ಸೈಕಲಾಜಿಕಲ್-ಥ್ರಿಲ್ಲರ್ ‘ಗ್ರೀನ್’ ಸಿನೆಮಾ ಓಟಿಟಿಗೆ ಎಂಟ್ರಿ
ಸದ್ದಿಲ್ಲದೆ ‘ZEE 5’ನಲ್ಲಿ ‘ಗ್ರೀನ್’ ಸಿನೆಮಾ ಪ್ರಸಾರ
ಹೊಸಥರ ಕಾಡುವ ‘ಗ್ರೀನ್’ ಸಿನೆಮಾ ‘ZEE 5’ ಓಟಿಟಿಯಲ್ಲಿ ಸ್ಟ್ರೀಮಿಂಗ್
ಮನೋಕಾಮನೆಗಳ ಮೇಲೊಂದು ಚಿತ್ರ!
ಕನ್ನಡದಲ್ಲಿ ಸೈಕಲಾಜಿಕಲ್-ಥ್ರಿಲ್ಲರ್ ಸಿನೆಮಾಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇನ್ನು ಓಟಿಟಿಯಲ್ಲಿ ಹುಡುಕಿದರೂ ಬೇರೆ ಭಾಷೆಯಲ್ಲಿ ನೂರಾರು ಸೈಕಾಲಜಿಕಲ್-ಥ್ರಿಲ್ಲರ್ ಸಿನೆಮಾಗಳು ಸಿಕ್ಕರೂ, ಕನ್ನಡದ ಸಿನೆಮಾಗಳು ಮಾತ್ರ ಬೆರಳೆಣಿಕೆಯಷ್ಟು ಸಿಗೋದು. ಹೀಗಿರುವಾಗಲೇ ಕನ್ನಡದ ಸೈಕಾಲಜಿಕಲ್-ಥ್ರಿಲ್ಲರ್ ಸಿನೆಮಾವೊಂದು ಓಟಿಟಿಗೆ ಎಂಟ್ರಿಯಾಗಿದೆ. ಅದರ ಹೆಸರು ‘ಗ್ರೀನ್’.
ಇದೇ ಡಿಸೆಂಬರ್ ಎರಡನೇ ವಾರದಿಂದ ‘ಗ್ರೀನ್’ ಸಿನೆಮಾ ಓಟಿಟಿ ಎಂಟ್ರಿಕೊಟ್ಟಿದ್ದು, ‘ZEE 5’ ಓಟಿಟಿಯಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ.
ಮನಸ್ಸು ಬೆರಗುಗೊಳಿಸುವ ‘ಗ್ರೀನ್’ ಚಿತ್ರಣ…
ಅಂದಹಾಗೆ, ‘ಗ್ರೀನ್’ ಚಿತ್ರದಲ್ಲಿ ವಿಭಿನ್ನ ಕಥಾಹಂದರವಿದೆ. ಇದು ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ. ತನ್ನ ಇಡೀ ಬದುಕನ್ನೇ ನಿಯಂತಣ ಮಾಡುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಪ್ರಯತ್ನಿಸುವ ನಾಯಕನ ಕಥೆಯೇ ‘ಗ್ರೀನ್’. ಇನ್ನು ‘ಗ್ರೀನ್’ ಸಿನೆಮಾದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಡಿಂಪಿ ಫಾಧ್ಯಾ, ಆರ್. ಜೆ. ವಿಕ್ಕಿ ಮತ್ತು ಶಿವ ಮಂಜು ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಗ್ರೀನ್’ ಚಿತ್ರದ ಶೀರ್ಷಿಕೆಗೆ ‘ನಿನ್ನೊಳಗಿನ ರಾಕ್ಷಸನ ಕಥೆ’ ಎಂಬ ಅಡಿಬರಹವಿದೆ. ‘ಗ್ರೀನ್’ ಚಿತ್ರಕ್ಕೆ ಕೆ. ಮಧುಸೂದನ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶಕ್ತಿ ಸ್ಯಾಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಗ್ರೀನ್’ ಸಿನೆಮಾವನ್ನು ರಾಜ್ ವಿಜಯ್ ಹಾಗೂ ಬಿ. ಎನ್. ಸ್ವಾಮಿ ನಿರ್ಮಾಣ ಮಾಡಿದ್ದಾರೆ. ಓಟಿಟಿಯಲ್ಲಿ ಕನ್ನಡದಲ್ಲೊಂದು ಸೈಕಾಲಜಿಕಲ್-ಥ್ರಿಲ್ಲರ್ ಸಿನೆಮಾವನ್ನು ನೋಡಿ ಆನಂದಿಸಬೇಕು ಎನ್ನುವವರು ತಮ್ಮ ಬಿಡುವಿನ ಸಮಯದಲ್ಲಿ ಒಮ್ಮೆ ‘ಗ್ರೀನ್’ ಸಿನೆಮಾ ನೋಡಬಹುದು.















