Street Beat

ಹೊಸಬರ ‘ಖಾಲಿ ಡಬ್ಬ’ ಸೌಂಡ್‌ ಮಾಡೋಕೆ ರೆಡಿ..!

ತೆರೆಗೆ ಬರಲು ರೆಡಿ ಹೊಸ ಪ್ರತಿಭೆಗಳ ‘ಖಾಲಿ ಡಬ್ಬ’ ಚಿತ್ರ

ಪ್ರಕಾಶ್ ಕೆ. ಅಂಬ್ಳೆ ನಿರ್ದೇಶನದ ‘ಖಾಲಿ ಡಬ್ಬ’ ಚಿತ್ರಕ್ಕೆ ರಾಮ್‌ ಗುಡಿ ನಾಯಕ

ಸೆ. 19ರಂದು ಹೊಸಬರ ‘ಖಾಲಿ ಡಬ್ಬ’ ಚಿತ್ರ ಬಿಡುಗಡೆಯಾಗಿ ತೆರೆಗೆ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಖಾಲಿ ಡಬ್ಬ’ ಸಿನೆಮಾ ತೆರೆಗೆ ಬರಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ‘ಖಾಲಿ ಡಬ್ಬ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ ಇದೇ 2025ರ ಸೆಪ್ಟೆಂಬರ್‌ 19ರ ಶುಕ್ರವಾರ ಚಿತ್ರವನ್ನು ತೆರೆಗೆ ತರುತ್ತಿದೆ. ‘ಖಾಲಿ ಡಬ್ಬ’ ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ‘ಖಾಲಿ ಡಬ್ಬ’ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.

ನಿರ್ದೇಶಕ ಪ್ರಕಾಶ್ ಕೆ. ಅಂಬ್ಳೆ ಮಾತನಾಡಿ, ‘ಪಾತ್ರದೊಳಗಿನ ಪಾತ್ರಧಾರಿ ಅಂದರೆ ಅದು ಖಾಲಿ ಡಬ್ಬ. ಖಾಲಿ ಡಬ್ಬದಲ್ಲಿ ಒಂದಷ್ಟು ವಿಶೇಷ ಇರುತ್ತದೆ. ಅದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನೆಮಾ ರಿಲೀಸ್ ವರೆಗೂ ಬರಲು ಕಾರಣ ನಿರ್ಮಾಪಕ ಮಂಜು ಗುರಪ್ಪ. ಅವರ ಸಪೋರ್ಟ್ ನಮಗೆ ಸಿಕ್ಕಿದೆ. ಸಾಹಿತ್ಯ, ಸಂಗೀತವನ್ನು ವಿ. ನಾಗೇಂದ್ರ ಪ್ರಸಾದ್ ಸರ್ ಬರೆದಿದ್ದಾರೆ. ನಾಯಕ ರಾಮ್ ಗುಡಿ ಅದ್ಭುತವಾಗಿ ಅಭಿನಯಿಸಿದ್ದಾರೆ’ ಎಂದು ಹೇಳಿದರು.

ನಟ ರಾಮ್ ಗುಡಿ ಮಾತನಾಡಿ, ‘ಖಾಲಿ ಡಬ್ಬದಲ್ಲಿ ತುಂಬಾ ವಿಷಯಗಳನ್ನು ಹೇಳಲಾಗಿದೆ. ನಿಮಗೆಲ್ಲಾ ಅಜ್ಜಿ ನೆನಪು ತಂದುಕೊಡುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ‌ ನಿರ್ಧಾರ ತೆಗೆದುಕೊಂಡರೆ ಜೀವನ ಡಬ್ಬ ತುಂಬುತ್ತದೆ ಎಂಬ ಎಳೆ ಇಟ್ಕೊಂಡು ಮಾಡಲಾಗಿದೆ. ಹೊಸಬರ ಸಿನಿಮಾ ರಿಲೀಸ್ ಮಾಡುವುದೇ ದೊಡ್ಡ ಚಾಲೆಂಜ್. ಅದಕ್ಕೆ ನಿಮ್ಮ ಸಪೋರ್ಟ್ ಇರಲಿ’ ಎಂದರು.

ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ‘ಈ ಸಿನೆಮಾದಲ್ಲಿ ನಾಗೇಂದ್ರ ಪ್ರಸಾದ್ ಆಗಿಯೇ ನಟಿಸಿದ್ದೇನೆ. ಕನ್ನಡ, ಸಾಹಿತ್ಯದ ಬಗ್ಗೆ ಮಾತನಾಡುತ್ತೇನೆ. ಸಿನೆಮಾ ನೋಡ್ತಾ ನೋಡ್ತಾ ಟೈಟಲ್ ಮರೆತು ಹೋಗುತ್ತದೆ. ಈ ಚಿತ್ರ ಎಲ್ಲಿಯೂ ಬೇಸರ ತರಿಸಲ್ಲ. ನಿರೂಪಣೆ ಹೊಸದಾಗಿದೆ’ ಎಂದರು.

ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ. ಅಂಬ್ಳೆ ಚೊಚ್ಚಲ ಪ್ರಯತ್ನದ ‘ಖಾಲಿ ಡಬ್ಬ’ ಸಿನೆಮಾದಲ್ಲಿ ರಾಮ್ ಗುಡಿ ನಾಯಕನಾಗಿ ನಟಿಸಿದ್ದಾರೆ. ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಕುರಿ ಪ್ರತಾಪ್, ‘ಮಜಾಭಾರತ’ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ. ನಾಗೇಂದ್ರ ಪ್ರಸಾದ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಗೇಂದ್ರ ಪ್ರಸಾದ್, ವಿಶೇಷ ಪಾತ್ರದ ಜೊತೆಗೆ ಈ ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ.

‘ಖಾಲಿ ಡಬ್ಬ’ ಭವಿಷ್ಯ ಈ ವಾರ ನಿರ್ಧಾರ!

‘ಎಸ್.ಯು.ಎ ಎಂಟರ್ಟೈನ್ಮೆಂಟ್’ ಅಡಿ ಮಂಜು ಗುರಪ್ಪ ನಿರ್ಮಾಣ ಮಾಡಿದ್ದು, ಅಪ್ಪಾಜಿ, ಸೌಮ್ಯಾ ರಾಮ್, ಲಕ್ಷ್ಮೀ ಮಹೇಂದ್ರ, ಚಿಕ್ಕೇಗೌಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಲಕ್ಕಿ ಕ್ಯಾಮರಾ ಹಿಡಿದಿದ್ದು, ವೆಂಕಟ್ ಯುಡಿವಿ ಸಂಕಲನ ನಿರ್ವಹಿಸಿದ್ದಾರೆ. ಗಿರೀಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಇದೇ 19 ಸೆ. 2025ರ ಶುಕ್ರವಾರ ‘ಖಾಲಿ ಡಬ್ಬ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಒಟ್ಟಾರೆ ಹೊಸಬರ ‘ಖಾಲಿ ಡಬ್ಬ’ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.

Related Posts

error: Content is protected !!