Video

‘ಕೊತ್ತಲವಾಡಿ’ ಚಿತ್ರದ ‘ರಾಜ ನೀನು… ರಾಣಿ ನಾನು…’ ಹಾಡು ರಿಲೀಸ್

‘ಕೊತ್ತಲವಾಡಿ’ ಚಿತ್ರದ ಮೆಲೋಡಿ ಗೀತೆ ಬಿಡುಗಡೆ

‘ರಾಜ ನೀನು.., ರಾಣಿ ನಾನು…’ ಎಂದ ಪೃಥ್ವಿ ಅಂಬಾರ್‌ – ಕಾವ್ಯಾ ಶೈವ

ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಡಿಗೆ ನಿಶಾನ್ ರೈ ಹಾಗೂ ಸುರಭಿ ಭಾರದ್ವಾಜ್ ಧ್ವನಿ

ನಟ ರಾಕಿಂಗ್‌ ಸ್ಟಾರ್‌ ಯಶ್ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಾಣದ ಮತ್ತು ಶ್ರೀರಾಜ್ ನಿರ್ದೇಶನದ ‘ಕೊತ್ತಲವಾಡಿ’ ಸಿನೆಮಾ ಇದೇ ಆಗಸ್ಟ್‌ 1ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ‘ಕೊತ್ತಲವಾಡಿ’ ಸಿನೆಮಾದ ಟೀಸರ್‌, ಟ್ರೇಲರ್‌ ಬಿಡುಗಡೆಯಾಗಿದ್ದು ಸಿನೆಮಾದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ‘ಕೊತ್ತಲವಾಡಿ’ ಸಿನೆಮಾದ ಬಿಡುಗಡೆಗೆ ಕೆಲಸ ದಿನಗಳಷ್ಟೇ ಬಾಕಿಯಿರುವಾಗಲೇ ಸಿನೆಮಾದ ‘ರಾಜ ನೀನು.., ರಾಣಿ ನಾನು…’ ಎಂಬ ಮೆಲೋಡಿ ಗೀತೆ ಬಿಡುಗಡೆ ಆಗಿದೆ.

‘ಕೊತ್ತಲವಾಡಿ’ ಸಿನೆಮಾದ ‘ರಾಜ ನೀನು.., ರಾಣಿ ನಾನು…’ ಎಂಬ ಹೊಸ ಹಾಡು ‘ಎಂ.ಆರ್.ಟಿ ಮ್ಯೂಸಿಕ್’ ಯೂ-ಟ್ಯೂಬ್ ಚಾನೆಲ್‌ ನಲ್ಲಿ ಬಿಡುಗಡೆ ಮಾಡಲಾಗಿದೆ. ಗೌಸ್ ಪೀರ್ ಸಾಹಿತ್ಯ ಬರೆದ ‘ರಾಜ ನಾನು.., ರಾಣಿ ನೀನು…’ ಗೀತೆಗೆ ನಿಶಾನ್ ರೈ ಹಾಗೂ ಸುರಭಿ ಭಾರದ್ವಾಜ್ ಕಂಠ ಕುಣಿಸಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.

‘ಕೊತ್ತಲವಾಡಿ’ ಸಿನೆಮಾದ ‘ರಾಜ ನೀನು.., ರಾಣಿ ನಾನು…’ ಹಾಡಿನ ಲಿರಿಕಲ್‌ ವಿಡಿಯೋ ಹಾಡನ್ನು ಬಿಡುಗಡೆ ಮಾಡಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ಕೊತ್ತಲವಾಡಿ’ ಎಂಬ ಆಕ್ಷನ್‌-ಕ್ರೈಂ ಕಹಾನಿ

‘ಕೊತ್ತಲವಾಡಿ’ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಹಳ್ಳಿ ಹೈದನಾಗಿ ಪೃಥ್ವಿ ಅಂಬಾರ್‌ ರಗಡ್‌ ಅವತಾರ ತಾಳಿದ್ದು, ನಾಯಕಿಯ ಪಾತ್ರದಲ್ಲಿ ಕಾವ್ಯ ಶೈವ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ ಅವರು ಪೊಲೀಸ್ಅಧಿಕಾರಿಯಾಗಿ ನಟಿಸಿದ್ದಾರೆ. ಸಿನೆಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮತ್ತು ರಾಮಿಸೆಟ್ಟಿ ಪವನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪೀರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

Related Posts

error: Content is protected !!