Telewalk

‘ZEE 5’ ಮತ್ತು ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್‌ ಸೀರಿಸ್‌

ಶೀಘ್ರದಲ್ಲಿಯೇ ‘ZEE 5’ನಲ್ಲಿ ‘ಮಾರಿಗಲ್ಲು’ ವೆಬ್‌ ಸೀರಿಸ್‌ ಸ್ಟ್ರೀಮಿಂಗ್‌

‘ZEE 5’ ಮತ್ತು ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಬರಲಿದೆ ಹೊಸ ಡಿವೈನ್‌-ಥ್ರಿಲ್ಲರ್‌ ವೆಬ್‌ ಸರಣಿ

ಕದಂಬರ ಹಿನ್ನೆಲೆಯ ‘ಮಾರಿಗಲ್ಲು’ ಸಸ್ಪೆನ್ಸ್‌ ರೂಪದರಲ್ಲಿ ತೆರೆಗೆ

ಭಾರತದ ಪ್ರಮುಖ ಓಟಿಟಿ ಪ್ಲಾಟ್ ಫಾರ್ಮ್/ ವೇದಿಕೆಗಳಲ್ಲೊಂದಾಗಿರುವ ‘ZEE 5’ ಈಗ ಮತ್ತೊಂದು ಹೊಸ ವೆಬ್‌ ಸರಣಿಯನ್ನು ಕನ್ನಡದ ಪ್ರೇಕ್ಷಕರಿಗೆ ಪರಿಚಯಿಸುವ ತಯಾರಿ ಮಾಡಿಕೊಂಡಿದೆ. ಹೌದು, ಈ ಬಾರಿ ‘ZEE 5’ ಸಂಸ್ಥೆ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾಗ ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ನ ಸಹಯೋಗದಲ್ಲಿ ‘ಮಾರಿಗಲ್ಲು’ ಎಂಬ ಹೊಸ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಈ ವೆಬ್‌ ಸರಣಿಯ ಬಹುತೇಕ ತೆರೆಮರೆಯ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ‘ZEE 5’ ಮತ್ತು ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಜಂಟಿಯಾಗಿ ಈ ‘ಮಾರಿಗಲ್ಲು’ ಎಂಬ ಹೊಸ ವೆಬ್‌ ಸರಣಿಯ ಶೀರ್ಷಿಕೆಯನ್ನು  ಅಧಿಕೃತವಾಗಿ ಘೋಷಿಸಿವೆ.

ಕರ್ನಾಟಕ ಜಾನಪದ ‘ಮಾರಿಗಲ್ಲು’ ಸರಣಿಯಲ್ಲಿ ಅನಾವರಣ

ಇನ್ನು ಘೋಷಣೆಯಾಗಿರುವ ‘ಮಾರಿಗಲ್ಲು’ ಎಂಬ ಶೀರ್ಷಿಕೆಯುಳ್ಳ ಈ ವೆಬ್ ಸರಣಿ ಕರ್ನಾಟಕ ಜಾನಪದವನ್ನು ಹೇಳುವ‌ ಒಂದು ದೈವಿಕ ಥ್ರಿಲ್ಲರ್ ಕಥಾನಕ ಹೊಂದಿರಲಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ ಎಂಬುದು ಗಮನಾರ್ಹ ಸಂಗತಿ. ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯನ್ನು ಹೊಂದಿರುವ ಈ ಕಥೆಯು, ಕದಂಬರ ಪ್ರಥಮ ರಾಜನಾದ ಮಯೂರ ವರ್ಮನ ಪರಂಪರೆಯನ್ನು ಸಂಭ್ರಮಿಸುತ್ತಿದೆ. ಕದಂಬರ ಕಾಲದಿಂದಲ್ಲೂ ‘ಮಾರಿ’ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆಯನ್ನು ಹೆಣೆದಿದ್ದು, ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾಗಿ ಪಾತ್ರಗಳು ಯಾವ ರೀತಿ ವರ್ತಿಸುತ್ತಾರೆ, ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟೆ ಅಲ್ಲದೆ ಈ ಕಥೆಯು ಸಾಂಸ್ಕೃತಿಕ ಶ್ರೀಮಂತಿಕೆ, ದೈವ ಭಕ್ತಿ,‌ ಜಾನಪದ ಮುಂತಾದ ವಿಷಯಗಳನ್ನೂ ಒಳಗೊಂಡಿರುತ್ತದೆ ಎಂದು ಎರಡೂ ಸಂಸ್ಥೆಗಳೂ ತಿಳಿಸಿವೆ.

