‘ಬೆನ್ನಿ’ ನಂದಿತಾ ಶ್ವೇತಾ ಫಸ್ಟ್ ಝಲಕ್ ಹೊರಗೆ…
ಮಹಿಳಾ ಪ್ರಧಾನ ‘ಬೆನ್ನಿ’ ಚಿತ್ರದ ಫಸ್ಟ್‌ಲುಕ್ ರಿಲೀಸ್
ಕನ್ನಡ ಇಂಡಸ್ಟ್ರೀಗೆ ಮತ್ತೆ ನಂದಿತಾ ಶ್ವೇತಾ ಎಂಟ್ರಿ…’ಬೆನ್ನಿ’ಯಾಗಿ ಬಂದ ಜಿಂಕೆಮರಿ
‘ಬೆನ್ನಿ’ಯಾಗಿ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ಶ್ವೇತಾ
ಕನ್ನಡದಲ್ಲಿ ‘ನಂದಾ ಲವ್ಸ್ ನಂದಿತಾ’ ಸಿನೆಮಾ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದ ನಂದಿತಾ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದರು. ಇದೀಗ ಮತ್ತೊಮ್ಮೆ ನಂದಿತಾ ಶ್ವೇತಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಅದು ‘ಬೆನ್ನಿ’ ಎಂಬ ಹೊಸಚಿತ್ರದ ಮೂಲಕ.
ಸದ್ಯ ನಂದಿತಾ ಶ್ವೇತಾ ‘ಬೆನ್ನಿ’ ಎಂಬ ಮಹಿಳಾ ಪ್ರಧಾನ ಸಿನೆಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಈ ಚಿತ್ರದ ಫಸ್ಟ್‌ಲುಕ್ ರಿಲೀಸ್ ಆಗಿದೆ. ನಟಿ ಶ್ವೇತಾ ಇಲ್ಲಿ ‘ಬೆನ್ನಿ’ಯಾಗಿ ಟೈಲಟ್ ರೋಲ್ ಪ್ಲೇ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳ ವಿರುದ್ಧ ನಡೆಯುವ
ಪ್ರಸ್ತುತ ಕಾಲಘಟ್ಟ ಕಥಾಹಂದರವನ್ನು ‘ಬೆನ್ನಿ’ ಹೊಂದಿದೆ. ಫಸ್ಟ್ ಲುಕ್ ಗೆ ಕಿಚ್ಚ ಖಡಕ್ ಆಗಿ ವಾಯ್ಸ್ ಕೊಟ್ಟಿದ್ದು, ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಮಿಂಚಿದ್ದಾರೆ.
‘ಬೆನ್ನಿ’ ಸಿನೆಮಾದ ಫಸ್ಟ್‌ಲುಕ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಬಹು ಭಾಷೆಗಳಲ್ಲಿ ಬರುತ್ತಿದೆ ‘ಬೆನ್ನಿ’
ಇನ್ನು ‘ಬೆನ್ನಿ’ ಸಿನೆಮಾ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಸಿನಿಮಾಕ್ಕಿದೆ.















