Quick ಸುದ್ದಿಗೆ ಒಂದು click

ಕಿಚ್ಚನ ‘ಮಾರ್ಕ್’ ಚಿತ್ರಕ್ಕೆ ‘ಏರ್‌ಟೆಲ್’ ಸಹಭಾಗಿತ್ವ

‘ಮಾರ್ಕ್’ (MARK) ಪ್ರಚಾರಕ್ಕೆ ಕೈ ಜೋಡಿಸಿದ ಏರ್‌ಟೆಲ್

ಗ್ರಾಹಕರಿಗಾಗಿ ‘ಮಾರ್ಕ್’ ಎಕ್ಸ್‌ಕ್ಲೂಸಿವ್ ಪ್ಯಾಕ್ ಪರಿಚಯಿಸಿದ ಏರ್‌ಟೆಲ್

‘ಮಾರ್ಕ್’ ಅಭಿಮಾನಿಗಳಿಗೆ ಏರ್‌ಟೆಲ್‌ನಿಂದ ಸ್ಪೆಷಲ್‌ ಆಫರ್‌

ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಚಿತ್ರ ತೆರೆಗೆ ಬರೋದಕ್ಕೆ ತಯಾರಿಗೆ. ಇದೇ 2025ರ ಡಿಸೆಂಬರ್ 25 ರಂದು ‘ಮಾರ್ಕ್’ ಚಿತ್ರವು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಭರದಿಂದ ‘ಮಾರ್ಕ್’ ಚಿತ್ರದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ ಕೂಡ ‘ಮಾರ್ಕ್’ ಚಿತ್ರದ ಪ್ರಚಾರಕ್ಕೆ ಜೊತೆಯಾಗಿದೆ.

ಹೌದು, ಇದೇ ಮೊದಲ ಬಾರಿಗೆ ಕನ್ನಡ ಸಿನೆಮಾವೊಂದರ ಜೊತೆ ಅಧಿಕೃತವಾಗಿ ಕೈಜೋಡಿಸಿರುವ ಏರ್‌ಟೆಲ್‌ ಸಂಸ್ಥೆ, ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಜೊತೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ ‘ಮಾರ್ಕ್’ ಸಿನೆಮಾವನ್ನು ನೋಡಲು ಬಯಸುವ ಏರ್‌ಟೆಲ್ ಗ್ರಾಹಕರಿಗೆ ವಿಶೇಷ ಆಫರ್ ಗಳು ಲಭ್ಯವಾಗಲಿದೆ.

ಏನಿದು ‘ಮಾರ್ಕ್’ ಮತ್ತು ಏರ್‌ಟೆಲ್‌ ಆಫರ್‌..?

ಅಂದಹಾಗೆ, ‘ಮಾರ್ಕ್’ ಸಿನೆಮಾದ ಬಿಡುಗಡೆಯ ಸಂಭ್ರಮವನ್ನು ಆಚರಿಸಲು ಏರ್‌ಟೆಲ್ ‘ಮಾರ್ಕ್’ ಎಕ್ಸ್‌ಕ್ಲೂಸಿವ್ ಪ್ಯಾಕ್ ಅನ್ನು ಏರ್‌ಟೆಲ್‌ ಗ್ರಾಹಕರಿಗೆ ಪರಿಚಯಿಸಿದೆ. ಈ ಆಫರ್ ಅಡಿಯಲ್ಲಿ, ಗ್ರಾಹಕರು ಹೊಸದಾಗಿ ಬಿಡುಗಡೆಯಾದ ‘9 ಸೀರೀಸ್’ (9 series) ನಂಬರ್‌ಗಳಿರುವ ಏರ್‌ಟೆಲ್‌ ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ ‘ಮಾರ್ಕ್’ ಚಿತ್ರದ ಉಚಿತ ಟಿಕೆಟ್‌ಗಳನ್ನು ಬಹುಮಾನವಾಗಿ ನೀಡಲಾಗುವುದು.

ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ‘ಏರ್‌ಟೆಲ್’ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು. ಅಂದಹಾಗೆ, ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮಾರ್ಕ್’ ಚಿತ್ರವನ್ನು ‘ಸತ್ಯಜ್ಯೋತಿ ಫಿಲಂಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸುತ್ತಿವೆ.‌ ಈಗಾಗಲೇ ‘ಮಾರ್ಕ್’ ಕಿಚ್ಚ ಸುದೀಪ್‌ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳ ಚಿತ್ತ ‘ಮಾರ್ಕ್’ ಬಿಡುಗಡೆಯತ್ತ ನೆಟ್ಟಿದೆ.

Related Posts

error: Content is protected !!