ಫೌಂಡ್ ಫುಟೇಜ್ ಶೈಲಿಯಲ್ಲಿ ಬರ್ತಿದೆ ‘ಒಮೆನ್’ ಚಿತ್ರ
ಹೊಸಬರ ‘ಒಮೆನ್’ ಚಿತ್ರ ಬಿಡುಗಡೆಗೆ ಸಿದ್ಧ
‘ಒಮೆನ್’ ; ದೆವ್ವದ ಮನೆಯೊಳಗೆ ಊಹಿಸಲಾಗದ ಘಟನೆ
ಫೌಂಡ್ ಫುಟೇಜ್ ಸ್ಟೈಲ್‌ನಲ್ಲಿ ‘ಒಮೆನ್’ ಸಿನೆಮಾ
ಚಂದನವನದಲ್ಲಿ ಕೆಲವು ಸಿನೆಮಾಗಳು ತಮ್ಮ ಬಜೆಟ್ ಮತ್ತು ಸ್ಟಾರ್ ಕಾಸ್ಟಿಂಗ್ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಟೈಟಲ್ ಮತ್ತು ಕಂಟೆಂಟ್ ಮೂಲಕವೇ ಒಂದಷ್ಟು ಮಂದಿಯ ಗಮನ ಸೆಳೆಯುವಂತೆ ಮಾಡುತ್ತವೆ. ಸದ್ಯ ‘ಒಮೆನ್’ ಎಂಬ ಹೆಸರಿನ ಅಂಥದ್ದೇ ಒಂದು ಸಿನೆಮಾ ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕ ಗಾಂಧಿನಗರದಲ್ಲಿ ಒಂದಷ್ಟು ಮಂದಿಯ ಗಮನ ಸೆಳೆಯುತ್ತಿದೆ. ಅಂದಹಾಗೆ, ಕೇಳೋದಕ್ಕೆ ಒಮೆನ್’ ಹೆಸರು ವಿಭಿನ್ನವಾಗಿದೆ ಅಂತ ಅನ್ನಿಸುವಂತೆ, ಈ ಸಿನೆಮಾದ ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ ಎಂಬುದು ಚಿತ್ರತಂಡದ ಮಾತು.
ಏನಿದು ‘ಒಮೆನ್’..?
‘ಮರವಂಜಿ ಪ್ರೊಡಕ್ಷನ್ಸ್’ ಮತ್ತು ‘ಶ್ರೀ ಅಂಗಾಳಪರಮೇಶ್ವರಿ ಮೂವಿಮೇಕರ್ಸ್’ ಬ್ಯಾನರ್‌ನಡಿ ಅಜಯ್ ಕುಮಾರ್ ಮತ್ತು ವಿ. ಮಿರುನಳಿನಿ ಜಂಟಿಯಾಗಿ ಈ ‘ಒಮೆನ್’ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಒಂದು ಮನೆಯ ಸುತ್ತ ನಡೆಯುವಂತಹ ಘಟನೆಗಳ ಸುತ್ತ ‘ಒಮೆನ್’ ಚಿತ್ರ ಸಾಗುತ್ತದೆ. ಭೂತ ಬಂಗಲೆಗೆ ಹೋದವರ ಸುತ್ತ ‘ಒಮೆನ್’ ಚಿತ್ರದ ಕಥೆ ಕೇಂದ್ರೀಕರಿಸಿದೆ. ‘ಒಮೆನ್’ ಚಿತ್ರದಲ್ಲಿ ನಾಯಕ ಯೂ-ಟ್ಯೂಬರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ಪ್ಯಾರಾನಾರ್ಮಲ್ ರಿಸರ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾ ಫೌಂಡ್ ಫುಟೇಜ್ ಸ್ಟೈಲ್‌ನಲ್ಲಿದ್ದು, ನೇರವಾಗಿ ಒಂದು ಘಟನೆಯನ್ನು ವೀಕ್ಷಿಸುತ್ತಿರುವಂತಹ ಅನುಭವವನ್ನು ಪ್ರೇಕ್ಷಕರಿಗೆ ಆಗುತ್ತದೆ. ಸಿನೆಮಾದಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಗ್ರಾಫಿಕ್ಸ್ ಒಳಗೊಂಡಿದೆ. ಸಂಗೀತ ಮತ್ತು ಸೌಂಡ್ ಡಿಸೈನ್ ಚಿತ್ರದ ಶೈಲಿಗೆ ಅನುಗುಣವಾಗಿದ್ದು ನೋಡುವ ವೀಕ್ಷಕರಿಗೆ ರೋಮಾಂಚಕಾರಿ ಹಾಗೂ ಭಯಾನಕ ಅನುಭವವನ್ನು ನೀಡುತ್ತದೆ ಎಂಬುದು ಚಿತ್ರತಂಡದ ಭರವಸೆಯ ಮಾತು. 
ಸೆನ್ಸಾರ್ ಪಾಸ್ ‘ಒಮೆನ್’ ಶೀಘ್ರದಲ್ಲೇ ತೆರೆಗೆ
‘ಒಮೆನ್’ ಚಿತ್ರಕ್ಕೆ ವಿಬಿನ್ ಎಸ್. ಸಂತೋಷ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಈ ಸಿನೆಮಾದ ಸಂಕಲನ ಕಾರ್ಯವನ್ನು ಕೂಡ ತಾವೇ ನಿರ್ವಹಿಸಿದ್ದಾರೆ.
‘ಒಮೆನ್’ ಚಿತ್ರದಲ್ಲಿ ಯುವ ಪ್ರತಿಭೆ ಅಜಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನೀಶ್ಮಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ, ರಾಘು ಕಲಾವಿದ, ಆಕಾಶ್ ಕುಲಕರ್ಣಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಒಮೆನ್’ ಚಿತ್ರಕ್ಕೆ ಭುವನ್ ಶಂಕರ್, ಸನ್‌ಸ್ಕಾರ್ ಸಂಗೀತ ಸಂಯೋಜಿಸಿದ್ದು, ಆನ್ಶೋ ಎಸ್. ಸೈಮನ್ ಎಸ್ಎಫ್ಎಕ್ಸ್ ಕೆಲಸ ಮಾಡಿದ್ದಾರೆ. ಸದ್ಯ ‘ಒಮೆನ್’ ಸಿನೆಮಾದ ಸೆನ್ಸಾರ್ ನಿಂದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ‘ಒಮೆನ್’ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.