‘ಮಾರಿಗಲ್ಲು’ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಕಥೆ

‘ಮಾರಿಗಲ್ಲು’ ವೆಬ್ ಸರಣಿ ಕುರಿತಾಗಿ ಮಾತನಾಡಿರುವ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, ‘ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ ಮತ್ತು ಅಂತಹ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. ‘ಮಾರಿಗಲ್ಲು’ ಅಂತಹ ಒಂದು ಕಥೆಯಾಗಿದೆ. ಈ ಕಥೆಯು ಕೇವಲ ರಹಸ್ಯ, ಥ್ರಿಲ್, ಆಕ್ಷನ್ಗಳನ್ನು ಒಳಗೊಂಡದೆ, ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಮುಂತಾದವುಗಳ್ಳನ್ನೂ ಒಳಗೊಂಡಿರುವ ವಿಭಿನ್ನ ಮಿಶ್ರಣವಾಗಿದೆ‌. ಇದು ಪ್ರತಿ ಒಬ್ಬರು ಕಣ್ಣರಳಿಸಿ ನೋಡುವಂಥಾ ಥ್ರಿಲ್ಲರ್ ಕಥೆಯಾಗಲಿದೆ’ ಎಂದು ಹೇಳಿದ್ದಾರೆ.

ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನ…

‘ಜೀ5 ಕನ್ನಡ’ ಬಿಸಿನೆಸ್ ಮುಖ್ಯಸ್ಥ ಶ್ರೀ ದೀಪಕ್ ಶ್ರಿರಾಮುಲು ಮಾತನಾಡಿ, ”ಮಾರಿಗಲ್ಲು’ ನಾವು ಹಿಂದೆಂದೂ ಮಾಡದ ಪ್ರಯೋಗವಾಗಿದೆ. ದುರಾಸೆ, ರಹಸ್ಯ, ಮೋಹ,‌ ದೈವ ಭಕ್ತಿ ಮುಂತಾದ ಅನೇಕ ವಿಷಯಗಳ ವಿಭಿನ್ನ ಮಿಶ್ರಣವಾದ ಈ‌ ಕಥೆ ಕನ್ನಡ ನಾಡಿನ ಜಾನಪದವನ್ನು ಕೂಡ ಎತ್ತಿ‌ ಹಿಡಿಯಲಿದೆ. ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು. ‘ಮಾರಿ’ ದೇವತೆಯಿಂದ ಕಾಯಲ್ಪಟ್ಟಿದ ಕದಂಬರ ನಿಧಿಯ ಕಳವು ಮತ್ತು ಹುಡುಕಾಟದ ಸುತ್ತ ಇಡೀ‌ ಕಥೆಯನ್ನು ಹೆಣೆಯಲಾಗಿದೆ. ಈ ಥ್ರಿಲ್ಲರ್ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದಿಡಲು ನಾವು ಉತ್ಸುಕರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

‘ಮಾರಿಗಲ್ಲು’ನಂತಹ ಕುತೂಹಲಕಾರಿ ಕಥೆಗಳನ್ನು ಪ್ರೇಕ್ಷಕರಿಗೆ ಓಟಿಟಿ ವೇದಿಕೆಗಳ ಮೂಲಕ ಲಭ್ಯಗೊಳಿಸಬೇಕೆಂಬುದು ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು. ಉತ್ತಮ ಗುಣಮಟ್ಟದ ಕಥೆಗಳನ್ನು ಜನರಿಗೆ ಓಟಿ‌ಟಿಯ ಮೂಲಕ ನೀಡಬೇಕೆಂಬ ಅವರ‌ ಆ‌‌ ಕನಸಿಗೆ ‘ಮಾರಿಗಲ್ಲು’ ಮುನ್ನುಡಿಯಾಗಲಿದೆ ಎಂದು ‘ಪಿ.ಆರ್‌.ಕೆ ಪ್ರೊಡಕ್ಷನ್ಸ್‌’ ಹೇಳಿಕೊಂಡಿದೆ.

Related Posts

error: Content is protected !!