ಇದು ಹೊಸತರದ ‘ಲವ್ ಮ್ಯಾಟ್ರು’..!
ಸೋನಲ್-ವಿರಾಟ್ ಜೋಡಿಯ ‘ಲವ್ ಮ್ಯಾಟ್ರು’ ರಿಲೀಸ್‌ಗೆ ರೆಡಿ
ಪ್ರೀತಿ, ಎಮೋಷನ್ಸ್, ಫೈಟ್, ಬ್ರೇಕಪ್ ಎಲ್ಲದರ ಹೂರಣ ‘ಲವ್ ಮ್ಯಾಟ್ರು’…
ನಮ್ಮ ನಡುವಿನ ಪ್ರೇಮಕಥೆ ಈ ‘ಲವ್ ಮ್ಯಾಟ್ರು’ನಲ್ಲಿದೆ!
ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಲವ್ ಸ್ಟೋರಿ ಸಿನೆಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಈ ಬಾರಿ ಕೂಡ ಅಂಥದ್ದೇ ಒಂದು ಸಿನೆಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಲವ್ ಮ್ಯಾಟ್ರು’. ಬಹುತೇಕ ಹೊಸ ಪ್ರತಿಭೆಗಳು ಜೊತೆಗೊಂದಷ್ಟು ಹಿರಿಯ ಕಲಾವಿದರು ಸೇರಿ ಮಾಡಿರುವ ಈ ‘ಲವ್ ಮ್ಯಾಟ್ರು’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಆಗಸ್ಟ್ ವೇಳೆಗೆ ಸಿನೆಮಾ ತೆರೆಗೆ ಬರುತ್ತಿದೆ.
ಇತ್ತೀಚೆಗೆ ‘ಲವ್ ಮ್ಯಾಟ್ರು’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರತಂಡ ಕೂಡ ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದೆ. ಇತ್ತೀಚೆಗೆ ನಡೆದ ‘ಲವ್ ಮ್ಯಾಟ್ರು’ ಸಿನೆಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮತ್ತು ಗಣ್ಯರು ಹಾಜರಿದ್ದರು.
‘ಲವ್ ಮ್ಯಾಟ್ರು’ ಚಿತ್ರಕ್ಕೆ ಗಣ್ಯರ ಹಾರೈಕೆ
‘ಲವ್ ಮ್ಯಾಟ್ರು’ ಯುವ ಪ್ರತಿಭೆ ವಿರಾಟ ಬಿಲ್ವ ನಟಿಸಿ, ನಿರ್ದೇಶನ ಮಾಡಿರುವಂತ ಸಿನೆಮಾ ಲವ್ ಮ್ಯಾಟ್ರು. ಲವ್, ಫೈಟ್, ಜಗಳ, ಮುನಿಸು, ಮತ್ತೊಬ್ಬ ಪ್ರೇಮಿಯ ಆಗಮನ, ಎರಡು ಬ್ಯೂಟಿಫುಲ್ ಲವ್ ಸ್ಟೋರಿ ಎಲ್ಲವೂ ‘ಲವ್ ಮ್ಯಾಟ್ರು’ ಟ್ರೇಲರ್ ನಲ್ಲಿ ತೆರೆದುಕೊಂಡಿದೆ. ನಟರಾದ ಅಭಿಜಿತ್, ಅಚ್ಯುತ್ ಕುಮಾರ್, ಸುಮನ್ ರಂಗನಾಥ, ಸೋನಲ್ ಮೊದಲಾದವರು ‘ಲವ್ ಮ್ಯಾಟ್ರು’ ಸಿನೆಮಾದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. 
ಲವ್ ಮ್ಯಾಟ್ರಲ್ಲಿ ನಂಬಿಕೆ ತುಂಬಾ ಇಂಪಾರ್ಟೆಂಟ್…
ಇದೇ ವೇಳೆ ಮಾತನಾಡಿದ ಹಿರಿಯ ನಟ ಅಭಿಜಿತ್, ‘ಲವ್ ಎಂಬ ಮ್ಯಾಟ್ರು ಬಂದಾಗ ಇದನ್ನ ಅಷ್ಟು ಈಸಿಯಾಗಿ ಹೇಳೋದಕ್ಕೆ ಆಗಲ್ಲ. ಈ ಲವ್ ಮ್ಯಾಟ್ರಲ್ಲಿ ನಂಬಿಕೆ ತುಂಬಾ ಇಂಪಾರ್ಟೆಂಟ್. ‘ಲವ್ ಮ್ಯಾಟ್ರು’ ಹಿಂದೆ ಬಹಳ ಜನರ ಲೈಫ್ ಮ್ಯಾಟ್ರಿದೆ. ಈ ಸಿನೆಮಾ ನೋಡಿ ಗೆಲ್ಲಿಸಿ’ ಎಂದು ಕರೆ ನೀಡಿದರು.
ನೀವಂದುಕೊಂಡಿದ್ದ ಕಥೆ ಇದಾಗಿರಲ್ಲ..!
