10 ಕೋಟಿ ವೀಕ್ಷಣೆ ಕಂಡು ಗಮನ ಸೆಳೆದ ‘ಮೈಕಲ್’ ಟೀಸರ್
‘ಮೈಕಲ್’ ಬಯೋಪಿಕ್ ಟೀಸರ್ 10 ಕೋಟಿ ವೀಕ್ಷಣೆ!
ಮೈಕಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಕಲ್’ ಬಯೋಪಿಕ್ ಟೀಸರ್ ಔಟ್
ಮೈಕಲ್ ಜಾಕ್ಸನ್ ಬಯೋಪಿಕ್ 2026ರಲ್ಲಿ ತೆರೆಗೆ
ಅಮೆರಿಕಾದ ನೃತ್ಯ ಮಾಂತ್ರಿಕ ಮೈಕಲ್ ಜಾಕ್ಸನ್ ಅವರ ಜೀವನ ಆಧರಿಸಿದ ‘ಮೈಕಲ್’ ಬಯೋಪಿಕ್ ಸಿನೆಮಾವಾಗಿ ತೆರೆಗೆ ಬರಲು ತಯಾರಾಗುತ್ತಿದೆ. ಇದೀಗ ‘ಮೈಕಲ್’ ಬಯೋಪಿಕ್ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 10 ಕೋಟಿ ವೀಕ್ಷಣೆ ಗಳಿಸಿದೆ! ಹೌದು, ‘ಮೈಕಲ್’ ಬಯೋಪಿಕ್ ಸಿನೆಮಾ ಮೊದಲ ಟೀಸರ್ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿ
ಎಲ್ಲರ ಗಮನ ಸೆಳೆದು, ಹುಬ್ದಿಬೇರುವಂತೆ ಮಾಡಿದೆ. ಮೈಕಲ್ ಜಾಕ್ಸನ್ ತಮ್ಮ ಮೂನ್‌ವಾಕ್, ವಿಶಿಷ್ಟ ಡ್ಯಾನ್ಸ್, ಅದ್ಭುತ ಸಂಗೀತದ ಮೂಲಕ ವಿಶ್ವವನ್ನು ಬೆರಗುಗೊಳಿಸಿದ ಕಲಾವಿದ. ಮೈಕಲ್ ಜಾಕ್ಸನ್ (ಎಂಜೆ) ಅವರ ಯಶಸ್ಸಿನ ಪಯಣ, ‘ಜಾಕ್ಸನ್ ಬ್ರದರ್ಸ್’ ತಂಡದಿಂದ ಆರಂಭಗೊಂಡು ವೈಯಕ್ತಿಕ ಜೀವನದ ಸಂಕಷ್ಟಗಳವರೆಗಿನ ಕಥೆಯನ್ನು ಈ ‘ಮೈಕಲ್’ ಬಯೋಪಿಕ್ ಸಿನೆಮಾದಲ್ಲಿ ಹೇಳಲಾಗುತ್ತಿದೆ.
ಬೆರಗು ಹುಟ್ಟಿಸಿದ ‘ಮೈಕಲ್’ ಬಯೋಪಿಕ್ ಟೀಸರ್!
ಜಫರ್ ಜಾಕ್ಸನ್ ಅವರು ಮೈಕಲ್ ಜಾಕ್ಸನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಯಾ ಲಾಂಗ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆಂಟೊಯಿನ್ ಫುಕ್ವಾ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ಮೈಕಲ್ ಜಾಕ್ಸನ್ ಆಗಿ ಬದಲಾಗಿದ್ದು ಹೇಗೆ ಎಂಬ ಕಥೆಯನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಯಲಿದೆ. ಅಮೆರಿಕದಲ್ಲಿ ಹುಟ್ಟಿ ಬೆಳೆದ ಅವರ ಜೀವನ ಆಧರಿಸಿ ‘ಯೂನಿವರ್ಸಲ್ ಪಿಕ್ಚರ್ಸ್’ ಸಿನೆಮಾ ಮಾಡುತ್ತಿದೆ.
‘ಮೈಕಲ್’ ಟೀಸರಿನಲ್ಲಿ ಜಾಕ್ಸನ್ ಝಲಕ್…
ಮೂನ್‌ವಾಕ್ ಮೂಲಕ ಎಲ್ಲರನ್ನೂ ಬೆರಗುಗೊಳಿಸುವಂತೆ ಮಾಡುತ್ತಿದ್ದ ಮೈಕಲ್ ಜಾಕ್ಸನ್ ಅವರ ಡ್ಯಾನ್ಸ್ ಸ್ಟೆಪ್ಗಳನ್ನು ಕಾಪಿ ಮಾಡೋದು ಅಷ್ಟು ಸುಲಭವಾಗಿರಲಿಲ್ಲ. ಅವರು ಹಾಕುತ್ತಿದ್ದ ಸ್ಟೆಪ್ಗಳು ಅಷ್ಟೊಂದು ವಿಭಿನ್ನ ರೀತಿಯಲ್ಲಿ ಇರುತ್ತಿದ್ದವು.
