Quick ಸುದ್ದಿಗೆ ಒಂದು click

‘ಮಾರ್ಕ್’ ಟೈಟಲ್ ಟೀಸರ್ ದಾಖಲೆ!

ದಾಖಲೆ ಬರೆದ ಕಿಚ್ಚನ ‘ಮಾರ್ಕ್’ ಟೈಟಲ್ ಟೀಸರ್

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಟೈಟಲ್ ಟೀಸರ್ ಹವಾ…

‘ಮಾರ್ಕ್‌’ ಗುಂಗಲ್ಲಿ ‘ಕಿಚ್ಚ’ನ ಫ್ಯಾನ್ಸ್‌…

ನಟ ‘ಕಿಚ್ಚ’ ಸುದೀಪ್ ಅಭಿನಯಿಸುತ್ತಿರುವ ಮುಂಬರುವ ಚಿತ್ರ ‘ಮಾರ್ಕ್’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ‘ಮಾರ್ಕ್‌’ ಚಿತ್ರದ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ‘ಮಾರ್ಕ್‌’ ಚಿತ್ರತಂಡ, ನಾಯಕ ನಟ ‘ಕಿಚ್ಚ’ ಸುದೀಪ್‌ ಅವರ ಜನ್ಮದಿನಕ್ಕೆ ‘ಮಾರ್ಕ್‌’ ಚಿತ್ರದ ಟೈಟಲ್ ಟೀಸರ್ ರಿಲೀಸ್ ಬಿಡುಗಡೆ ಮಾಡಿತ್ತು. ‘ಮಾರ್ಕ್‌’ ಚಿತ್ರದಲ್ಲಿ ನಾಯಕ ನಟ ‘ಕಿಚ್ಚ’ ಸುದೀಪ್‌ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸುದೀಪ್‌ ಜನ್ಮದಿನದಂದು ಬಿಡುಗಡೆಯಾಗಿರುವ ‘ಮಾರ್ಕ್‌’ ಚಿತ್ರದ ಟೈಟಲ್‌ ಟೀಸರ್ ಹೊಸ ದಾಖಲೆ ಬರೆದಿದೆ.

ಏನಿದು ‘ಮಾರ್ಕ್’ ಬರೆದ ರೆಕಾರ್ಡ್ ?

‘ಮಾರ್ಕ್’ ಟೈಟಲ್ ಟೀಸರ್ ಯೂ-ಟ್ಯೂಬ್ ನಲ್ಲಿ 5.01 ಮಿಲಿಯನ್ ವೀವ್ಸ್ ಕಂಡಿದೆ. ಇನ್ ಸ್ಟಾಗ್ರಾಂನಲ್ಲಿ 4.3 ಮಿಲಿಯನ್ ವೀಕ್ಷಣೆ ಕಂಡಿದೆ. ಯೂ-ಟ್ಯೂಬ್ ಹಾಗೂ ಇನ್ ಸ್ಟಾ ಒಟ್ಟಾರೆ ಸೇರಿ ‘ಮಾರ್ಕ್’ ಟೈಟಲ್ ಟೀಸರ್ 9.3 ಮಿಲಿಯನ್ ವೀವ್ಸ್ ಕಂಡಿದೆ. ಸದ್ಯದ ಮಟ್ಟಿಗೆ ‘ಕಿಚ್ಚ’ ಸುದೀಪ್‌ ಇಲ್ಲಿಯವರೆಗೆ ಅಭಿನಯಿಸಿರುವ ಸಿನೆಮಾಗಳ ಪೈಕಿ ಇದೇ ಮೊದಲ ಬಾರಿಗೆ ‘ಮಾರ್ಕ್‌’ ಚಿತ್ರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯೆ ಸಿಕ್ಕಿದ್ದು ಸುದೀಪ್‌ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಮತ್ತೊಂದು ಬ್ಲಾಕ್‌ ಬಸ್ಟರ್‌ ಸುಳಿವು ಕೊಟ್ಟ ‘ಮಾರ್ಕ್‌’…!

ಇನ್ನು ‘ಮಾರ್ಕ್‌’ ಚಿತ್ರ ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿದೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ಈ ಸಿನೆಮಾವನ್ನು ನಿರ್ಮಿಸುತ್ತಿವೆ. ಈ ಮೊದಲು ‘ಮ್ಯಾಕ್ಸ್’ ಸಿನೆಮಾದ ಮೂಲಕ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನೆಮಾ ಇದಾಗಿದೆ. ಇದೇ ವರ್ಷ 2025ರ ಡಿಸೆಂಬರ್ 25ರಂದು ‘ಮಾರ್ಕ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

Related Posts

error: Content is protected !!