ಜೀ5 ಒಟಿಟಿಯಲ್ಲಿ ‘ಗಾಮಿ’ ಸ್ಟ್ರೀಮಿಂಗ್…

ಜೀ5 ಒಟಿಟಿಯಲ್ಲಿ ‘ಗಾಮಿ’ ಸ್ಟ್ರೀಮಿಂಗ್ Start…
ವಿಶ್ವಕ್ ಸೇನ್ ಚಿತ್ರ ಮೆಚ್ಚಿದ ಪ್ರೇಕ್ಷಕ
ಮಾರ್ಚ್ 8ರಂದು ತೆರೆಕಂಡಿರುವ ವಿಶ್ವಕ್ ಸೇನ್ ನಟನೆಯ ತೆಲುಗು ಚಿತ್ರ ‘ಗಾಮಿ’ ಓಟಿಟಿಯತ್ತ ಹೆಜ್ಜೆ ಹಾಕಿದ್ದು, ಏ.12ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಿದೆ. ‘ಗಾಮಿ’ ಸಿನಿಮಾಗೆ ವಿದ್ಯಾರ್ಧ ಕಾಗಿತಾ ನಿರ್ದೇಶನವಿದೆ. ‘ಗಾಮಿ’ ವಿದ್ಯಾರ್ಧ ಕಾಗಿತಾ ಇವರ ಚೊಚ್ಚಲ ಪ್ರಯತ್ನ. ವಿಶ್ವಕ್ ಸೇನ್ ‘ಗಾಮಿ’ ಸಿನಿಮಾಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂ. ಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡ, ಶಾಂತಿ ರಾವ್, ಮಯಾಂಕ್ ಪರಾಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್ ಸಂಕಲನ, ನರೇಶ್ ಕುಮಾರನ್ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್ ಶಬರೀಶ್ ಚಿತ್ರಕ್ಕೆ ಹಣ ಹಾಕಿದ್ದಾರೆ.