ಮೈಕಲ್ ಜಾಕ್ಸನ್ ಸಿಂಗರ್ ಕೂಡ ಆಗಿದ್ದು, ಡ್ಯಾನ್ಸ್ ಮಾಡುತ್ತಾ, ಅವರೇ ಹಾಡು ಕೂಡ ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಮೈಕಲ್ ಸ್ವತಃ ಹಾಡುಗಳನ್ನು ರಚನೆ ಕೂಡ ಮಾಡುತ್ತಿದ್ದರು. ಅದೆಲ್ಲದರ ಝಲಕ್ ಅನ್ನು ‘ಮೈಕಲ್’ ಹೆಸರಿನ ಬಯೋಪಿಕ್ ಟೀಸರಿನಲ್ಲಿ ಕಟ್ಟಿಕೊಡಲಾಗಿದೆ.
ಇನ್ನು, ಮೈಕಲ್ ಜಾಕ್ಸನ್ ಬೆಳೆಯುತ್ತಾ ಇದ್ದಂತೆ ತಮ್ಮ ಸೋದರರ ಜೊತೆಸೇರಿ ಒಂದು ‘ಜ್ಯಾಕ್ಸನ್ ಬ್ರದರ್ಸ್’ ಹೆಸರಿನ ತಂಡವನ್ನು ಕಟ್ಟಿಕೊಂಡರು. ಸಣ್ಣದಾಗಿ ಪ್ರಾರಂಭಿಸಿದ ಈ ತಂಡ ‘ಬ್ರೇಕ್ ಡ್ಯಾನ್ಸ್’, ‘ಪಾಪ್ ಸಂಗೀತ’ದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸಿನ ನಡಿಗೆ ಆರಂಭಿಸಿತು. ಇದನ್ನು ಸಿನೆಮಾದಲ್ಲಿ ತೋರಿಸಲಾಗುತ್ತಿದೆ.
ಮೈಕಲ್ ಜಾಕ್ಸನ್ ಅವರ ‘ಮೈಕಲ್’ ಬಯೋಪಿಕ್ ಸಿನೆಮಾದ ಟೀಸರ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
2026ರಲ್ಲಿ ‘ಮೈಕಲ್’ ಬಯೋಪಿಕ್ ತೆರೆಗೆ
ಸದ್ಯ ‘ಮೈಕಲ್’ ಹೆಸರಿನ ಬಯೋಪಿಕ್ ಟೀಸರ್ ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಮೈಕಲ್ ಜಾಕ್ಸನ್ ತಮ್ಮ ಬದುಕಿನಲ್ಲಿ ಎರಡು ಮದುವೆ ಆಗಿದ್ದರು. ಅವರಿಗೆ ಮೂವರು ಮಕ್ಕಳು. ಅವರು ಸಾಯುವುದಕ್ಕೂ ಮೊದಲು ನಿದ್ದೆ ಮಾತ್ರೆ ಸೇವಿಸಿದ್ದರು. ಇದು ಅತಿಯಾಗಿದ್ದರಿಂದ ಅವರು ನಿಧನ ಹೊಂದಿದರು ಎನ್ನಲಾಗಿದೆ.
ಈ ಟ್ಯಾಬ್ಲೆಟ್ ನೀಡಿದ ಡಾ. ಮುರ್ರೆ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಕೂ ಆಗಿತ್ತು. ‘ಮೈಕಲ್’ ಹೆಸರಿನ ಬಯೋಪಿಕ್ ನಲ್ಲಿ ಮೈಕಲ್ ಜಾಕ್ಸನ್ ಅವರ ವೈಯಕ್ತಿಕ ಜೀವನದ ಎಲ್ಲಾ ಸಂಗತಿಗಳು ಇರಲಿದೆಯೇ ಎಂಬ ಪ್ರಶ್ನೆಯನ್ನು ಟೀಸರ್ ನೋಡಿದವರು ಕೇಳುತ್ತಿದ್ದಾರೆ.
‘ಮೈಕಲ್’ ಬಿಡುಗಡೆಯಾದ ಮೇಲಷ್ಟೇ ಎಲ್ಲದಕ್ಕೂ ಉತ್ತರ!
ಅದೇನೆಯಿರಲಿ, ಮೈಕಲ್ ಜಾಕ್ಸನ್ ನಿಧನ ಹೊಂದಿ 16 ವರ್ಷಗಳ ಮೇಲಾಗಿದೆ. 2009ರಲ್ಲಿ ಅವರು ಲಾಸ್ ಏಂಜಲೀಸ್ನಲ್ಲಿ ಕೇವಲ 50ನೇ ವಯಸ್ಸಿಗೆ ನಿಧನ ಹೊಂದಿದರು. ಈಗ ‘ಮೈಕಲ್’ ಹೆಸರಿನ ಬಯೋಪಿಕ್ ಸಿದ್ಧವಾಗಿದ್ದು, ಈ ಸಿನೆಮಾ 2026ರಲ್ಲಿ ತೆರೆಗೆ ಬರಲಿದೆ. ಇನ್ನು ಮೈಕಲ್ ಜಾಕ್ಸನ್ ಅವರ ‘ಮೈಕಲ್’ ಹೆಸರಿನ ಬಯೋಪಿಕ್ ನಲ್ಲಿ ಏನಿದೆ..? ಏನಿಲ್ಲ..? ಎಂಬುದು ಸಂಪೂರ್ಣವಾಗಿ ಗೊತ್ತಾಗಬೇಕಾದರೆ, ‘ಮೈಕಲ್’ ಬಯೋಪಿಕ್ ಬಿಡುಗಡೆಯಾಗಬೇಕು.















