Quick ಸುದ್ದಿಗೆ ಒಂದು click

‘ಗುಮ್ಮಡಿ ನರಸಯ್ಯ’ ಗೆಟಪ್‌ನಲ್ಲಿ ಶಿವರಾಜಕುಮಾರ್

‘ಗುಮ್ಮಡಿ ನರಸಯ್ಯ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಶಿವಣ್ಣ

‘ದೀಪಾವಳಿ ಹಬ್ಬ’ದಂದು ‘ಗುಮ್ಮಡಿ ನರಸಯ್ಯ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

‘ಗುಮ್ಮಡಿ ನರಸಯ್ಯ’ ಬಯೋಪಿಕ್‌ನಲ್ಲಿ ಶಿವರಾಜಕುಮಾರ್‌

ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಬ್ಯಾಕ್‌ ಟು ಬ್ಯಾಕ್‌ ಸಿನೆಮಾಗಳಲ್ಲಿ ಅಭಿನಯಿಸುತ್ತಿರುವ ಏಕೈಕ ಸ್ಟಾರ್‌ ನಟ ಅಂದ್ರೆ ಅದು ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಎಂಬುದು ಚಿತ್ರರಂಗದಲ್ಲಿ ಎಲ್ಲರೂ ಒಕ್ಕೊರಲಿನಿಂದ ಹೇಳುವ ಮಾತು. ಪ್ರತಿವರ್ಷ ಏನಿಲ್ಲ ಅಂದ್ರೂ  ಶಿವರಾಜಕುಮಾರ್‌ ಅಭಿನಯಿಸುವ ಕನಿಷ್ಟ ಅರ್ಧ ಡಜನ್‌ ಸಿನೆಮಾವಾದರೂ ಅನೌನ್ಸ್‌ ಆಗೋದಂತೂ ಗ್ಯಾರೆಂಟಿ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಿವರಾಜಕುಮಾರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಗುಮ್ಮಡಿ ನರಸಯ್ಯ’ ಎಂಬ ಮತ್ತೊಂದು ಹೊಸ ಸಿನೆಮಾ ಅಧಿಕೃತವಾಗಿ ಅನೌನ್ಸ್‌ ಆಗಿದೆ.

ಅಂದಹಾಗೆ, ಸದ್ಯ ಅನೌನ್ಸ್‌ ಆಗಿರುವ ‘ಗುಮ್ಮಡಿ ನರಸಯ್ಯ’ ಸಿನೆಮಾದಲ್ಲಿ ‘ಗುಮ್ಮಡಿ ನರಸಯ್ಯ’ ಪಾತ್ರದಲ್ಲಿ ನಟ ಶಿವರಾಜಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಿಡುಗಡೆಯಾಗಿರುವ ‘ಗುಮ್ಮಡಿ ನರಸಯ್ಯ’ ಸಿನೆಮಾದ ಟೈಟಲ್‌ ಪೋಸ್ಟರ್‌ನಲ್ಲಿ ಸರ್ಕಾರಿ ಕೆಲಸಗಳ ಶಕ್ತಿ ಕೇಂದ್ರದ ಕಟ್ಟಡ, ಸೈಕಲ್ಲು, ಕೆಂಪು ಬಾವುಟ, ಹೆಗಲ ಮೇಲೆ ಕೆಂಪು ಶಲ್ಯ, ಖಾದಿ ಬಟ್ಟೆ, ಕನ್ನಡಕದಾರಿಯಾಗಿ ಶಿವರಾಜಕುಮಾರ್ ಅವರ ಲುಕ್ಕು ನೋಡುಗರ ಗಮನ ಸೆಳೆಯುವಂತಿದೆ.

ಯಾರು ಈ ‘ಗುಮ್ಮಡಿ ನರಸಯ್ಯ’..? ಏನಿದು ಕಥೆ..?

ಅಂದಹಾಗೆ, ‘ಗುಮ್ಮಡಿ ನರಸಯ್ಯ’ ಇದು ಆಂಧ್ರ ಮೂಲದ ಯೆಲ್ಲಾಂಡು ರಾಜಕಾರಣಿ ‘ಗುಮ್ಮಡಿ ನರಸಯ್ಯ’ ಜೀವನ ಚರಿತ್ರೆಯ ಆಧರಿಸಿ ಸೆಟ್ಟೇರುತ್ತಿರುವ ಚಿತ್ರ. ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (CPI)ನ ಸದಸ್ಯರಾಗಿರುವ ‘ಗುಮ್ಮಡಿ ನರಸಯ್ಯ’ ಅವರು 1983-1994ರ ವರೆಗೆ 2 ಬಾರಿ ಹಾಗೂ 1999-2009 ನಡುವೆ 3 ಬಾರಿ ಯೆಲ್ಲಾಂಡು ಕ್ಷೇತ್ರದಿಂದ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ‘ಗುಮ್ಮಡಿ ನರಸಯ್ಯ’ ಆಯ್ಕೆಯಾಗಿದ್ದರು. 5 ಬಾರಿ ಶಾಸಕರಾಗಿದ್ದರೂ ಇವರು ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆಯ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು. ಈಗ ಇಂಥ ‘ಗುಮ್ಮಡಿ ನರಸಯ್ಯ’ ಅವರ ಜೀವನ ಚರಿತ್ರೆ ತೆರೆಮೇಲೆ ಅದೇ ಹೆಸರಿನಲ್ಲಿ ಸಿನೆಮಾವಾಗಿ ಬರುತ್ತಿದೆ.

ಪಂಚ ಭಾಷೆಗಳಲ್ಲಿ ‘ಗುಮ್ಮಡಿ ನರಸಯ್ಯ’ ತೆರೆಗೆ…

ಇನ್ನು ‘ಗುಮ್ಮಡಿ ನರಸಯ್ಯ’ ಚಿತ್ರದಲ್ಲಿ ನಟ ಶಿವರಾಜಕುಮಾರ್ ಅವರು ‘ಗುಮ್ಮಡಿ ನರಸಯ್ಯ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ‘ದೀಪಾವಳಿ ಹಬ್ಬ’ದ ಅಂಗವಾಗಿ ‘ಗುಮ್ಮಡಿ ನರಸಯ್ಯ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇನ್ನೂ ಈ ಚಿತ್ರವನ್ನು ತೆಲುಗಿನ ‘ಚಿರು ಗೋಡವಾಲು’, ‘ಲಾವಣ್ಯ ವಿತ್ ಲವ್ ಬಾಯ್ಸ್’ ಮುಂತಾದ‌ ಸಿನಿಮಾಗಳಲ್ಲಿ ನಟಿಸಿರುವ ಪರಮೇಶ್ವರ್ ಹಿವ್ರಲೆ‌ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಎನ್. ಸುರೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

‘ಗುಮ್ಮಡಿ ನರಸಯ್ಯ’ ಚಿತ್ರ ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿ ತೆರೆಗೆ ಬರುತ್ತಿದೆ. ಸದ್ಯ ತನ್ನ ಟೈಟಲ್‌, ಫಸ್ಟ್‌ಲುಕ್‌ ಪೋಸ್ಟರ್‌ ಮತ್ತು ಕಂಟೆಂಟ್‌ ಮೂಲಕ ಒಂದಷ್ಟು ಜನರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಮ್ಮಡಿ ನರಸಯ್ಯ’ ಸಿನೆಮಾ ತೆರೆಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Related Posts

error: Content is protected !!