪ್ಪನ್ ಸ್ವಾಮಿ’ ಬೆಸ್ಟ್ ಸಿನೆಮಾ ಎಂಬುದು ಚಿತ್ರತಂಡದ ಅಭಿಪ್ರಾಯ. ಯಾಕಂದ್ರೆ ‘ರಿಪ್ಪನ್ ಸ್ವಾಮಿ’ ಸಿನೆಮಾದ ಕಥೆ, ಪಾತ್ರ ಅಷ್ಟು ಗಟ್ಟಿಯಾಗಿದೆ. ಚಿತ್ರತಂಡದ ಶ್ರಮವೂ ಅಷ್ಟೇ ಜಾಸ್ತಿ ಇದೆ. ಈಗಾಗಲೇ ಪೋಸ್ಟರ್ ಗಳಿಂದಲೇ ಎಲ್ಲರ ಗಮನ ಸೆಳೆಯುವಲ್ಲಿ ‘ರಿಪ್ಪನ್ ಸ್ವಾಮಿ’ ಸಿನೆಮಾ ಯಶಸ್ವಿಯಾಗಿದೆ ಎಂಬುದು ಚಿತ್ರತಂಡದ ಮಾತು. ಚಿನ್ನಾರಿ‌ ಮುತ್ತನ ‘ರಿಪ್ಪನ್ ಸ್ವಾಮಿ’ ಅವತಾರದ ಬಗ್ಗೆ ಒಂದಷ್ಟು ನಿರೀಕ್ಷೆ ಗರಿಗೆದರಿದ್ದು, ಫ್ಯಾನ್ಸ್ ಕೂಡ ಕಾಯ್ತಾ ಇದ್ದಾರೆ. ಆ ಕಾಯುವಿಕೆಗೆ ಇದೇ ಆಗಸ್ಟ್ 29ಕ್ಕೆ ‘ರಿಪ್ಪನ್ ಸ್ವಾಮಿ‌’ ಸಿನೆಮಾದ ಬಿಡುಗಡೆಯ ಮೂಲಕ ಉತ್ತರ ಸಿಗಲಿದೆ ಎಂದಿದೆ ಚಿತ್ರತಂಡ.

ಮಾಸ್‌-ರಾ ಲುಕ್‌ನಲ್ಲಿ ‘ರಿಪ್ಪನ್ ಸ್ವಾಮಿ’

‘ರಿಪ್ಪನ್ ಸ್ವಾಮಿ’ ಸಿನೆಮಾದಲ್ಲಿ ವಿಜಯ್ ರಾಘವೇಂದ್ರ ಅವರು ರಾ ಲುಕ್ ನಲ್ಲಿ ಕಾಣಿಸಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಜೋಡಿಯಾಗಿ ಶಿವಮೊಗ್ಗ ಮೂಲದ ಕನ್ನಡ, ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ತುಮ್ಮಿನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್, ರಂಜನ್ ಶೆಟ್ಟಿ, ಸಂತೋಷ್ ಶೆಟ್ಟಿ ಮುಂತಾದವರು ಇದ್ದಾರೆ.

‘ಪಂಚಾಂನನ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ‘ರಿಪ್ಪನ್ ಸ್ವಾಮಿ’ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಪಂಚಾನನ ಫಿಲಂಸ್’ ನ ಮೊದಲನೇ ಸಿನಿಮಾ ಇದಾಗಿದೆ. ಚಿಕ್ಕಮಗಳೂರು ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ‘ರಿಪ್ಪನ್ ಸ್ವಾಮಿ’ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ‘ರಿಪ್ಪನ್ ಸ್ವಾಮಿ’ ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡಿದ್ದಾರೆ. ‘ರಿಪ್ಪನ್ ಸ್ವಾಮಿ’ ಚಿತ್ರಕ್ಕೆ  ರಂಗನಾಥ್ ಸಿ. ಎಂ ಛಾಯಾಗ್ರಹಣ, ಶಶಾಂಕ್ ನಾರಾಯಣ್ ಸಂಕಲನ ಕಾರ್ಯ ಮಾಡಿದ್ದಾರೆ. ಒಟ್ಟಾರೆ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ರಿಪ್ಪನ್ ಸ್ವಾಮಿ’ ಹೇಗಿರಲಿದೆ ಎಂಬುದು ಇದೇ ಆಗಸ್ಟ್‌ ಕೊನೆಗೆ ಗೊತ್ತಾಗಲಿದೆ.

Related Posts

error: Content is protected !!