‘ZEE 5’ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ಕಹಾನಿ! ‘ಶೋಧ’ ಟ್ರೇಲರ್ ರಿಲೀಸ್
ಬಿಡುಗಡೆಯಾಯಿತು ‘ಶೋಧ’ ವೆಬ್ ಸೀರಿಸ್ ಟ್ರೇಲರ್
‘ZEE 5’ನಲ್ಲಿ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ‘ಶೋಧ’ ವೆಬ್ ಸರಣಿಗೆ ದಿನಗಣನೆ
ಆಗಸ್ಟ್ 29ರಿಂದ ‘ZEE 5’ನಲ್ಲಿ ‘ಶೋಧ’ ವೆಬ್ ಸರಣಿ ಸ್ಟ್ರೀಮಿಂಗ್
ಕೆಲ ತಿಂಗಳ ಹಿಂದಷ್ಟೇ ‘ZEE 5’ ಓಟಿಟಿ ವೇದಿಕೆಯಲ್ಲಿ ‘ಅಯ್ಯನ ಮನೆ’ ಎಂಬ ಹೆಸರಿನ ಮೊದಲ ವೆಬ್ ಸರಣಿ ಬಿಡುಗಡೆಯಾಗಿತ್ತು. ಈ ವೆಬ್ ಸರಣಿಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದ್ದು, ಅದರ ಸಕ್ಸಸ್ ಬೆನ್ನಲ್ಲೇ ‘ZEE 5’ ಮತ್ತೊಂದು ವೆಬ್ ಸರಣಿ ಘೋಷಿಸಿದೆ. ಅದರ ಹೆಸರು ‘ಶೋಧ’. ಇದೇ 2025ರ ಆಗಸ್ಟ್ 29ರಿಂದ ‘ಶೋಧ’ ವೆಬ್ ಸೀರೀಸ್ ಸ್ಟ್ರೀಮಿಂಗ್ ಆಗಲಿದೆ.
ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದು, ಸುನಿಲ್ ಮೈಸೂರು ನಿರ್ದೇಶನ ಮಾಡಿದ್ದಾರೆ. ‘ಕೆ.ಆರ್.ಜಿ ಸ್ಟುಡಿಯೋ’ ಬ್ಯಾನರ್ ನಡಿ ನಿರ್ಮಾಣವಾಗಿರುವ ಆರು ಎಪಿಸೋಡ್ ಗಳನ್ನು ‘ಶೋಧ’ ವೆಬ್ ಸರಣಿ ಒಳಗೊಂಡಿದ್ದು, ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಈ ವೆಬ್ ಸೀರೀಸ್ ಕಿರುತೆರೆ ಪ್ರೇಕ್ಷಕರ ಮುಂದೆ ಅನಾವರಣವಾಗಲಿದೆ.
ಮತ್ತೊಂದು ಕನ್ನಡ ವೆಬ್ ಸರಣಿಯ ಮೇಲೆ ‘ZEE 5’ ನಿರೀಕ್ಷೆ
‘ಶೋಧ’ ವೆಬ್ ಸರಣಿಯ ಬಗ್ಗೆ ಮಾತನಾಡಿರುವ ‘ZEE 5’ ಕನ್ನಡದ ವ್ಯವಹಾರ ಮುಖ್ಯಸ್ಥ ದೀಪಕ್ ಶ್ರೀರಾಮುಲು, ‘ಈ ಹಿಂದೆ ‘ಅಯ್ಯನ ಮನೆ’ ಸರಣಿಯ ಅಗಾಧ ಯಶಸ್ಸಿನ ನಂತರ, ‘ಶೋಧ’ ಮೂಲಕ ನಮ್ಮ ಪ್ರೇಕ್ಷಕರಿಗೆ ಮತ್ತೊಂದು ಶಕ್ತಿಶಾಲಿ ಕಥೆಯನ್ನು ತರಲು ನಾವು ಉತ್ಸುಕರಾಗಿದ್ದೇವೆ. ‘ಕೆ.ಆರ್.