Quick ಸುದ್ದಿಗೆ ಒಂದು click

‘ಕಾಂತಾರ-1’ ಸಿನೆಮಾ ಟ್ರೇಲರ್‌ ರಿಲೀಸ್‌ ಡೇಟ್‌ ಫಿಕ್ಸ್‌

ಇದೇ ಸೆ. 22 ರಂದು ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ಬಿಡುಗಡೆ 

‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಿಸಿದ ‘ಹೊಂಬಾಳೆ ಫಿಲಂಸ್‌’

‘ಹೊಂಬಾಳೆ’ಯ ಅಧಿಕೃತ ಯೂ-ಟ್ಯೂಬ್ ಚಾನೆಲ್​​​ನಲ್ಲಿ ಟ್ರೇಲರ್‌

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕುರಿತು ಇಲ್ಲಿಯವರೆಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಸುದ್ದಿಗೋಷ್ಠಿಯನ್ನಾಗಲಿ ನಡೆಸಿಲ್ಲ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಮೇಕಿಂಗ್‌ ವಿಡಿಯೋ ತುಣುಕನ್ನು ಹೊರತುಪಡಿಸಿದರೆ, ಇಲ್ಲಿಯವರೆಗೆ ಸಿನೆಮಾದ ಹಾಡುಗಳಾಗಲಿ ಅಥವಾ ಟೀಸರ್‌ ಆಗಲಿ ಬಿಡುಗಡೆಯಾಗಿಲ್ಲ. ಇದೀಗ ನೇರವಾಗಿ ‘ಕಾಂತಾರ: ಚಾಪ್ಟರ್ 1’ ಸಿನೆಮಾವನ್ನು ಬಿಡುಗಡೆಯ ಹಂತಕ್ಕೆ ತಂದಿರುವ ನಿರ್ಮಾಣಣ ಸಂಸ್ಥೆ ‘ಹೊಂಬಾಳೆ ಫಿಲಂಸ್‌’ ಇದೀಗ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಸೆ. 22ರ ಮಧ್ಯಾಹ್ನ ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ 

‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್‌ ಇದೇ 2025ರ ಸೆಪ್ಟೆಂಬರ್‌ ತಿಂಗಳ 22 ನೇ ಸೋಮವಾರ ಮಧ್ಯಾಹ್ನ 12:45ಕ್ಕೆ ಬಿಡುಗಡೆ ಆಗಲಿದೆ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್‌ ‘ಹೊಂಬಾಳೆ ಫಿಲಂಸ್‌’ನ  ಅಧಿಕೃತ ಯೂ-ಟ್ಯೂಬ್ ಚಾನೆಲ್​​​ನಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ಮೇಲೆ ಗರಿಗೆದರಿದ ನಿರೀಕ್ಷೆ

ಎರಡು ತಿಂಗಳ ಹಿಂದಷ್ಟೇ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಮೇಕಿಂಗ್ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸಿನೆಮಾದ ಸೆಟ್, ಮೇಕಿಂಗ್, ಕಲಾವಿದರು, ತಂತ್ರಜ್ಞರ ಶ್ರಮವನ್ನು ಆ ವಿಡಿಯೋದಲ್ಲಿ ತೋರಿಸಲಾಗಿತ್ತು. ಜೊತೆಗೆ ಸಿನೆಮಾದ ಸೆಟ್​​ಗಳು ಎಷ್ಟು ಬೃಹತ್ ಆಗಿವೆ, ಭಿನ್ನವಾಗಿದೆ. ಅದಕ್ಕಾಗಿ ಎಷ್ಟು ಶ್ರಮಪಡಲಾಗಿದೆ ಎಂಬುದನ್ನು ವಿಡಿಯೋದಲ್ಲಿ ತೆರೆದಿಡಲಾಗಿತ್ತು. ‘ಕಾಂತಾರ: ಚಾಪ್ಟರ್ 1’ ಮೇಕಿಂಗ್‌ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಟ್ರೇಲರ್‌ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಸಹಜವಾಗಿಯೇ ಟ್ರೇಲರ್‌ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ.

Related Posts

error: Content is protected !!