Street Beat

ಸಿನಿ ಪ್ರೇಮಿಗಳ ಮುಂದೆ ಹೊಸಬರ ‘ಲವ್ ಮ್ಯಾಟ್ರು’

ಹೊರಬಂತು ‘ಲವ್ ಮ್ಯಾಟ್ರು’ ಹಾಡು…

ಮತ್ತೊಂದು ಹೊಸ ಲವ್‌ ಸ್ಟೋರಿ ತೆರೆಗೆ ಬರಲು ರೆಡಿ…

ವಿರಾಟ್‌ ಬಿಲ್ವ – ಸೋನಾಲ್‌ ಜೋಡಿಯ ಹೊಸ ಚಿತ್ರ

ಯುವ ಪ್ರತಿಭೆ ವಿರಾಟ್‌ ಬಿಲ್ವ ನಾಯಕ ನಟನಾಗಿ ಅಭಿನಯಿಸಿ, ನಿರ್ದೇಶಿಸಿರುವ ಲವ್ ಸಬ್ಜೆಕ್ಟ್ ಇರುವಂತಹ ‘ಲವ್ ಮ್ಯಾಟ್ರು’ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲವ್ ಮ್ಯಾಟ್ರು’  ಚಿತ್ರದ ಹಾಡುಗಳು ಬಿಡುಗಡೆಯಾಗಿ ಸಿನಿಪ್ರಿಯರ ಮುಂದೆ ಬಂದಿದೆ.

ಮತ್ತೊಂದು ಲವ್‌ ಸ್ಟೋರಿ

ಹೆಸರೇ ಹೇಳುವಂತೆ, ‘ಲವ್ ಮ್ಯಾಟ್ರು’ ಅಪ್ಪಟ ಪ್ರೇಮಕಥಾ ಹಂದರದ ಸಿನೆಮಾ. ಈ ಸಿನೆಮಾದಲ್ಲಿ ಬೇಜಾನ್ ‘ಲವ್ ಮ್ಯಾಟ್ರು’ ಇದೆ ಅನ್ನೋದು ಚಿತ್ರತಂಡದ ಮಾತು. ಸದ್ಯ ‘ಲವ್ ಮ್ಯಾಟ್ರು’ ಸಿನೆಮಾದ ಹಾಡೊಂದು ಬಿಡುಗಡೆಯಾಗಿದ್ದು,  ‘ಏನೋ ಗೊತ್ತಿಲ್ಲ…’ ಎಂಬ ಈ ಹಾಡಿಗೆ ನಟ ವಿರಾಟ ಬಿಲ್ವ ಹಾಗೂ ನಟಿ ಸೋನಲ್ ಮಾಂತೇರೋ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಶೇಡ್ರಾಕ್ ಸೋಲೋಮನ್ ಸಂಗೀತದಲ್ಲಿ ‘ಲವ್ ಮ್ಯಾಟ್ರು’  ಸಿನೆಮಾದ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.

ಇನ್ನು ಈ ‘ಲವ್ ಮ್ಯಾಟ್ರು’ ಸಿನೆಮಾಗೆ ನಾಯಕ ನಟ ವಿರಾಟ ಬಿಲ್ವ ಅವರೇ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ದುನಿಯಾ ಸೂರಿ, ಪ್ರಶಾಂತ್ ನೀಲ್, ಕೆ. ಎಂ. ಚೈತನ್ಯ ಮುಂತಾದ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವಿರುವ ವಿರಾಟ್‌ ಬಿಲ್ವ ‘ಕಡ್ಡಿಪುಡಿ’ ಚಿತ್ರದಲ್ಲೂ ಅಭಿನಯ ಮಾಡಿದ್ದಾರೆ. ಇದೀಗ ‘ಲವ್ ಮ್ಯಾಟ್ರು’ ಸಿನೆಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.

ಹಾಡಿನ ಮೂಲಕ ‘ಲವ್ ಮ್ಯಾಟ್ರು’ ಪ್ರಚಾರ ಆರಂಭ

ವಂದನ ಪ್ರಿಯ ವಿ. ರವರ ‘ಸಿಲ್ವರಿಥಮ್ ಪ್ರೊಡಕ್ಷನ್ಸ್‌’ ಮತ್ತು ‘ಐಎನ್‌ಕೆ ಸಿನಿಮಾಸ್’ ಸಂಸ್ಥೆಯ ಮೂಲಕ ‘ಲವ್ ಮ್ಯಾಟ್ರು’ ಸಿನೆಮಾ ನಿರ್ಮಾಣವಾಗಿದೆ. ‘ಲವ್ ಮ್ಯಾಟ್ರೂ’ ಸಿನೆಮಾದಲ್ಲಿ ವಿರಾಟ್‌ ಬಿಲ್ವ ಅವರಿಗೆ ಸೋನಾಲ್‌ ಮಾಂತೇರೋ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ಸುಶ್ಮಿತಾ ಗೋಪಿನಾಥ್, ಅಚ್ಯುತ ಕುಮಾರ್‌,  ಸುಮನ್ ರಂಗನಾಥ್, ಅನಿತಾ ಭಟ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಆದಷ್ಟು ಬೇಗ ಸಿನಿಪ್ರಿಯರ ಮುಂದೆ ‘ಲವ್ ಮ್ಯಾಟ್ರು’

‘ಲವ್ ಮ್ಯಾಟ್ರು’ ಸಿನೆಮಾದ ಹಾಡುಗಳಿಗೆ ಶೇಡ್ರಾಕ್ ಸೋಲೋಮನ್ ಸಂಗೀತ ಸಂಯೋಜಿಸಿದ್ದು, ದೇವೇಂದ್ರ ಆರ್. ನಾಯ್ಡು ಮತ್ತು ಪರಮೇಶ್ ಸಿ. ಎಂ. ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಅರಸ್  ಸಂಕಲನವಿದೆ. ಸದ್ಯ ಹಾಡುಗಳ ಮೂಲಕ ‘ಲವ್ ಮ್ಯಾಟ್ರು’ ಸಿನೆಮಾದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ, ಆದಷ್ಟು ಬೇಗ ಸಿನಿಪ್ರಿಯರ ಮುಂದೆ ‘ಲವ್ ಮ್ಯಾಟ್ರು’ ಚಿತ್ರವನ್ನು ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!