‘ಸನ್ ನೆಕ್ಸ್ಟ್’ ಓಟಿಟಿಯಲ್ಲಿ ‘X&Y’ ರಿಲೀಸ್
‘SUN NXT’ ಓಟಿಟಿಯಲ್ಲಿ ‘X&Y’ ಸ್ಟ್ರೀಮಿಂಗ್
ಇತ್ತೀಚೆಗಷ್ಟೇ ಥಿಯೇಟರಿನಲ್ಲಿ ಬಿಡುಗಡೆಯಾಗಿದ್ದ ‘X&Y’ ಸಿನೆಮಾ ಇದೀಗ ಥಿಯೇಟರಿನಿಂದ ನಿಧಾನವಾಗಿ ಓಟಿಟಿಗೆ ಲಗ್ಗೆಯಿಡುತ್ತಿದೆ. ಹೌದು ‘X&Y’ ಸಿನೆಮಾದ ಓಟಿಟಿ ಹಕ್ಕುಗಳು ‘SUN NXT’ ಓಟಿಟಿಯ ಪಾಲಾಗಿದ್ದು, ಇದೇ 2025ರ ಜುಲೈ 25 ರಿಂದ ‘SUN NXT’ ಓಟಿಟಿಯಲ್ಲಿ ‘X&Y’ ಸಿನೆಮಾ ಸ್ಟ್ರೀಮಿಂಗ್ ಆಗಲಿದೆ. 
ಥಿಯೇಟರಿನಲ್ಲಿ ಮೆಚ್ಚುಗೆ ಪಡೆದಿದ್ದ ‘X&Y’
ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ ‘X&Y’ ಸಿನೆಮಾ ಇದೇ 2025ರ ಜೂನ್ ನಲ್ಲಿ ತೆರೆಗೆ ಬಂದಿತ್ತು. ಥಿಯೇಟರಿನಲ್ಲಿ ‘X&Y’ ಸಿನೆಮಾವನ್ನು ವೀಕ್ಷಿಸಿದ್ದ ಪ್ರೇಕ್ಷಕರು ಮತ್ತು ವಿಮರ್ಶಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
‘X&Y’ ಸಿನೆಮಾದಲ್ಲಿ ನಿರ್ದೇಶಕ ಕಂ ನಟ ಸತ್ಯ ಪ್ರಕಾಶ್ ತೆರೆಮೇಲೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಅಥರ್ವ ಪ್ರಕಾಶ್, ನಾಯಕಿಯರಾದ ಬೃಂದಾ ಆಚಾರ್ಯ, ಅಯಾನ, ಸುಂದರ್, ಧರ್ಮಣ್ಣ ಕಡೂರ್ ಸೇರಿದಂತೆ ಅನೇಕ ಕಲಾವಿದರ ದೊಡ್ಡ ತಾರಾಗಣವೇ ‘X&Y’ ಸಿನೆಮಾದಲ್ಲಿದೆ. ನವಿರಾದ ಹಾಸ್ಯದ ಜೊತೆಗೆ ಮನಮುಟ್ಟುವ ಕಥೆಯನ್ನು ನಿರ್ದೇಶಕ ಸತ್ಯ ಪ್ರಕಾಶ್ ‘X&Y’ ಸಿನೆಮಾದ ಮೂಲಕ ತೆರೆಮೇಲೆ ತಂದಿದ್ದರು.
ಥಿಯೇಟಿನಲ್ಲಿ ‘X&Y’ ಸಿನೆಮಾವನ್ನು ನೋಡದೆ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಇದೀಗ ಇದೇ 2025ರ ಜುಲೈ 25 ರಿಂದ ‘SUN NXT’ ಓಟಿಟಿಯಲ್ಲಿ ‘X&Y’ ಸಿನೆಮಾವನ್ನು ನೋಡಿ ಆನಂದಿಸಬಹುದು.















