Video

‘ತೀರ್ಥರೂಪ ತಂದೆಯವರಿಗೆ…’ ಚಿತ್ರದ ‘ನೀ ನನ್ನವಳೇ…’ ಗೀತೆ ಬಿಡುಗಡೆ

‘ತೀರ್ಥರೂಪ ತಂದೆಯವರಿಗೆ…’ ಚಿತ್ರದ ಎರಡನೇ ಹಾಡು ರಿಲೀಸ್

‘ನೀ ನನ್ನವಳೇ…’ ಎಂಬ ಮೆಲೋಡಿ ಹಾಡಿನಲ್ಲಿ ಮಿಂಚಿದ ನಿಹಾರ್ ಮುಖೇಶ್-ರಚನಾ ಇಂದರ್

ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿರುವ ಗೀತೆ

ಈ ಹಿಂದೆ ‘ಹೊಂದಿಸಿ ಬರೆಯರಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ, ಈ ಬಾರಿ ‘ತೀರ್ಥರೂಪ ತಂದೆಯವರಿಗೆ’ ಎಂಬ ಅಚ್ಚಕನ್ನಡದ ಶೀರ್ಷಿಕೆಯನ್ನು ಹೊತ್ತ ಮತ್ತೊಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ‘ತೀರ್ಥರೂಪ ತಂದೆಯವರಿಗೆ’ ಸಿನೆಮಾದ ಮೊದಲ ಹಾಡನ್ನು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮತ್ತು ಚಿತ್ರತಂಡ ಬಿಡುಗಡೆ ಮಾಡಿತ್ತು. ‘ನನದೇ ಜಗದಲಿ…’ ಎಂಬ ಈ ಹಾಡು ಬಳಿಕ ಒಂದಷ್ಟು ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು. ಇದೀಗ ‘ತೀರ್ಥರೂಪ ತಂದೆಯವರಿಗೆ’ ಚಿತ್ರತಂಡ ಚಿತ್ರದ ‘ನೀ ನನ್ನವಳೇ…’ ಎಂಬ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ನೀ ನನ್ನವಳೇ…’ ಹಾಡು..?

‘ನೀ ನನ್ನವಳೇ…’ ಎಂಬ ಸಾಲುಗಳಿಂದ ಶುರುವಾಗುವ ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಎರಡನೇ ಗೀತೆಗೆ ನಾಗಾರ್ಜುನ ಶರ್ಮ ಸಾಹಿತ್ಯ ರಚಿಸಿದ್ದಾರೆ. ಜೋ‌ ಕೋಸ್ಟ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಗೀತೆಗೆ ರಜತ್ ಹೆಗ್ಡೆ, ಈಶಾ ಸುಚಿ ಧ್ವನಿಯಾಗಿದ್ದಾರೆ. ತೆರೆಮೇಲೆ ಈ ಹಾಡಿನಲ್ಲಿ ನಾಯಕ ನಿಹಾರ್ ಮುಖೇಶ್ ಹಾಗೂ ನಾಯಕಿ ರಚನಾ ಇಂದರ್ ಮಿಂಚಿದ್ದಾರೆ. ‘ಆನಂದ್ ಆಡಿಯೋ’ ಯೂ-ಟ್ಯೂಬ್ ಚಾನೆಲ್‌ ನಲ್ಲಿ ‘ನೀ ನನ್ನವಳೇ…’ ಎಂಬ ಮೆಲೋಡಿ ಗೀತೆ ಬಿಡುಗಡೆಯಾಗಿದ್ದು, ಸದ್ಯ ಈ ಗೀತೆ ನಿಧಾನವಾಗಿ ಕೇಳುಗರನ್ನು ಸೆಳೆಯುತ್ತಿದೆ.

‘ತೀರ್ಥರೂಪ ತಂದೆಯವರಿಗೆ’ ಚಿತ್ರದ ‘ನೀ ನನ್ನವಳೇ…’ ಎಂಬ ಗೀತೆಯ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ವರ್ಷಾಂತ್ಯಕ್ಕೆ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ತೆರೆಗೆ

‘ತೀರ್ಥರೂಪ ತಂದೆಯವರಿಗೆ’ ಚಿತ್ರದಲ್ಲಿ ನಿಹಾರ್‌ ಮುಖೇಶ್‌ ಮತ್ತು ರಚನಾ ಇಂದರ್‌ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ, ಅಶ್ವಿತಾ ಹೆಗಡೆ ಸೇರಿದಂತೆ ದೊಡ್ಡ ಕಲಾವಿದರ ತಾರಾಬಳಗವೇ ಚಿತ್ರದಲ್ಲಿದೆ. ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿರುವ ‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದು, ನಿರ್ದೇಶನದ ಮಾಡುತ್ತಿದ್ದಾರೆ. ಈ ಹಿಂದೆ ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ದೀಪಕ್ ಯರಗೇರಾ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಕಾರ್ಯವಿದೆ. ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ಇದೇ ವರ್ಷಾಂತ್ಯಕ್ಕೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Related Posts

error: Content is protected !!