ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ‘ಲಕ್ಷ್ಮೀಪುತ್ರ’ ಪೋಸ್ಟರ್ ರಿಲೀಸ್
ಹುಟ್ಟುಹಬ್ಬದ ಸಂಭ್ರಮದಲ್ಲಿ ‘ನ್ಯಾಚುರಲ್ ಸ್ಟಾರ್’ ಚಿಕ್ಕಣ್ಣ
ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ‘ಲಕ್ಷ್ಮೀಪುತ್ರ’ ಪೋಸ್ಟರ್ ಅನಾವರಣ
ಸಂಪ್ರಾದಾಯಿಕ ಉಡುಪಿನಲ್ಲಿ ಕಂಗೊಳಿಸಿದ ಚಿಕ್ಕಣ್ಣ
ಕನ್ನಡ ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಚಿಕ್ಕಣ್ಣ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಅವರ ಜನ್ಮದಿನದ ವಿಶೇಷವಾಗಿ ‘ಲಕ್ಷ್ಮೀಪುತ್ರ’ ಚಿತ್ರತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ. ಗ್ಲಾಸ್ ತೊಟ್ಟು ಸಂಪ್ರಾದಾಯಿಕ ಉಡುಪಿನಲ್ಲಿ ಚಿಕ್ಕಣ್ಣ ಕಂಗೊಳಿಸಿದ್ದಾರೆ. 
ಅಂದಹಾಗೇ, ‘ಲಕ್ಷ್ಮೀಪುತ್ರ’ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ. ‘ಲಕ್ಷ್ಮೀಪುತ್ರ’ ತಾಯಿ ಮಗನ ಬಾಂಧವ್ಯದ ಕಥೆ. ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದು, ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವಿಜಯ್ ಎಸ್. ಸ್ವಾಮಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿಕ್ಕಣ್ಣ ಮಗನಾಗಿ ತಾರಾ ತಾಯಿ ಅಭಿನಯಿಸುತ್ತಿದ್ದಾರೆ.
ನಿರ್ದೇಶಕ ಎ. ಪಿ. ಅರ್ಜುನ್ ತಮ್ಮದೇ ‘ಎ. ಪಿ. ಅರ್ಜುನ್ ಫಿಲ್ಮ್ಸ್’ನಡಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸಚಿವ ಸಂತೋಷ್ ಲಾಡ್ ಅರ್ಪಿಸುತ್ತಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿರುವ ‘ಲಕ್ಷ್ಮೀಪುತ್ರ’ನಿಗಿದೆ. ಡಾ. ಕೆ. ರವಿ ವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಎ. ಪಿ. ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ರಾಜೇಶ್ ರಾವ್ ಸಹ ನಿರ್ದೇಶನ ಮಾಡುತ್ತಿದ್ದಾರೆ. ಎ. ಪಿ ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಾಣ ಹಾಗೂ ರವಿ ಕಿರಣ್ ಕೋ ಪ್ರೊಡ್ಯೂಸರ್ ಆಗಿ ಸಾಥ್ ಕೊಡುತ್ತಿರುವ ಚಿತ್ರದಲ್ಲಿ ತಾರಮ್ಮ, ಧರ್ಮಣ್ಣ ಕಡೂರ್ ಹಾಗೂ ಕುರಿ ಪ್ರತಾಪ್ ತಾರಾ ಬಳಗದಲ್ಲಿದ್ದಾರೆ.















