‘ಸೀಟ್ ಎಡ್ಜ್’ನಲ್ಲಿ ಹೊರಬಂತು ‘ವ್ಲಾಗ್-1’ ವಿಡಿಯೋ…
‘ಸೀಟ್ ಎಡ್ಜ್’ ಚಿತ್ರದ ಮೊದಲ ಸಸ್ಪೆನ್ಸ್-ಥ್ರಿಲ್ಲರ್ ಝಲಕ್
ಬಿಡುಗಡೆಯಾಯಿತು ‘ವ್ಲಾಗ್-1 ದಿ ಲೂಪ್’ ಕಂಟೆಂಟ್ ವಿಡಿಯೋ…
ಪ್ರೇಕ್ಷಕರಿಗೆ ‘ಸೀಟ್ ಎಡ್ಜ್’ ಝಲಕ್ ತೋರಿಸಿದ ಚಿತ್ರತಂಡ ಚಿತ್ರ
ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ‘ಸೀಟ್ ಎಡ್ಜ್’ ತೆರೆಗೆ ಬರಲು ತಯಾರಾಗುತ್ತಿದೆ. ಡಾರ್ಕ್ ಕಾಮಿಡಿಯ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ‘ಸೀಟ್ ಎಡ್ಜ್’ ಸಿನಿಮಾದಲ್ಲಿ ನಾಯಕ ಸಿದ್ಧು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 
‘ಎನ್. ಆರ್. ಸಿನಿಮಾ ಪ್ರೊಡಕ್ಷನ್ಸ್’ ನಿರ್ಮಾಣ, ಚೇತನ್ ಶೆಟ್ಟಿ ನಿರ್ದೇಶನ
ಕನ್ನಡದಲ್ಲಿ ಈ ಹಿಂದೆ ತೆರೆಗೆ ಬಂದಿದ್ದ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಮೊದಲಾದ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಚೇತನ್ ಶೆಟ್ಟಿ ‘ಸೀಟ್ ಎಡ್ಜ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಎನ್. ಆರ್. ಸಿನಿಮಾ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ತನ್ನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ‘ಸೀಟ್ ಎಡ್ಜ್’ ಚಿತ್ರತಂಡ, ಇದೀಗ ‘ವ್ಲಾಗ್-1 ದಿ ಲೂಪ್’ ಎಂಬ ಹೆಸರಿನಲ್ಲಿ ‘ಸೀಟ್ ಎಡ್ಜ್’ ಸಿನಿಮಾದ ಟೀಸರ್ ಮತ್ತು ಕಂಟೆಂಟ್ ಝಲಕ್ ಅನ್ನು ಬಿಡುಗಡೆ ಮಾಡಿದೆ.
‘ಸೀಡ್ ಎಡ್ಜ್’ ಸಿನೆಮಾದ ‘ವ್ಲಾಗ್-1 ದಿ ಲೂಪ್’ ಝಲಕ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಏನೀದು ‘ಸೀಟ್ ಎಡ್ಜ್’ ಕಥಾನಕ..?
‘ಸೀಟ್ ಎಡ್ಜ್’ ಚಿತ್ರದ ನಾಯಕ ಒಬ್ಬ ಯೂ-ಟ್ಯೂಬ್ ಬ್ಲಾಗರ್ ಆಗಿದ್ದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಪ್ರಯತ್ನದಲ್ಲಿರುತ್ತಾನೆ. ಈ ಮಧ್ಯೆ ತಾನು ಮಾಡುತ್ತಿರುವ ವಿಡಿಯೋಗಳು ಟ್ರೋಲ್ ಪೇಜ್ಗಳಿಗೆ ಆಹಾರವಾಗಿ ನಗೆಪಾಟಲಿಗೆ ಗುರಿ ಆಗುತ್ತಾನೆ. ಇದರ ನಡುವೆಯೇ ಒಂದು ಹುಡುಗಿಯ ಜೊತೆ ಲವ್ ಆಗುತ್ತೆ. ನಾಯಕ ಮಾಡಿದ ಒಂದು ತಪ್ಪಿನಿಂದ ಲವ್ ಬ್ರೇಕಪ್ ಆಗುತ್ತೆ. ಒಂದು ಕಡೆ ತಾನು ಪ್ರೀತ್ಸಿದ ಹುಡುಗಿಯನ್ನು ಮರಳಿ ಪಡೆಯಬೇಕು, ಮತ್ತೊಂದು ಕಡೆ ಯೂ-ಟ್ಯೂಬ್ ಅಲ್ಲಿ ತನ್ನ ವೀವರ್ಸ್ಗಳಿಗೆ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗ ಒಂದು ಭಯಂಕರವಾದ ಘೋಸ್ಟ್ ಟೌನ್ ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಾಯಕ ನಿರ್ಧರಿಸುತ್ತಾನೆ. ಕೊನೆಗೆ ನಾಯಕ ಘೋಸ್ಟ್ ಟೌನ್ ಗೆ ಹೋಗುವನೆ, ತಾನು ಪ್ರೀತಿಸಿದ ಹುಡುಗಿಯನ್ನು ಮರಳಿ ಪಡೆಯುವನೆ..? ಯೂ-ಟ್ಯೂಬ್ ಬ್ಲಾಗರ್ ಆಗಿ ಸಾಧನೆ ಮಾಡುವನೆ..? ಎನ್ನುವುದು ಚಿತ್ರದ ಕಥಾಹಂದರ. ಈ ಕಥೆ ತೆರೆಮೇಲೆ ಹೇಗೆ ಬಂದಿದೆ ಎಂಬುದು ‘ಸೀಟ್ ಎಡ್ಜ್’ ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.















