ಹೊರಬಂತು ಟ್ರೇಲರಿನಲ್ಲಿ ‘X&Y’ ಝಲಕ್

‘X&Y’ ಚಿತ್ರದ ಟ್ರೇಲರ್ ಬಿಡುಗಡೆ
ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘X&Y’ ಸಬ್ಜೆಕ್ಟ್
ನಿರೀಕ್ಷೆ ಮೂಡಿಸಿದ ‘X&Y’ ಸ್ಟೋರಿ!
ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್ ನಿರ್ದೇಶನದ ‘X&Y’ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಭರದಿಂದ ‘X&Y’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘X&Y’ ಸಿನೆಮಾದ ಟ್ರೇಲರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ‘ಸತ್ಯ ಪಿಕ್ಚರ್ಸ್’ ಯು-ಟ್ಯೂಬ್ ಚಾನೆಲ್‌ನಲ್ಲಿ ‘X&Y’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯ ಈ ಟ್ರೇಲರ್ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಹೇಗಿದೆ ‘X&Y’ ಟ್ರೇಲರ್..?
ಇನ್ನು ಬಿಡುಗಡೆಯಾಗಿರುವ ‘X&Y’ ಸಿನೆಮಾದ ಟ್ರೇಲರ್ ತುಂಬ ಲವಲವಿಕೆಯಿಂದ ತೆರೆಮೇಲೆ ಮೂಡಿಬಂದಿದೆ. ನಿರ್ದೇಶಕ ಕಂ ನಟ ಸತ್ಯ ಪ್ರಕಾಶ್, ಅಥರ್ವ ಪ್ರಕಾಶ್, ನಾಯಕಿಯರಾದ ಬೃಂದಾ ಆಚಾರ್ಯ, ಅಯಾನ, ಸುಂದರ್, ಧರ್ಮಣ್ಣ ಕಡೂರ್ ಸೇರಿದಂತೆ ಅನೇಕ ಕಲಾವಿದರ ದೊಡ್ಡ ತಾರಾಗಣವೇ ‘X&Y’ ಸಿನೆಮಾದಲ್ಲಿರುವುದನ್ನು ಟ್ರೇಲರ್ ತೋರಿಸಿದೆ. ನವಿರಾದ ಹಾಸ್ಯದ ಜೊತೆಗೆ ‘X&Y’ ಸಿನೆಮಾದ ಕಥೆಯನ್ನು ಹೇಳಿರುವುದು ಟ್ರೇಲರ್‌ನಲ್ಲಿ ಕಾಣುತ್ತಿದೆ. ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ, ಮೇಕಿಂಗ್, ತಾರಾಗಣ ಎಲ್ಲವೂ ‘X&Y’ ಟ್ರೇಲರಿನಲ್ಲಿ ಗಮನ ಸೆಳೆಯುವ ಅಂಶಗಳಾಗಿದೆ ಎನ್ನಬಹುದು.
‘X&Y’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಜೂ. 26ಕ್ಕೆ ‘X&Y’ ತೆರೆಗೆ…
ಸದ್ಯ ಟ್ರೇಲರ್ ಬಿಡುಗಡೆಯ ಮೂಲಕ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ‘X&Y’ ಚಿತ್ರತಂಡ, ಇದೇ 2025ರ ಜೂನ್ 26ಕ್ಕೆ ‘X&Y’ ಸಿನೆಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಒಟ್ಟಾರೆ ‘X&Y’ ಟ್ರೇಲರ್ ಒಂದಷ್ಟು ಮಂದಿಯ ಗಮನ ಸೆಳೆಯುತ್ತಿದ್ದು, ಸಿನೆಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಸಿನಿಪ್ರಿಯರಿಗೆ ಇಷ್ಟವಾಗಲಿದೆ ಎಂಬುದು ಇದೇ ಜೂನ್ ಅಂತ್ಯಕ್ಕೆ ಗೊತ್ತಾಗಲಿದೆ.