Street Beat

‘ರೂಬಿ’ ಟೈಟಲ್ ಮೋಷನ್ ಪೋಸ್ಟರ್ ಔಟ್!

‘ರೂಬಿ’ ಸಿನೆಮಾದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್

ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರದ‌ ಟೈಟಲ್ ಮೋಷನ್ ಪೋಸ್ಟರ್ ಅನಾವರಣ…

ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಗೆ ಚಿತ್ರ ರೂಪ

‘ನಾದಬ್ರಹ್ಮ’ ಹಂಸಲೇಖ ಅವರ ‘ಕಥಾ ಕಣಜ’ದಿಂದ ಸ್ಯಾಂಡಲ್‌ವುಡ್‌ಗೆ ಪರಿಚಿತರಾದವರು ಯುವ ಪ್ರತಿಭೆ ರಘು ಕೋವಿ. ನಿದೇಶಕರಾದ ಎಸ್‌. ವಿ. ರಾಜೇಂದ್ರ ಸಿಂಗ್ ಬಾಬು, ಎಂ. ಎಸ್. ರಾಜಶೇಖರ್, ಕೆ. ವಿ. ರಾಜು, ಶಶಾಂಕ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ಕೋ- ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಇರುವ ರಘು ಕೋವಿ, ಅಜಯ್ ರಾವ್ ನಟನೆಯ ‘ಕೃಷ್ಣ ಲೀಲಾ’ ಚಿತ್ರದ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ ಇದೇ ರಘು ಕೋವಿ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಹೌದು, ರಘು ಕೋವಿ ಇದೀಗ ‘ರೂಬಿ’ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ರಘು ಕೋವಿ  ಚೊಚ್ಚಲ ನಿರ್ದೇಶನದ ಸಿನೆಮಾಕ್ಕೆ ‘ರೂಬಿ’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್‌ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

‘ರೂಬಿ’ ಸಿನೆಮಾದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಬಳಿಕ‌ ಮಾತನಾಡಿದ ಬರಹಗಾರ ಹಾಗೂ ನಿರ್ದೇಶಕ ಚಂದ್ರಚೂಡ್ ಮಾತನಾಡಿ, ‘ಈ ಚಿತ್ರದ ಕಥೆ ಹಾಗೂ ಚಿತ್ರತಂಡ ಚೆನ್ನಾಗಿದೆ. ಒಳ್ಳೊಳ್ಳೆ ಸಿನೆಮಾ ಬರಬೇಕು. ಈ ಚಿತ್ರದ ಹಾಡು ಕೇಳಿದ್ದೇನೆ. ಆ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತದೆ. ಲಿರಿಕ್ಸ್ ಹಾಗೂ ಮ್ಯೂಸಿಕ್ ಎಲ್ಲವೂ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

‘ರೂಬಿ’ ನಾಯಕನಾಗಿ ರಾಮ್‌ ಗೌಡ

‘ರೂಬಿ’ ಚಿತ್ರದ ನಾಯಕ ನಟ ರಾಮ್ ಗೌಡ ಮಾತನಾಡಿ, ‘ರಘು ಅವರು ಬಂದು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯ್ತು. ನನ್ನ ಪಾತ್ರ ಹಾಗೂ ಇಡೀ ತಂಡ ಚೆನ್ನಾಗಿದೆ. ಆರ್. ಪಿ ಸರ್ ಮ್ಯೂಸಿಕ್ ಮಾಡ್ತಾ ಇರುವುದು ನನಗೆ ಖುಷಿಯಾಯ್ತು. ನಿರ್ಮಾಪಕರು ತುಂಬಾ ಫ್ಯಾಷನೇಟ್ ಆಗಿದ್ದಾರೆ. ಚಿತ್ರಕ್ಕೆ ಏನೂ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ’ ಎಂದರು.

ರಘು ಕೋವಿ ಕನಸು… ‘ರೂಬಿ’ ಮೂಲಕ ನನಸು…

ಇದೇ ವೇಳೆ ಮಾತನಾಡಿದ ನಿರ್ದೇಶಕ ರಘು ಕೋವಿ, ‘ನನ್ನ ಕನಸಿಗೆ ಇಬ್ಬರು ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಒಂದು ಲವ್ ಸ್ಟೋರಿಯನ್ನು ಮ್ಯೂಸಿಕ್ ಮೂಲಕ ಹೇಳಲು ಸಾಧ್ಯವಿದೆ. ಅದನ್ನು ಆರ್. ಪಿ. ಪಟ್ನಾಯಕ್ ಅವರಂತಹ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಹೇಳಿದ್ದಾರೆ. ನಾಯಕ ರಾಮ್ ಕಥೆ ಮತ್ತು ಕಲೆ ಬಗ್ಗೆ ಆಸಕ್ತಿ ಇರುವ ವ್ಯಕ್ತಿ. ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಯನ್ನು ‘ರೂಬಿ’ ಸಿನೆಮಾ ಮೂಲಕ ಹೇಳಲು ಹೊರಟ್ಟಿದ್ದೇವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಈಗಾಗಲೇ ಈ ಸಿನೆಮಾದ ಶೇಕಡ 50ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ’ ಎಂದು ಹೇಳಿದರು.

