ಫೆ. 14ಕ್ಕೆ ಥಿಯೇಟರಿಗೆ ‘ಸಿದ್ಲಿಂಗು-2’ ಎಂಟ್ರಿ

‘ಸಿದ್ಲಿಂಗು-2’ ಸಿನೆಮಾದ ರಿಲೀಸ್‌ಗೆ ಮುಹೂರ್ತ ಫಿಕ್ಸ್
‘ಪ್ರೇಮಿಗಳ ದಿನ’ದಂದು ‘ಸಿದ್ಲಿಂಗು-2’ ಬಿಡುಗಡೆ
ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಲೂಸ್ ಮಾದ ಯೋಗಿ ಹೊಸ ಸಿನೆಮಾ
ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಮುಳುಗಿರುವ ‘ಸಿದ್ಲಿಂಗು-2’ ಚಿತ್ರತಂಡ, ಡಬ್ಬಿಂಗ್ ಕಾರ್ಯವನ್ನೂ ಮುಗಿಸುವ ಹಂತಕ್ಕೆ ತಲುಪಿದ್ದು, ಮುಂದಿನ ವಾರದಲ್ಲಿ ನಾಯಕಿ ಸೋನುಗೌಡರವರ ಮೊದಲ ನೋಟವನ್ನ ಅನಾವರಣಗೊಳಿಸಲು ಸಜ್ಜಾಗಿದೆ.
ಇದರ ಜೊತೆಗೆ ‘ಸಿದ್ಲಿಂಗು-2’ ಚಿತ್ರದ ಹಾಡಿನ ಲಿರೀಕಲ್ ವಿಡೀಯೋವನ್ನೂ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಚಿತ್ರತಂಡ, ಈ ತಿಂಗಳ ಅಂತ್ಯದಲ್ಲಿ ಮತ್ತೊಂದು ಹಾಡಿನ ಸಂಪೂರ್ಣ ವಿಡೀಯೋವನ್ನ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.
ಫೆಬ್ರವರಿ 14 ರಂದು ‘ಸಿದ್ಲಿಂಗು-2’ ಎಲ್ಲರ ಮನೆ ಮನಗಳಿಗೆ ಬರಲಿದ್ದು ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾದು ಕುಳಿತಿದೆ.