ಧರ್ಮ ಆಕ್ಷನ್ ಕಿಕ್… ‘ದಾಸರಹಳ್ಳಿ’ ಟ್ರೇಲರ್ ಔಟ್

ಇತ್ತೀಚೆಗೆ ‘ಬಿಗ್‌ಬಾಸ್’ ಮನೆಯಿಂದ ಹೊರಬಂದಿರುವ ನಟ ಧರ್ಮ ಕೀರ್ತಿರಾಜ್ ಈಗ ಔಟ್ ಅಂಡ್ ಔಟ್ ಮಾಸ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಧರ್ಮ ಕೀರ್ತಿರಾಜ್ ಅಭಿನಯದ ‘ದಾಸರಹಳ್ಳಿ’ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಚಿತ್ರತಂಡ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಇನ್ನು ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಲವ್ ಕಂ ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಚಾಕ್ಲೇಟ್ ಬಾಯ್ ಎಂದೇ ಕರೆಸಿಕೊಳ್ಳುತ್ತಿದ್ದ ನಟ ಧರ್ಮ ಕೀರ್ತಿರಾಜ್ ‘ದಾಸರಹಳ್ಳಿ’ ಸಿನೆಮಾದಲ್ಲಿ ಔಟ್ ಅಂಡ್ ಔಟ್ ಆಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಿ. ಉಮೇಶ ನಿರ್ಮಾಣದಲ್ಲಿ ಮೂಡಿಬಂದಿರುವ ‘ದಾಸರಹಳ್ಳಿ’ ಸಿನೆಮಾಕ್ಕೆ ಎಂ. ಆರ್. ಶ್ರೀನಿವಾಸ್ ನಿರ್ದೇಶನವಿದೆ. ‘ದಾಸರಹಳ್ಳಿ’ ಸಿನೆಮಾದಲ್ಲಿ ನಾಯಕ ಧರ್ಮ ಕೀರ್ತಿರಾಜ್ ಅವರಿಗೆ ನೇಹಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ದಾಸರಹಳ್ಳಿ’ ಯಲ್ಲಿ 150ಕ್ಕೂ ಹೆಚ್ಚು ಕಲಾವಿದರು
‘ವೈಷ್ಣವಿ ವಸುಂಧರೆ ಕ್ರಿಯೇಷನ್ಸ್’ ಬ್ಯಾನರ್ ನಡಿ ಪಿ. ಉಮೇಶ ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ , ಎಂ ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ , ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್,ಅರಸಿಕೆರೆ ರಾಜು ಸೇರಿದಂತೆ 150ಕ್ಕೂ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ.
ಉಳಿದಂತೆ ಸಂಗೀತ – ಎಂ. ಎಸ್. ತ್ಯಾಗರಾಜ, ಛಾಯಾಗ್ರಹಣ -ಸಿ ನಾರಾಯಣ್ ಮತ್ತು ಬಾಲು, ಸಂಕಲನ -ಆರ್. ಡಿ. ರವಿ (ದೊರೆರಾಜ್), ಸಾಹಸ – ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ, ಚಿತ್ರಕಥೆ, ಸಂಭಾಷಣೆ – ಶಿವರಾಜ್, ಸಾಯಿ ಕೃಷ್ಣ ಹೆಬ್ಬಾಳ, ತಾಂತ್ರಿಕ ನಿರ್ದೇಶನ – ಶರಣ್ ಗದ್ವಾಲ್, ಸಹ ನಿರ್ದೇಶನ – ಗಹನ್ ನಾಯಕ್ ನಿರ್ವಹಿಸಿದ್ದಾರೆ. ಮುಂದಿನ ವರ್ಷ ಅಂದ್ರೆ 2025ರ ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.