Street Beat

‘ನವರತ್ನ’ ಆಭರಣಕ್ಕೆ ರಚನಾ ರೈ ರಾಯಭಾರಿ…

ಪ್ರತಿಷ್ಟಿತ ‘ನವರತನ್‌ ಜುವೆಲ್ಲರ್ಸ್’ಗೆ ರಚನಾ ಬ್ರ್ಯಾಂಡ್‌ ಅಂಬಾಸಿಡರ್‌

‘ದಿ ಡೆವಿಲ್’ ಬಿಡುಗಡೆ ಬೆನ್ನಲ್ಲೇ ಕರಾವಳಿ ಚೆಲುವೆ ರಚನಾ ರೈಗೆ ಕುದುರಿದ ಮತ್ತೊಂದು ಚಾನ್ಸ್..

‘ಡೆವಿಲ್ ಕ್ವೀನ್’ ರಚನಾ ರೈ ಈಗ ಆಭರಣ ಬ್ರ್ಯಾಂಡ್‌ ಅಂಬಾಸಿಡರ್…

ಇತ್ತೀಚೆಗಷ್ಟೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ದಿ ಡೆವಿಲ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ನಾಯಕ ನಟ ದರ್ಶನ್‌ ಅವರಿಗೆ ಕರಾವಳಿ ಸುಂದರಿ ರಚನಾ ರೈ ನಾಯಕ ನಟಿಯಾಗಿ ಜೋಡಿಯಾಗಿದ್ದು, ಸ್ಯಾಂಡಲ್ ವುಡ್ ಅಂಗಳಕ್ಕೆ ರಚನಾ ರೈ ಗ್ರ್ಯಾಂಡ್‌ ಎಂಟ್ರಿಯನ್ನೇ ಕೊಟ್ಟಿದ್ದಾರೆ. ಸದ್ಯ ‘ದಿ ಡೆವಿಲ್’ ಸಿನೆಮಾದಲ್ಲಿ ನಾಯಕ ನಟಿ ರಚನಾ ರೈ ಅವರ ಅಭಿನಯಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದರ ನಡುವೆಯೇ ರಚನಾ ರೈ ಆಭರಣ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ.

ಹೌದು, ದಕ್ಷಿಣ ಭಾರತದ ಪ್ರತಿಷ್ಟಿತ ಆಭರಣ ಮಳಿಗೆಗಳಲ್ಲಿ ಒಂದಾಗಿರುವ ‘ನವರತ್ನ ಜುವೆಲ್ಲರ್ಸ್’ ಆಭರಣದ‌ ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಿಡರ್) ಆಗಿ ರಚನಾ ರೈ ಆಯ್ಕೆಯಾಗಿದ್ದಾರೆ. ‘ನವರತ್ನ ಜುವೆಲ್ಲರ್ಸ್’ ಆಭರಣ ಸಂಸ್ಥೆ ಅಧಿಕೃತವಾಗಿ ಈ ವಿಷಯವನ್ನು ಘೋಷಿಸಿದ್ದು, ರಚನಾ ರೈ ಅವರನ್ನು ತಮ್ಮ ಆಭರಣ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ.

Related Posts

error: Content is protected !!