‘ವಾಯುಪುತ್ರ’ ಅನಿಮೇಷನ್ ಸಿನಿಮಾ ಅನೌನ್ಸ್…
ದಸರಾಗೆ ಪಂಚ ಭಾಷೆಯಲ್ಲಿ ‘ವಾಯುಪುತ್ರ’ ಸಿನಿಮಾ ರಿಲೀಸ್
3ಡಿ ಅನಿಮೇಷನ್ ನಲ್ಲಿ ‘ವಾಯುಪುತ್ರ’ ಸಿನಿಮಾ ತೆರೆಗೆ ಬರ್ತಿದೆ
ಸೂಪರ್ ಹೀರೋ ‘ವಾಯುಪುತ್ರ’ ಸಾಹಸ ಕಥೆ 
ಭಾರತೀಯ ಚಿತ್ರರಂಗದಲ್ಲಿ ‘ವಾಯುಪುತ್ರ’ ಅಥವಾ ‘ಹನುಮಾನ್’ ಹೆಸರಿನಲ್ಲಿ ಹಲವು ಸಾಹಸ ಕಥೆಗಳು ಸಿನೆಮಾ ಆಗಿವೆ. ಅಂಥ ಬಹುತೇಕ ಚಿತ್ರಗಳು ಸೂಪರ್ ಹಿಟ್ ಕೂಡ ಆಗಿವೆ. ಇದೀಗ ‘ವಾಯುಪುತ್ರ’ ಟೈಟಲ್ ನಡಿ ಅನಿಮೇಷನ್ ರೂಪದಲ್ಲಿ ಮತ್ತೊಂದು ಸಿನೆಮಾ ಬೆಳ್ಳಿತೆರೆಗೆ ಬರೋದಿಕ್ಕೆ ತಯಾರಾಗಿ ನಿಂತಿದೆ. ಈಗಾಗಲೇ ಈ ‘ವಾಯುಪುತ್ರ’ ಸಿನೆಮಾದ ಬಹುತೇಕ ಕೆಲಸಗಳು ಸದ್ದಿಲ್ಲದೆ ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾ ಬಿಡುಗಡೆಯಾಗಿ ತೆರೆಗೆ ಬರುವ ಸಮಯವನ್ನು ಅಧಿಕೃತವಾಗಿ ಘೋಷಿಸಿದೆ. ತೆಲುಗಿನ ‘ಸಿತಾರಾ ಎಂಟರ್ಟೈನ್ಮೆಂಟ್’ ಮತ್ತು ‘ಫಾರ್ಚೂನ್ ಫೋರ್ ಸಿನಿಮಾಸ್’ ಬ್ಯಾನರ್ ನಡಿ ನಾಗವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಿಸಿರುವ ‘ವಾಯುಪುತ್ರ’ ಸಿನೆಮಾವನ್ನು ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
ಸದ್ಯ ಈ ‘ವಾಯುಪುತ್ರ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಇದೇ 2025ರ ದಸರಾಗೆ ‘ವಾಯುಪುತ್ರ’ ಬಿಡುಗಡೆಯಾಗುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ 3ಡಿ ಅನಿಮೇಷನ್ ನಲ್ಲಿ ‘ವಾಯುಪುತ್ರ’ ಸಿನೆಮಾ ಬಿಡುಗಡೆ ಆಗಲಿದೆ.
ಗಮನ ಸೆಳೆದ ಪೋಸ್ಟರ್‌ಗಳು…
‘ಕಾರ್ತಿಕೇಯ’, ‘ಕಾರ್ತಿಕೇಯ-2’ ಹಾಗೂ ‘ತಂಡೇಲ್’ ಸಿನಿಮಾಗಳನ್ನು ನಿರ್ದೇಶಿಸಿರುವ ಚಂದೂ ಮೊಂಡೆಟಿ ಸೂಪರ್ ಹೀರೋ ‘ವಾಯುಪುತ್ರ’ ಸಿನೆಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ‘ಶ್ರೀಕರ ಸ್ಟುಡಿಯೋಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಸದ್ಯ ಚಿತ್ರತಂಡ ಎರಡು ಪೋಸ್ಟರ್ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಉಳಿದ ಅಪ್ ಡೇಟ್ ಗಳನ್ನು ಚಿತ್ರತಂಡ ನೀಡಲಿದೆ.















