71ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಗಳ ಘೋಷಣೆ
2023ನೇ ವರ್ಷದ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಗಳು ಪ್ರಕಟ
ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡ ಹಿಂದಿ ಚಿತ್ರರಂಗ… 
ಶಾರುಖ್ ಖಾನ್, ವಿಕ್ರಾಂತ್ ಮಾಸಿ, ರಾಣಿ ಮುಖರ್ಜಿಗೆ ಒಲಿದ ಪ್ರಶಸ್ತಿ
ನವದೆಹಲಿ, ಆ. 01, 2025; 2025ನೇ ವರ್ಷದ 71ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ (71st National Film Awards 2025)ಗಳನ್ನು ಇಂದು (01 ಆಗಸ್ಟ್, 2025) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಬಾರಿಯೂ ಹಿಂದಿ, ಮಲಯಾಳಂ ಚಿತ್ರರಂಗಗಳು ಹೆಚ್ಚಿನ ಪ್ರಶಸ್ತಿ ಬಾಚಿಕೊಂಡಿದ್ದು, ಕನ್ನಡ ಸಿನೆಮಾಕ್ಕೆ ಯಾವ ವಿಭಾಗದಲ್ಲಿಯೂ ಪ್ರಶಸ್ತಿಗಳು ಲಭಿಸಿಲ್ಲ.
ಪ್ರಶಸ್ತಿ ಆಯ್ಕೆ ಮಾಡಿದ ಅಶುತೋಷ್ ಸಮಿತಿ
ಅಂದಹಾಗೆ, ಕೇಂದ್ರ ಸರ್ಕಾರವು 71ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಗಳನ್ನು ಆಯ್ಕೆ ಮಾಡಲು ಬಾಲಿವುಡ್‌ನ ಖ್ಯಾತ ನಿರ್ದೇಶಕ ಅಶುತೋಷ್ ಗೋವರಿಕರ್ ಅವರ ಅಧ್ಯಕ್ಷತೆಯಲ್ಲಿ ‘ಫೀಚರ್ ಫಿಲಂ’ ವಿಭಾಗದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿತ್ತು. 
ಈ ಸಮಿತಿಯಲ್ಲಿ ಗೀತಾ ಗುರಪ್ಪಜಿ, ಅನೀಶ್ ಬಾಸು, ವಿಯನ್ ಆದಿತ್ಯ, ಎಂ. ಎನ್. ಸ್ವಾಮಿ, ಪರೇಶ್ ವೋಹ್ರಾ, ಸುಶೀಲ್ ರಾಜ್ಪಾಲ್, ಎಂ. ಮಣಿರಾಮ್, ಪ್ರದೀಪ್ ನಾಯರ್, ವಿವೇಕ್ ಪ್ರತಾಪ್, ಪ್ರಕೃತಿ ಮಿಶ್ರಾ ಅವರನ್ನು ಒಳಗೊಂಡ ಸದಸ್ಯರ ಆಯ್ಕೆ ಸಮಿತಿ 332 ಚಲನಚಿತ್ರಗಳನ್ನು ವೀಕ್ಷಣೆ ಮಾಡಿ ಅವುಗಳಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿತ್ತು.
ಪ್ರಶಸ್ತಿ ಗಳಿಕೆಯಲ್ಲಿ ಹಿಂದಿ ಚಿತ್ರರಂಗದ್ದೇ ಹವಾ!
ಅಂದಹಾಗೆ 2023ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ 71ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಗಳು ಅನ್ವಯವಾಗಲಿದ್ದು, 2023ನೇ ಸಾಲಿನ 71ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಗಳ ಪಟ್ಟಿಯಲ್ಲಿ ಶಾರುಖ್ ಖಾನ್, ವಿಕ್ರಾಂತ್ ಮಾಸಿ ಮತ್ತು ರಾಣಿ ಮುಖರ್ಜಿ ಮೊದಲ ಸ್ಥಾನದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ‘ಜವಾನ್’ ಸಿನೆಮಾದ ನಟನೆಗಾಗಿ ಶಾರುಖ್ ಖಾನ್ ಅವರು ‘ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ’12th ಫೇಲ್’ ಸಿನೆಮಾದ ನಟನೆಗಾಗಿ ವಿಕ್ರಾಂತ್ ಮಾಸಿ ಕೂಡ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ ಸಿನೆಮಾದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅವರು ‘ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ’ ಪಡೆದುಕೊಂಡಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಸಿನೆಮಾಗಳ ಪಟ್ಟಿ
