‘ಭುವನಂ ಗಗನಂ’ ಚಿತ್ರದ ‘ಫೀಲಿಂಗ್’ ಸಾಂಗ್ ರಿಲೀಸ್

‘ಭುವನಂ ಗಗನಂ’ ಚಿತ್ರದ ಮೆಲೋಡಿ ಹಾಡು ಬಿಡುಗಡೆ
‘ಮರೆಯದಿರುವ ಮಿಲನಕೆ ನಮನ, ಈ ಭುವನಕೆ ನೀನೇ ಗಗನ…’
‘ಐ ಗಾಟ್ ದಿಸ್ ಫೀಲಿಂಗ್…’ ಎಂದ ಪ್ರಮೋದ್-ರಚೆಲ್ ಜೋಡಿ
ನಟ ಪ್ರಮೋದ್ ಹಾಗೂ ರಚೆಲ್ ಡೇವಿಡ್ ಜೋಡಿಯಾಗಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ಇದೇ 2025ರ ಫೆಬ್ರವರಿ 14ರ ‘ಪ್ರೇಮಿಗಳ ದಿನ’ದಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ‘ಭುವನಂ ಗಗನಂ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ‘ಐ ಗಾಟ್ ದಿಸ್ ಫೀಲಿಂಗ್…’ ಎಂಬ ಹಾಡನ್ನು ಬಿಡುಗಡೆ ಮಾಡಿದೆ.
‘ಭುವನಂ ಗಗನಂ’ ಚಿತ್ರದ ‘ಐ ಗಾಟ್ ದಿಸ್ ಫೀಲಿಂಗ್…’ ಎಂಬ ಮೊದಲ ಹಾಡಿನ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಅಂದಹಾಗೆ, ಇದೇ ಜನವರಿ 13 ರಂದು ಬೆಳಿಗ್ಗೆ 11.00 ಗಂಟೆಗೆ ಯು-ಟ್ಯೂಬ್‌ನಲ್ಲಿ ‘ಐ ಗಾಟ್ ದಿಸ್ ಫೀಲಿಂಗ್…’ ಎಂಬ ಈ ಹಾಡು ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಆಗಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರಮೋದ್ ಹಾಗೂ ರಚೆಲ್ ಡೇವಿಡ್ ಜೋಡಿಯಾಗಿ ತೆರೆಮೇಲೆ ಹೆಜ್ಜೆ ಹಾಕಿದ್ದು, ಮೆಲೋಡಿಯಾಗಿ ಮೂಡಿಬಂದಿರುವ ಈ ಹಾಡು ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.