Video

ಹೊರಬಂತು ‘ಲ್ಯಾಂಡ್‌ ಲಾರ್ಡ್‌’ ಟೀಸರ್‌

ದುನಿಯಾ ವಿಜಯ್‌ ‘ಲ್ಯಾಂಡ್‌ ಲಾರ್ಡ್‌’ ಟೀಸರ್‌ ರಿಲೀಸ್‌

ಖಡಕ್‌ ಲುಕ್‌ನಲ್ಲಿ ರಗಡ್‌ ಆಗಿ ಎಂಟ್ರಿ ಕೊಟ್ಟ ದುನಿಯಾ ವಿಜಯ್‌

ರಾಜ್ಯೋತ್ಸವದ ಸಂದರ್ಭದಲ್ಲಿ ಹೊರಬಂತು ‘ಲ್ಯಾಂಡ್‌ ಲಾರ್ಡ್‌’ ಝಲಕ್‌

ನಟ ದುನಿಯಾ ವಿಜಯ್‌ ಅಭಿನಯದ ಮುಂಬರುವ ಸಿನೆಮಾ ‘ಲ್ಯಾಂಡ್‌ ಲಾರ್ಡ್‌’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದ್ದು, ‘ಕನ್ನಡ ರಾಜ್ಯೋತ್ಸವ’ದ ಸಂದರ್ಭದಲ್ಲಿ ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದೆ. ‘ಆನಂದ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸದ್ಯ ಬಿಡುಗಡೆಯಾಗಿರುವ ಟೀಸರ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಹೇಗಿದೆ ‘ಲ್ಯಾಂಡ್‌ ಲಾರ್ಡ್‌’ ಸಿನೆಮಾ ಟೀಸರ್‌..?

ಇನ್ನು ಬಿಡುಗಡೆಯಾಗಿರುವ ‘ಲ್ಯಾಂಡ್‌ ಲಾರ್ಡ್‌’ ಸಿನೆಮಾದ ಟೀಸರ್‌ ಸಖತ್‌ ರಗಡ್‌ ಆಗಿ ಮೂಡಿಬಂದಿದೆ. ಚಿತ್ರದ ನಾಯಕ ನಟ ದುನಿಯಾ ವಿಜಯ್‌ ಮಾಸ್‌ ಆಗಿ ಆಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭೂ ಮಾಲೀಕರು ಮತ್ತು ಬಡ ಕಾರ್ಮಿಕರ ನಡುವಿನ ಸಂಘರ್ಷದ ರಕ್ತಸಿಕ್ತ ಕಥೆಯ ಎಳೆಯನ್ನು ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಟೀಸರ್‌ನಲ್ಲಿ ಹೇಳಲಾಗಿದೆ. ಟೀಸರ್‌ ಔಟ್‌ ಅಂಡ್‌ ಔಡ್‌ ಆಕ್ಷನ್‌ ಶೈಲಿಯಲ್ಲಿ ಮೂಡಿಬಂದಿದ್ದು, ಅದ್ಧೂರಿ ಮೇಕಿಂಗ್‌ ನೋಡುಗರ ಗಮನ ಸೆಳೆಯುವಂತಿದೆ. ಮಾಸ್‌ ಆಡಿಯನ್ಸ್‌ ಕೇಂದ್ರೀಕರಿಸಿ ನಿರ್ದೇಶಕ ಜಡೇಶ ಕೆ. ಹಂಪಿ ಚಿತ್ರವನ್ನು ತೆರೆಗೆ ತರುತ್ತಿರುವುದು ಟೀಸರಿನಲ್ಲಿ ಎದ್ದು ಕಾಣುತ್ತಿದೆ.

‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್ ಮಾಡಬಹುದು…

ಹೊಸ ವರ್ಷದ ಆರಂಭದಲ್ಲೇ ತೆರೆಗೆ ಬರಲಿದ್ದಾನೆ ‘ಲ್ಯಾಂಡ್‌ ಲಾರ್ಡ್‌’

‘ಸಾರಥಿ ಫಿಲಂಸ್‌’ ಬ್ಯಾನರಿನಲ್ಲಿ ಕೆ. ಎಸ್‌. ಹೇಮಂತ್‌ ಗೌಡ ಮತ್ತು ಕೆ. ವಿ. ಸತ್ಯ ಪ್ರಕಾಶ್‌ ಬಂಡವಾಳ ಹೂಡಿ ನಿರ್ಮಿಸುತ್ತಿರುವ ‘ಲ್ಯಾಂಡ್‌ ಲಾರ್ಡ್’‌ ಚಿತ್ರಕ್ಕೆ ಜಡೇಶ ಕೆ. ಹಂಪಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಲ್ಯಾಂಡ್‌ ಲಾರ್ಡ್‌’ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅವಿನಾಶ್‌, ಶರತ್‌ ಲೋಹಿತಾಶ್ವ, ಮಿತ್ರ ಮೊದಲಾದ ಕಲಾವಿದರ ದೊಡ್ಡ ತಾರಾಗಣವೇ ‘ಲ್ಯಾಂಡ್‌ ಲಾರ್ಡ್‌’ ಚಿತ್ರದಲ್ಲಿದೆ. ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಹಾಡುಗಳಿಗೆ ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸ್ವಾಮಿ ಜೆ. ಗೌಡ ಛಾಯಾಗ್ರಹಣವಿದ್ದು, ಕೆ. ಎಂ. ಪ್ರಕಾಶ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಟೀಸರ್‌ ಮೂಲಕ ಪ್ರೇಕ್ಷಕರ ಮುಂದೆ ಬೌಂದಿರುವ ‘ಲ್ಯಾಂಡ್‌ ಲಾರ್ಡ್‌’ ಮುಂದಿನ ವರ್ಷ, ಅಂದರೆ 23 ಜನವರಿ 2026ರಂದು ಥಿಯೇಟರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

Related Posts

error: Content is protected !!