ಬಾಲಕೃಷ್ಣ ನಟನೆಯ ‘ಅಖಂಡ-2’ ಟ್ರೇಲರ್ ರಿಲೀಸ್
ಅದ್ಧೂರಿಯಾಗಿ ಹೊರಬಂತು ‘ಅಖಂಡ-2’ ಟ್ರೇಲರ್
ಮಾಸ್ ಕಂಟೆಂಟ್, ಆಕ್ಷನ್ ಪ್ಯಾಕ್ ಟ್ರೇಲರ್‌ನಲ್ಲಿ ರಾಯಲ್ ಎಂಟ್ರಿಕೊಟ್ಟ ನಂದಮುರಿ ಬಾಲಕೃಷ್ಣ
ತೆಲುಗು ನಟ ಬಾಲಯ್ಯ ಸಿನೆಮಾದ ಭರ್ಜರಿ ಕ್ರೇಜ್!
ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಅಖಂಡ-2’ ತೆರೆಗೆ ಬರಲು ತಯಾರಾಗಿದೆ. ಇದೇ 2025ರ ಡಿಸೆಂಬರ್ ಮೊದಲ ವಾರ ‘ಅಖಂಡ-2’ ಚಿತ್ರ ಅದ್ಧೂರಿಯಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿದೆ. ಇದೇ ವೇಳೆ ‘ಅಖಂಡ-2’ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿ ಹೊರಬಂದಿದೆ. 
ಹೇಗಿದೆ ‘ಅಖಂಡ-2’ ಟ್ರೇಲರ್..?
ಈ ಹಿಂದೆ ತೆಲುಗಿನಲ್ಲಿ ತೆರೆಗೆ ಬಂದ ‘ಅಖಂಡ’ ಸಿನೆಮಾದ ಮುಂದುವರೆದ ಭಾಗವಾಗಿ ‘ಅಖಂಡ-2’ ಸೀಕ್ವೆಲ್ ತೆರೆಗೆ ಬರುತ್ತಿದೆ. ಕರ್ನಾಟಕದ ಚಿಕ್ಕಬಳ್ಳಾಪುರದ ಚಿಂತಾಮಣಿಯ ಚಿನ್ನಸಂದ್ರ ಬಳಿ ಬೃಹತ್ ವೇದಿಕೆಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ‘ಅಖಂಡ-2’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ಇನ್ನು ಔಟ್ ಅಂಡ್ ಔಟ್ ಮಾಸ್ ಕಂಟೆಂಟ್ ಹೊತ್ತು ‘ಅಖಂಡ-2’ ಟ್ರೇಲರ್ ಹೊರಬಂದಿದೆ. ಅದ್ದೂರಿ ಮೇಕಿಂಗ್, ಬೃಹತ್ ಕಲಾವಿದರ ತಾರಾಗಣ, ಕಣ್ಣು ಕುಕ್ಕುವಂತಿರುವ ಗ್ರಾಫಿಕ್ಸ್ ಕೆಲಸಗಳು ‘ಅಖಂಡ-2’ ಸಿನೆಮಾದ ಟ್ರೇಲರಿನಲ್ಲಿ ಗಮನ ಸೆಳೆಯುವಂತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ತೆಲುಗಿನ ಮಾಸ್ ಆಡಿಯನ್ಸ್ ಅಭಿರುಚಿಯನ್ನು ಗಮನದಲ್ಲಿ ಇಟ್ಟುಕೊಂಡು ‘ಅಖಂಡ-2’ ಸಿನೆಮಾವನ್ನು ತೆರೆಗೆ ತರುತ್ತಿರುವ ಸುಳಿವನ್ನು ಚಿತ್ರತಂಡ, ಟ್ರೇಲರ್ ಮೂಲಕ ಬಿಟ್ಟುಕೊಟ್ಟಿದೆ.
ನಂದಮುರಿ ಬಾಲಕೃಷ್ಣ ಅಭಿನಯದ ‘ಅಖಂಡ-2’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಡಿಸೆಂಬರ್ 5ಕ್ಕೆ ‘ಅಖಂಡ-2’ ತೆರೆಗೆ
‘ಅಖಂಡ-2’ ಬೋಯಪಾಟಿ ಶ್ರೀನು ನಿರ್ದೇಶನದ ಫ್ಯಾಂಟಸಿ ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ. ಎಸ್. ಎಸ್. ತಮನ್ ‘ಅಖಂಡ-2′ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ತೆಲುಗಿನ ಪ್ರತಿಷ್ಠಿತ ’14 ರೀಲ್ಸ್ ಪ್ಲಸ್’ ಬ್ಯಾನರ್ ಮೂಲಕ ‘ಅಖಂಡ-2’ ಚಿತ್ರ ನಿರ್ಮಾಣ ಆಗುತ್ತಿದೆ. ರಾಮ್ ಅಚಂತ ಹಾಗೂ ಗೋಪಿಚಂದ್ ಅಚಂತ ‘ಅಖಂಡ-2’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಕೃಷ್ಣ ಪುತ್ರಿ ಎಂ. ತೇಜಸ್ವಿನಿ ನಂದಮೂರಿ ‘ಅಖಂಡ-2’ ಸಿನೆಮಾವನ್ನು ಪ್ರಸ್ತುತಪಡಿಸಿದ್ದಾರೆ. ‘ಅಖಂಡ-2’ ಚಿತ್ರದಲ್ಲಿ ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ಅಭಿನಯಿಸಿದ್ದಾರೆ. ಇದೇ 2025ರ ಡಿಸೆಂಬರ್ 5ರಂದು ‘ಅಖಂಡ-2’ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ.















