Street Beat

ಆಂಜನೇಯ ಅವತಾರವೆತ್ತ ‘ಗೋಲ್ಡನ್‌ ಸ್ಟಾರ್‌’ ಗಣೇಶ್!

‘Yours Sincerely ರಾಮ್’ ಚಿತ್ರತಂಡದಿಂದ ಬರ್ತಡೇ ಉಡುಗೊರೆ

‘Yours Sincerely ರಾಮ್’ಗಾಗಿ ಭಜರಂಗಿ ವೇಷ ಧರಿಸಿದ ‘ಮಳೆ ಹುಡ್ಗ’

ಹುಟ್ಟುಹಬ್ಬದಂದು ಹೊಸ ಅವತಾರವೆತ್ತ  ಗಣೇಶ್ ದರ್ಶನ‌

ಕನ್ನಡ ಚಿತ್ರರಂಗದ ‘ತ್ಯಾಗರಾಜ’ರು ಅಂತಾನೇ ಖ್ಯಾತಿ ಪಡೆದಿರುವ ರಮೇಶ್‌ ಅರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬೋ ‘Yours Sincerely ರಾಮ್’ಗಾಗಿ ಒಂದಾಗಿರುವುದು ಗೊತ್ತೇ ಇದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಗಣೇಶ್‌ ಹುಟ್ಟುಹಬ್ಬಕ್ಕೆ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. ‘Yours Sincerely ರಾಮ್’ ಪೋಸ್ಟರ್‌ ಬಿಡುಗಡೆ ಮಾಡಿ ‘ಗೋಲ್ಡನ್‌ ಸ್ಟಾರ್’ಗೆ ಬರ್ತಡೇ ಶುಭಾಶಯ ತಿಳಿಸಿದೆ.

ಆಂಜನೇಯ ಗೆಟಪ್‌ನಲ್ಲಿ ಗೋಲ್ಡನ್‌ ಸ್ಟಾರ್…

ಗಣೇಶ್‌ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್‌ ಬಹಳ ವಿಶೇಷವಾಗಿದೆ. ಗಣೇಶ್‌ ಹಿಂದೆಂದೂ ಕಾಣದ ಗೆಟಪ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಅವತಾರದಲ್ಲಿ ‘ಮಳೆ ಹುಡ್ಗ’ ದರ್ಶನ ಕೊಟ್ಟಿದ್ದಾರೆ. ಹಿಮಾಲಯದ ಬ್ಯಾಕ್‌ ಡ್ರಾಪ್‌ ನಲ್ಲಿ ಮೂಡಿ ಬಂದಿರುವ ಪೋಸ್ಟರ್‌ ನಲ್ಲಿ ರಾಮ ಸೈಕಲ್ ಮೇಲೆ ಕುಳಿತಿದ್ದು, ಭಜರಂಗಿ ಭುಜದಲ್ಲಿ ಪೋಸ್ಟ್‌ ಮ್ಯಾನ್‌ ಬ್ಯಾಗ್‌ ಕಾಣಿಸುತ್ತದೆ. ಪೋಸ್ಟರ್‌ ನಾನಾ ಕುತೂಹಲ ಹುಟ್ಟುಹಾಕುವ ಕ್ರಿಯೇಟ್‌ ಮಾಡುವುದರ ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

‘ಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಿನಿಮಾ ಹಸಿವಿರುವ ವಿಖ್ಯಾತ್ ಎ. ಆರ್. ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ‘ಐರಾ ಫಿಲ್ಮ್ಸ್’ ಮತ್ತು ‘ದಿ ರಾಯಲ ಸ್ಟುಡಿಯೋಸ್’ ಬ್ಯಾನರ್ ಅಡಿ ಸತ್ಯ ರಾಯಲ ‘Your’s sincerely ರಾಮ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ.  ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ‘Your’s sincerely ರಾಮ್’ ತೆರೆಗೆ ಬರಲಿದೆ.

Related Posts

error: Content is protected !!