ಜಿ ಸ್ಟುಡಿಯೋಸ್’ನ ಪ್ರತಿಭಾನ್ವಿತ ತಂಡ ಮತ್ತು ಪವನ್ ಕುಮಾರ್‌ರಂತಹ ಬಹುಮುಖ ಕಲಾವಿದರೊಂದಿಗೆ ಸಹಯೋಗವು, ಈ ಯೋಜನೆಯನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ. ಶೋಧ ಒಂದು ಸಸ್ಪೆನ್ಸ್-ಥ್ರಿಲ್ಲರ್‌ಗಿಂತ ಹೆಚ್ಚಿನದಾಗಿದೆ. ಇದು ಭಾವನಾತ್ಮಕವಾಗಿ ಉತ್ಸುಕವಾಗಿರುವ, ಚಿಂತನಶೀಲ ಪ್ರಯಾಣವಾಗಿದ್ದು, ಇದು ಕನ್ನಡ ಕಥೆ ಹೇಳುವಿಕೆಯ ವಿಕಸನಗೊಳ್ಳುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇಂದು ಕನ್ನಡ ಸಿನಿಮಾಗಳು ಭಾರತ ಮತ್ತು ಅದರಾಚೆಗೆ ಹೃದಯಗಳನ್ನು ಗೆಲ್ಲುತ್ತಿವೆ. ಶೋಧ ತನ್ನ ಮಾನಸಿಕ ಆಳ, ಸಾಂಸ್ಕೃತಿಕ ವಿಶ್ವಾಸಾರ್ಹತೆ ಮತ್ತು ಹಿಡಿತದ ನಿರೂಪಣೆಯೊಂದಿಗೆ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ವೀಕ್ಷಕರು ಅದನ್ನು ಅನುಭವಿಸಲು ನಾವು ಕಾಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ZEE 5’ ನಲ್ಲಿ ಪ್ರಸಾರವಾಗಲಿರುವ ‘ಶೋಧ’ ವೆಬ್ ಸೀರಿಸ್‌ನ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಏನಿದೆ… ‘ಶೋಧ’ನೆಯಲ್ಲಿ..?
ಪ್ರಾಚೀನ ಕೊಡವ ಜಾನಪದ ಹಾಗೂ ಸಮಕಾಲೀನ ನೈತಿಕ ಸಂದಿಗ್ಥತೆಗಳ ಅಂಶಗಳನ್ನೊಳಗೊಂಡ ಕಥೆಯೇ ‘ಶೋಧ’ ವೆಬ್ ಸರಣಿಯ ಮೂಲ ಎಳೆಯಾಗಿದೆ. ನಟ ಪವನ್ ಕುಮಾರ್ ಈ ವೆಬ್ ಸರಣಿಯಲ್ಲಿ ರೋಹಿತ್ ಎಂಬ ವಕೀಲನ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ರವಿಕುಮಾರ್, ಅರುಣ್ ಸಾಗರ್ ಮತ್ತು ಅನುಷಾ ರಂಗನಾಥ್ ತಾರಾಬಳಗದಲ್ಲಿದ್ದಾರೆ. ವಕೀಲ ವೃತ್ತಿಯಲ್ಲಿ ಹೆಸರು ಮಾಡಿರುವ ರೋಹಿತ್, ಪತ್ನಿ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಆಗ ರೋಹಿತ್ ಪ್ರಪಂಚ ತೆರೆದುಕೊಳ್ಳುತ್ತದೆ. ಕಳೆದು ಹೋದ ಪತ್ನಿ ಮರಳಿ ಸಿಗುತ್ತಾಳೆ. ಮುಂದೆ ಕಥೆಯಲ್ಲಿ ಅನೇಕ ತಿರುವುಗಳು ಸಿಗುತ್ತವೆ. ಆ ತಿರುವುಗಳ ನಡುವೆ ‘ಶೋಧ’ ಹೇಗೆ ಸಾಗುತ್ತದೆ ಎಂಬುದನ್ನು ‘ಶೋಧ’ ಸರಣಿಯಲ್ಲೇ ನೋಡಬೇಕು. ಅಂದಹಾಗೆ, ಇದೇ 2025ರ ಆಗಸ್ಟ್ 29ರಿಂದ ‘ZEE 5’ ಓಟಿಟಿ ವೇದಿಕೆಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.