- ವಿಶೇಷ ಗೌರವ – ‘ಅನಿಮಲ್’ (ರೀ ರೆಕಾರ್ಡಿಂಗ್)
- ಅತ್ಯುತ್ತಮ ಸ್ಟಂಟ್ – ‘ಹನುಮಾನ್’ (ತೆಲುಗು)
- ಅತ್ಯುತ್ತಮ ಕೊರಿಯೋಗ್ರಫಿ – ದಿಂಢೋರಾ ಬಾಜೋರೆ (‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ – ಹಿಂದಿ)
- ಅತ್ಯುತ್ತಮ ಗೀತ ಸಾಹಿತ್ಯ – ಕಾಸರಾಲ ಶ್ಯಾಮ (‘ಬಲಗಂ’ – ತೆಲುಗು)
- ಅತ್ಯುತ್ತಮ ಸಂಗೀತ – ಜಿ. ವಿ. ಪ್ರಕಾಶ್ ಕುಮಾರ್ (‘ವಾತಿ’ – ತಮಿಳು)
- ಹಿನ್ನೆಲೆ ಸಂಗೀತ – ಹರ್ಷವರ್ಧನ್ ರಾಮೇಶ್ (‘ಅನಿಮಲ್’ – ಹಿಂದಿ)
- ಅತ್ಯುತ್ತಮ ಪ್ರಸಾಧನ – ಶ್ರೀಕಾಂತ್ ದೇಸಾಯಿ (‘ಸ್ಯಾಮ್ ಬಹಾದ್ಧೂರ್’ – ಹಿಂದಿ)
- ಅತ್ಯುತ್ತಮ ವಸ್ತ್ರವಿನ್ಯಾಸ – ‘ಸ್ಯಾಮ್ ಬಹಾದ್ಧೂರ್’ (ಹಿಂದಿ)
- ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಮೋಹನ್ದಾಸ್ (‘2018’ – ಮಲಯಾಳಂ)
- ಅತ್ಯುತ್ತಮ ಸಂಕಲನ – ಮಿಧುನ್ ಮುರಳಿ (‘ಪೂಕಾಲಂ’ – ಮಲಯಾಳಂ)
- ಅತ್ಯುತ್ತಮ ಧ್ವನಿ ವಿನ್ಯಾಸ – ಸಚಿನ್ ಸುಧಾಕರ್, ಹರಿಹರ (‘ಅನಿಮಲ್’ – ಹಿಂದಿ)
- ಅತ್ಯುತ್ತಮ ಚಿತ್ರಕತೆ – ‘ಬೇಬಿ’ (ತೆಲುಗು), ‘ಪಾರ್ಕಿಂಗ್’ (ತಮಿಳು)
- ಅತ್ಯುತ್ತಮ ಸಂಭಾಷಣೆ- ‘ಸಿರ್ಫ್ ಎಕ್ ಬಂದಾ ಕಾಫಿ ಹೈ’ (ಹಿಂದಿ)
- ಅತ್ಯುತ್ತಮ ಸಿನಿಮಾಟೊಗ್ರಫಿ – ಪ್ರಸಂತನು ಮೋಹಪಾತ್ರ (‘ದಿ ಕೇರಳ ಸ್ಟೋರಿ’ – ಹಿಂದಿ)
- ಅತ್ಯುತ್ತಮ ಗಾಯಕಿ – ಚಲಿಯಾ (‘ಜವಾನ್’ – ಹಿಂದಿ)
- ಅತ್ಯುತ್ತಮ ಗಾಯಕ – ರೋಹಿತ್ಮ, ‘ಪ್ರೇಮಿಸ್ತುನ್ನಾ…’ (‘ಬೇಬಿ’ – ತೆಲುಗು)
- ಅತ್ಯುತ್ತಮ ಬಾಲ ಕಲಾವಿದರು – ‘ಗಾಂಧಿ ತಾತ ಚೆಟ್ಟು’ (ಸುಕ್ರುತಿ), ಮರಾಠಿ (ಜಿಪ್ಸಿ) ಕಬೀರ್ ಖಂದಾರೆ, ನಾಲ್ 2 (ಜಿಮ್ಮಿ)
- ಅತ್ಯುತ್ತಮ ಪೋಷಕ ನಟಿ – ಊರ್ವಶಿ (‘ಉಳುಲುಕ್ಕು’ – ಮಲಯಾಳಂ), ಜಾನಕಿ ಬೋಡಿವಾಲ – (‘ವಶ್’ – ಗುಜರಾತಿ)
- ಪೋಷಕ ನಟ – ವಿಜಯರಾಘವನ್ (‘ಪೂಕಾಲಂ’ – ಮಲಯಾಳಂ), ಮುತ್ತುಪೇಟೆ ಸೋನು ಭಾಸ್ಕರ್ (‘ಪಾರ್ಕಿಂಗ್’ – ತಮಿಳು)
- ಅತ್ಯುತ್ತಮ ನಟಿ – ರಾಣಿ ಮುಖರ್ಜಿ, (‘ಮಿಸ್ಟರ್ ಚಾಟರ್ಜಿ ವರ್ಸಸ್ ನಾರ್ವೆ’ – ಹಿಂದಿ)
- ಅತ್ಯುತ್ತಮ ನಟ – ಶಾರುಖ್ ಖಾನ್ (‘ಜವಾನ್’), ವಿಕ್ರಾಂತ್ ಮಾಸ್ಸಿ (’12th ಫೇಲ್’ – ಹಿಂದಿ)
- ಅತ್ಯುತ್ತಮ ನಿರ್ದೇಶಕ – ಸುದಿಪ್ತೋ ಸೇನ್, (‘ದಿ ಕೇರಳ ಸ್ಟೋರಿ’ – ಹಿಂದಿ)
- ಅತ್ಯುತ್ತಮ ಅನಿಮೇಟೆಡ್ ಚಿತ್ರ – ‘ಹನುಮಾನ್’ (ತೆಲುಗು)
- ಅತ್ಯುತ್ತಮ ಮಕ್ಕಳ ಚಿತ್ರ – ‘ನಾಲ್ 2’ (ಮರಾಠಿ)
- ಅತ್ಯುತ್ತಮ ಸಾಮಾಜಿಕ ಮೌಲ್ಯ ಚಿತ್ರ – ‘ಸ್ಯಾಮ್ ಬಹಾದ್ಧೂರ್’ (ಹಿಂದಿ)
- ಅತ್ಯುತ್ತಮ ಮನೊರಂಜನಾ ಚಿತ್ರ – ‘ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ’
- ಅತ್ಯುತ್ತಮ ಡೆಬ್ಯೂ ಚಿತ್ರ – ‘ಆತ್ಮಪಾಂಪಲೇಟ್’ (ಮರಾಠಿ)
- ಅತ್ಯುತ್ತಮ ಚಿತ್ರ – ’12th ಫೇಲ್’ (ಹಿಂದಿ)