ಕನ್ನಡದ ಅತ್ಯುತ್ತಮ ಚಿತ್ರವಾಗುವ ವಿಶ್ವಾಸ…

ಸಂಗೀತ ನಿರ್ದೇಶಕ ಆರ್. ಪಿ. ಪಟ್ನಾಯಕ್ ಮಾತನಾಡಿ, ‘ಕಥೆ ತುಂಬಾ ಚೆನ್ನಾಗಿದೆ. ಇದು ಕನ್ನಡ ಇಂಡಸ್ಟ್ರಿಯಲ್ಲಿ ಬೆಸ್ಟ್ ಸಿನೆಮಾವಾಗಲಿದೆ. ರಾಮ್-ವೈಭವಿ ರಾಷ್ಟ್ರಪ್ರಶಸ್ತಿ ಸಿಗುವಷ್ಟು ಚೆನ್ನಾಗಿ ನಟಿಸಿದ್ದಾರೆ. ಈ ಮ್ಯೂಸಿಕಲ್ ಚಿತ್ರದ ಭಾಗವಾಗಿ ಇರುವುದು ನನಗೆ ತುಂಬಾ ಖುಷಿ ಇದೆ. ಚಿತ್ರದಲ್ಲಿ ಒಳ್ಳೆ ಟೆಕ್ನಿಷಿಯನ್ ತಂಡವಿದೆ’ ಎಂದರು.

‘ರೂಬಿ’ಗೆ ವೈಭವಿ ಜೋಡಿ

ಇನ್ನು ಈ ಹಿಂದೆ ‘ದಿಲ್‌ಮಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡಿದ ರಾಮ್ ಗೌಡ ಅವರು ‘ರೂಬಿ’ಯಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ‘ಗಾಳಿಪಟ 2’ ಮತ್ತು ‘ಮಾರ್ಟಿನ್’ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಭವಿ ಶಾಂಡಿಲ್ಯ ‘ರೂಬಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಕನ್ನಡದಲ್ಲಿ ‘ವಂಶಿ’, ‘ಆಕಾಶ್’ ಮತ್ತು ‘ಎಕ್ಸ್‌ಕ್ಯೂಸ್ ಮಿ’ ಮೊದಲಾದ ಸೂಪರ್‌ ಹಿಟ್‌ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ಆರ್‌. ಪಿ. ಪಟ್ನಾಯಕ್ ‘ರೂಬಿ’ಗೆ ಸಂಗೀತ ಒದಗಿಸಿದ್ದಾರೆ. ‘ರಾಜಕುಮಾರ’ ಮತ್ತು ‘ಯುವರತ್ನ’ ಚಿತ್ರಗಳ ಛಾಯಾಗ್ರಹಕ ವೆಂಕಟೇಶ್ ಅಂಗುರಾಜ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ. ‘ರೋಜಾ’, ‘ಬಾಂಬೆ’ ಮತ್ತು ‘ದಿಲ್ ಸೇ’ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸುರೇಶ್ ಅರಸ್ ಸಂಕಲನ ಮಾಡುತ್ತಿದ್ದಾರೆ. ‘ಕೆಜಿಎಫ್’ ಖ್ಯಾತಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸ್ಟಂಟ್ ಕೊರಿಯೋಗ್ರಾಫರ್ ವಿಕ್ರಮ್ ಮೋರ್ ಅವರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

ಈ ಹಿಂದೆ ‘ಓ ಮೈ ಗಾಡ್ 2’ ನಿರ್ಮಿಸಿದ ಬಾಲಿವುಡ್ ಬ್ಯಾನರ್ ನಿಖಿಲ್ ದೇಸಾಯಿ ಅವರ ‘ಇವಾನ್ ಫಿಲಂಸ್‌’ ಹಾಗೂ ಶಿವರಾಜ್ ಕನಗನಪಳ್ಳಿ ಅವರ ‘ನವಿಶಾ ಫಿಲ್ಮ್ಸ್’ ಸಹಯೋಗದೊಂದಿಗೆ ‘ರೂಬಿ’ ಸಿನೆಮಾ ನಿರ್ಮಾಣವಾಗುತ್ತಿದೆ.

Related Posts

error: Content is protected !!