‘ಲವ್ ಮ್ಯಾಟ್ರು’ ಚಿತ್ರದ ನಾಯಕ ನಟ ಕಂ ನಿರ್ದೇಶಕ ವಿರಾಟ ಬಿಲ್ವ ಮಾತನಾಡಿ, ”ಲವ್ ಮ್ಯಾಟ್ರು’ ಅಂತ ಬಂದಾಗ ಒಂದಷ್ಟು ಸಿನೆಮಾಗಳನ್ನ ನೋಡಿರ್ತೀರಾ. ಆದ್ರೆ ನಾನು ತುಂಬಾ ಬಲವಾಗಿ ಹೇಳ್ತೀನಿ, ನೀವಂದುಕೊಂಡಿದ್ದ ಕಥೆ ಇದಾಗಿರಲ್ಲ. ಒಂದೊಳ್ಳೆ ಬ್ಯೂಟಿಫುಲ್ ಕಥೆಯನ್ನ ತೆರೆಮೇಲೆ ನೋಡ್ತೀರಿ. ಎಲ್ಲರಿಗೂ ಇಷ್ಟವಾಗುವಂಥ ಸಿನೆಮಾ ಇದಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
‘ಲವ್ ಮ್ಯಾಟ್ರು’ ಎಲ್ಲರಿಗೂ ಇಷ್ಟವಾಗುವಂತಿದೆ…
‘ಲವ್ ಮ್ಯಾಟ್ರು’ ಚಿತ್ರದಲ್ಲಿ ಅಭಿನಯಿಸಿರುವ ನಟ ಅಚ್ಯುತ್ ಕುಮಾರ್ ಮಾತನಾಡಿ, ‘ನನ್ನ ಪಾತ್ರಕ್ಕೂ ಹಲವು ಮ್ಯಾಟರ್ ಇದೆ. ಇಬ್ಬರ ಜೊತೆಯಲ್ಲಿ ಒಂದು ಪ್ರೇಮ ಪ್ರಕರಣವಿದೆ. ಅದ್ಯಾಕೆ, ಹೇಗೆ ಅನ್ನೋದನ್ನ ತೆರೆಮೇಲೆ ನೋಡಿ. ವಿರಾಟ್ ಮತ್ತೆ ನಾನು ಹಲವು ಸಿನೆಮಾಗಳಲ್ಲಿ ಜೊತೆಗೆ ಕೆಲಸ ಮಾಡಿದ್ದೀವಿ. ಸಿನೆಮಾ ಎಲ್ಲರಿಗೂ ಇಷ್ಟವಾಗುವಂತಿದೆ’ ಎಂದರು. 
‘ಲವ್ ಮ್ಯಾಟ್ರು’ ಚಿತ್ರದ ನಾಯಕ ನಟಿ ಸೋನಲ್ ಮಾತನಾಡಿ, ‘ಈ ಸಿನೆಮಾದಲ್ಲಿ ವರ್ಷ ಎಂಬ ಪಾತ್ರವನ್ನ ಮಾಡಿದ್ದೀನಿ. ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ ಅವಳಿಂದ ದೂರ ಆಗಿರ್ತಾರೆ. ಆದರೆ ಆ ಹುಡುಗಿ ಬಾಳಲ್ಲಿ ಏನೆಲ್ಲಾ ಆಗುತ್ತೆ ಅನ್ನೋ ಪಾತ್ರ. ಈ ಪಾತ್ರಕ್ಕೆ ವಿರಾಟ್ ಗೆ ಧನ್ಯವಾದ ಹೇಳಬೇಕು. ಈ ಸಿನೆಮಾ ವಿಚಾರದಲ್ಲಿ ನಿರ್ಮಾಪಕಿ ವಂದನಾ ಅವರಿಗೆ ಧನ್ಯವಾದ ತಿಳಿಸಲೇಬೇಕು’ ಎಂದು ಇಡೀ ತಂಡದ ಬಗ್ಗೆ ಮಾತನಾಡಿದರು. ನಟಿಯರಾದ ಸುಮನ್ ರಂಗನಾಥ್, ಅನಿತಾ ಭಟ್ ಸೇರಿದಂತೆ ‘ಲವ್ ಮ್ಯಾಟ್ರು’ ಸಿನೆಮಾದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ‘ಲವ್ ಮ್ಯಾಟ್ರು’ ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು.
ಇದೇ ಆಗಸ್ಟ್ 1ಕ್ಕೆ ‘ಲವ್ ಮ್ಯಾಟ್ರು’ ತೆರೆಗೆ
ಅಂದಹಾಗೆ, ‘ಲವ್ ಮ್ಯಾಟ್ರು’ ಸಿನೆಮಾ ಇದೇ 2025ರ ಆಗಸ್ಟ್ 1ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ತನ್ನ ಟೈಟಲ್, ಹಾಡುಗಳು ಮತ್ತು ಟ್ರೇಲರ್ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ಲವ್ ಮ್ಯಾಟ್ರು’ ತೆರೆಮೇಲೆ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ‘ಲವ್ ಮ್ಯಾಟ್ರು’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.















