ರಶ್ಮಿಕಾ-ವಿಜಯ್ ಒಂದೇ ಮನೆಯಲ್ಲಿ ವಾಸ ಮಾಡ್ತಾರಾ?

ಸಾಕ್ಷಿ ಹಿಡಿದು ಸಾಲು ಸಾಲು ಪ್ರಶ್ನೆಕೇಳುತ್ತಿದ್ದಾರೆ ನೆಟ್ಟಿಗರು…
ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ ದೇವರಕೊಂಡ ಬಗ್ಗೆೆ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆೆ ಹರಿದಾಡುತ್ತಲೇ ಇರುತ್ತವೆ. ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೆಡ್’ ಸಿನಿಮಾಗಳ ಮೂಲಕ ಬೆಸ್ಟ್ ಜೋಡಿಯಾಗಿ ಮೋಡಿ ಮಾಡಿದ್ದ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅನೇಕ ಅಭಿಮಾನಿಗಳ ಗುಮಾನಿ.
ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆೆ ಇಲ್ಲಿಯವರೆಗೆ ನಟಿ ರಶ್ಮಿಕಾ ಮಂದಣ್ಣ ಅವರಾಗಲಿ ಅಥವಾ ನಟ ವಿಜಯ ದೇವರಕೊಂಡ ಅವರಾಗಲಿ ಎಲ್ಲೂ ಬಾಯಿಬಿಟ್ಟಿಲ್ಲ. ಹೀಗಾದರೂ ‘ಹಳದಿ ಕಣ್ಣು’ಗಳಿಂದ ನೋಡುತ್ತಿರುವವರ ಅನುಮಾನ ಮಾತ್ರ ಕಡಿಮೆಯಾಗಿಲ್ಲ. ಬಹುಶಃ ಆಗಾಗ್ಗೆೆ ಇವರಿಬ್ಬರ ಬಗ್ಗೆೆ ಹರಿದಾಡುತ್ತಿರುವ ಗಾಳಿ ಮಾತುಗಳು, ಇವರ ನಡೆ ಕೂಡ ಇದಕ್ಕೆೆ ಕಾರಣವಾಗಿರಬಹುದು. ಅದೇನೆ ಇರಲಿ ಬಿಡಿ.., ಈಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದು ಸದ್ಯಕ್ಕೆೆ ಹರಿದಾಡುತ್ತಿರುವ ಮತ್ತೊಂದು ಸುದ್ದಿ. ಅದಕ್ಕೆೆ ಕಾರಣವಾಗಿರುವುದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಟೋಗಳು.
ಹೌದು, ರಶ್ಮಿಕಾ ತಮ್ಮ ಆಪ್ತ ಸಹಾಯಕ ಸಾಯಿ ಮದುವೆಯಲ್ಲಿ ಭಾಗಿಯಾಗುವ ಮುನ್ನ ತಮ್ಮ ಮನೆಯ ಟೆರೇಸ್ ನಲ್ಲಿ ಕೇಸರಿ ಬಣ್ಣದ ಸಿಂಪಲ್ ಸೀರೆಯನ್ನು ತೊಟ್ಟು ಚೆಂದದ ಒಂದು ಪೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಸೇಮ್ ಟು ಸೇಮ್ ಅದೇ ಟೆರೇಸ್ ನಲ್ಲಿ ವಿಜಯ್ ಕೂಡ ಒಂದು ಪೋಟೋಶೂಟ್ ಮಾಡಿಸಿ, ಆ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರು ಒಂದೇ ಸ್ಥಳದಲ್ಲಿ ನಿಂತು ಪೋಟೋ ಶೂಟ್ ಮಾಡಿಸಿರುವುದೇ ಈಗ ಈ ಇಬ್ಬರ ರಿಲೇಶನ್‌ಶಿಪ್ ಬಗ್ಗೆ ಮತ್ತೆ ಮಾತಾಡುವಂತೆ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಎರಡು ಪೋಟೋಗಳನ್ನು ಹಿಡಿದುಕೊಂಡು, ‘ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ?’ ಅಂಥ ಕೇಳುತ್ತಿದ್ದಾರೆ. ಅದೇನೇಯಿರಲಿ, ತಮ್ಮ ಬಗ್ಗೆೆ ಹರಿದಾಡುತ್ತಿರುವ ಈ ಸುದ್ದಿಗಳ ಬಗ್ಗೆೆ ರಶ್ಮಿಕಾ ಅಥವಾ ವಿಜಯ್ ತಲೆಕೆಡಿಸಿಕೊಂಡಿಲ್ಲ. ಮೂರರ ಜೊತೆ ಮತ್ತೊಂದು ಎನ್ನುವಂತೆ ನೋಡಿ ಸುಮ್ಮನಾಗಿದ್ದಾರೆ!