Telewalk

‘ಅಮೇಜಾನ್ ಪ್ರೈಮ್’ನಲ್ಲಿ ‘ರಿಪ್ಪನ್ ಸ್ವಾಮಿ’ ಎಂಟ್ರಿ

ಥಿಯೇಟರಿನಿಂದ ಓಟಿಟಿಗೆ ಬಂದ ‘ರಿಪ್ಪನ್‌ ಸ್ವಾಮಿ’

‘ಅಮೇಜಾನ್ ಪ್ರೈಮ್’ ಓಟಿಟಿಯಲ್ಲಿ ‘ರಿಪ್ಪನ್ ಸ್ವಾಮಿ’ ರಿಲೀಸ್‌

ಕಿರುತೆರೆ ವೀಕ್ಷಕರ ಮುಂದೆ ವಿಜಯ ರಾಘವೇಂದ್ರ ಹೊಸಚಿತ್ರ

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ, ನಟ ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್‌ ಸ್ವಾಮಿ’ ಸಿನೆಮಾ ಇದೀಗ ಥಿಯೇಟರಿನಿಂದ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೌದು, ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್‌ ಸ್ವಾಮಿ’ ಸಿನೆಮಾದ ಓಟಿಟಿಯ ಹಕ್ಕುಗಳು ‘ಅಮೇಜಾನ್‌ ಪ್ರೈಮ್‌’ ಪಾಲಾಗಿದ್ದು, ಇದೀಗ ‘ರಿಪ್ಪನ್‌ ಸ್ವಾಮಿ’ ಸಿನೆಮಾ ‘ಅಮೇಜಾನ್‌ ಪ್ರೈಮ್‌’ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

‘ರಿಪ್ಪನ್‌ ಸ್ವಾಮಿ’ ಸಿನೆಮಾ ಬಿಡುಗಡೆಯಾಗಿ ಬಂದಾಗ ನೋಡೋದಕ್ಕೆ ಸಮಯವಾಗದೆಯೋ, ಇನ್ಯಾವುದೋ ಒತ್ತಡದಿಂದಾನೋ ಆ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡಿದ್ದೇವೆ ಎಂದುಕೊಂಡವರು ಇದೀಗ ‘ರಿಪ್ಪನ್ ಸ್ವಾಮಿ’ ಸಿನೆಮಾವನ್ನು ಮನೆಯಲ್ಲೇ ಕೂತು ವೀಕ್ಷಿಸಬಹುದಾಗಿದೆ.

ಥಿಯೇಟರಿನಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದ ‘ರಿಪ್ಪನ್‌ ಸ್ವಾಮಿ’

ಯಾಕಂದ್ರೆ ಸಿನೆಮಾ ಥಿಯೇಟರ್ ನಲ್ಲಿ ರಿಲೀಸ್ ಆದಾಗಲೇ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಜನರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಅದರಲ್ಲೂ ಸ್ವಾಮಿಯ ಗುಣ, ಕೋಪ, ಪ್ರೀತಿ ಎಲ್ಲವೂ ಇಷ್ಟವಾಗಿದೆ. ನಿರ್ದೇಶಕ ಕಿಶೋರ್ ಮೂಡಬಿದ್ರೆ ಕಥೆಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಮನುಷ್ಯನಿಗೆ ಚಿಕ್ಕಂದಿನಲ್ಲಿಯೇ ಎದುರಾದ ಬೇಡದ ಸಂಬಂಧ ತನ್ನ ಮದುವೆಯಲ್ಲೂ ಮುಂದುವರೆದರೆ ಅವನ ಮನಸ್ಥಿತಿ ಹೇಗಾಗಬೇಡ. ಪ್ರೀತಿ ಮಾಡಿದವಳನ್ನ ದ್ವೇಷಿಸಬೇಕಾ..? ಕ್ಷಮಿಸಬೇಕಾ..? ಸಿನೆಮಾ ನೋಡಿ ನೀವೇ ಹೇಳಬೇಕು. ಮಲೆನಾಡಿನ ಸುಂದರ ಸೌಂದರ್ಯ ‘ರಿಪ್ಪನ್‌ ಸ್ವಾಮಿ’ ಸಿನೆಮಾದಲ್ಲಿ ಅಚ್ಚಾಗಿ ಕಣ್ಣಿಗೆ ರಾಚುತ್ತದೆ. ಸಿನೆಮಾ ಮುಗಿದ ಮೇಲೆ ಸ್ವಾಮಿಯಾಗಿ ವಿಜಯ್ ರಾಘವೇಂದ್ರ ಅವರು ಎಲ್ಲರನ್ನು ಕಾಡುತ್ತಾರೆ.

‘ಪಂಚಾಂನನ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿರುವಂತ ಈ ‘ರಿಪ್ಪನ್‌ ಸ್ವಾಮಿ’ ಸಿನೆಮಾದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಅಶ್ವಿನಿ ಜೋಡಿಯಾಗಿದ್ದಾರೆ. ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ಚಿತ್ರಕ್ಕಿದೆ. ರಂಗನಾಥ್ ಸಿ. ಎಂ ಛಾಯಾಗ್ರಹಣ, ಶಶಾಂಕ ನಾರಾಯಣ್‌ ಸಂಕಲನ ಈ ಚಿತ್ರಕ್ಕಿದೆ.

Related Posts

error: Content is protected !!