Pop Corner

ವಿಜಯ್ ದೇವರಕೊಂಡ ಹೊಸ ಸಿನೆಮಾ ಅನೌನ್ಸ್‌!

ವಿವಾಹದ ಬಳಿಕ ವಿಜಯ್ ದೇವರಕೊಂಡ ಹೊಸಚಿತ್ರ ಘೋಷಣೆ

‘ಹಾಯ್ ನಾನ್ನ’ ನಿರ್ದೇಶಕರ ಜೊತೆ ವಿಜಯ್ ದೇವರಕೊಂಡ ಹೊಸಚಿತ್ರ 

ಆಕರ್ಷಕ ಪೋಸ್ಟರ್‌ ಮೂಲಕ ಹೊಸಚಿತ್ರ ಘೋಷಿಸಿದ ಚಿತ್ರತಂಡ

ಕಳೆದ ಕೆಲ ತಿಂಗಳಿನಿಂದ ತಮ್ಮ ವಿವಾಹ ವಿಷಯಕ್ಕೆ ಸುದ್ದಿಯಾಗುತ್ತಿದ್ದ ಟಾಲಿವುಡ್ ‘ರೌಡಿಬಾಯ್’ ವಿಜಯ್ ದೇವರಕೊಂಡ ಈಗ ಹೊಸಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅವರ ಜೊತೆಗಿನ ವಿವಾಹದ ಬಳಿಕ ನಟ ವಿಜಯ್‌ ದೇವರಕೊಂಡ ಅಭಿನಯಿಸುತ್ತಿರುವ ಹೊಸಚಿತ್ರದ ಘೋಷಣೆಯಾಗಿದೆ.

ಹೆಸರಿಡದ ಚಿತ್ರದ ಆಕರ್ಷಕ ಪೋಸ್ಟರ್‌!

ಈ ಹಿಂದೆ ತೆಲುಗಿನಲ್ಲಿ ‘ಹಾಯ್ ನಾನ್ನ’ ಎಂಬ ಸೂಪರ್‌ ಹಿಟ್‌ ಸಿನೆಮಾವನ್ನು ನಿರ್ದೇಶಿಸಿದ್ದ ಶೌರ್ಯುವ್ ಜೊತೆ ಈ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಕೈ ಜೋಡಿಸಿದ್ದಾರೆ. ಇದೀಗ ಈ ಸಿನೆಮಾದ ಅನೌನ್ಸ್‌ಮೆಂಟ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡಲು ಆಕರ್ಷಕವಾಗಿದೆ. ಇನ್ನು ಈ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ನಾಲ್ಕು ಶ್ವಾನಗಳನ್ನು ಹಿಡಿದು ಗತ್ತಿನಿಂದ ನಡೆದು ಬರುತ್ತಿದ್ದಾರೆ. ಅವರ ಬೆನ್ನ ಹಿಂದೆ ಏಳು ಜನರು ವಿವಿಧ ಆಯುಧಗಳನ್ನು ಹಿಡಿದು ನಿಂತಿದ್ದಾರೆ‌.

ನುರಿತ ತಂತ್ರಜ್ಞರ ಕೈಯಲ್ಲಿ ಮೂಡಿಬರುತ್ತಿರುವ ಚಿತ್ರ…

ಸದ್ಯದ ಮಟ್ಟಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಜಾಗತಿಕ ಸಿನೆಮಾರಂಗದ ಅನೇಕ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್‌ನ ಖ್ಯಾತ ಸೂಪರ್‌ ಹಿಟ್‌ ಸರಣಿಗಳಾದ ‘ಹೌಸ್ ಆಫ್ ದಿ ಡ್ರ್ಯಾಗನ್’ ಮತ್ತು ‘ಫಾಲ್ಔಟ್‌’ಗೆ ಕೆಲಸ ಮಾಡಿದ ಅಲೆಜಾಂಡ್ರೊ ಮಾರ್ಟಿನೆಜ್ ಅವರು ಈ ಹೊಸ ಸಿನೆಮಾಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ‘ಬ್ಯಾಟ್‌ಮ್ಯಾನ್ ಫಾರೆವರ್’ ಹಾಗೂ ‘ಗಾಡ್ಸ್ ಆಫ್ ಈಜಿಪ್ಟ್’ ನಂತಹ ಬೃಹತ್ ಸಿನೆಮಾಗಳ ವಿಎಫ್‌ಎಕ್ಸ್ ಮೇಲ್ವಿಚಾರಣೆ ಮಾಡಿದ್ದ ಎರಿಕ್ ಡಸ್ಟರ್ ಅವರು ಈ ಹೊಸ ಸಿನೆಮಾದ ವಿಷ್ಯುವಲ್ ಎಫೆಕ್ಟ್ಸ್ ನೋಡಿಕೊಳ್ಳಲಿದ್ದಾರೆ.

ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ!

ಹಿಂದಿಯ ‘ಅನಿಮಲ್’ ಮತ್ತು ‘ಓಂ ಶಾಂತಿ ಓಂ’ ಚಿತ್ರಗಳಿಗೆ ಕೆಲಸ ಮಾಡಿದ ಸುರೇಶ್ ಸೆಲ್ವರಾಜನ್ ಕಲಾ ನಿರ್ದೇಶನ ಹಾಗೂ ಹೇಷಮ್ ಅಬ್ದುಲ್ ವಹಾಬ್ ಅವರ ಸಂಗೀತ ಈ ಚಿತ್ರಕ್ಕಿದೆ. ‘ವೀರಾ’ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾ, ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಸಿನೆಮಾಗೆ ‘VDxShouryuv’ ಎಂದು ಕರೆಯಲಾಗಿದೆ. ಅಂದಹಾಗೇ ಇದು ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಂದಹಾಗೆ, ಇನ್ನೂ ಹೆಸರಿಡದ ಈ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೇ ವರ್ಷದ ಮಧ್ಯ ಭಾಗದಲ್ಲಿ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಕೊನೆಗೆ ವಿಜಯ್‌ ದೇವರಕೊಂಡ ಮತ್ತು ನಿರ್ದೇಶಕ ಶೌರ್ಯುವ್ ಕಾಂಬಿನೇಶನ್‌ನ ಹೊಸಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Related Posts

error: Content is protected !!