Quick ಸುದ್ದಿಗೆ ಒಂದು click

ಸ್ಯಾಂಡಲ್‌ವುಡ್ ಹೊಗಳಿದ ಆಸ್ಕರ್ ವಿಜೇತ ಎ. ಆರ್.​ ರೆಹಮಾನ್

‘ಕನ್ನಡ ಚಿತ್ರರಂಗ ಈಗ ಮೇಲಕ್ಕೇರುತ್ತಿದೆ…’ ಎಂದ ಎ. ಆರ್.​ ರೆಹಮಾನ್

‘ಸ್ಯಾಂಡಲ್‌ವುಡ್ ಪ್ರಗತಿಯಲ್ಲಿದ್ದು, ಉನ್ನತ ಹಂತಕ್ಕೆ ಏರುತ್ತಿದೆ…’ ಎಂದು ಹಾಡಿ ಹೊಗಳಿದ ಸಂಗೀತ ಮಾಂತ್ರಿಕ

ಪರಭಾಷೆಯಲ್ಲಿ ಕನ್ನಡ ಚಿತ್ರರಂಗದ ಮನ್ನಣೆ ಎತ್ತಿ ಹಿಡಿದ ರೆಹಮಾನ್ ಮಾತುಗಳು

ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್, ಕನ್ನಡ ಚಿತ್ರರಂಗದ ಬಗ್ಗೆ ಆಡಿರುವಂಥ ಮಾತುಗಳು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸಂಚಲನ ಮಾಡುತ್ತಿದೆ. ಕನ್ನಡ ಚಿತ್ರರಂಗದ ಬಗ್ಗೆ ಎ. ಆರ್‌. ರೆಹಮಾನ್‌ ಆಡಿದ ಮಾತು ಈಗ ವೈರಲ್ ಆಗುತ್ತಿದ್ದು, ಈ ಮಾತಿನಲ್ಲಿ ಎ. ಆರ್‌. ರೆಹಮಾನ್‌ ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.

ಪಾಡ್‌ಕಾಸ್ಟ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಎ. ಆರ್‌. ರೆಹಮಾನ್‌, ‘ಕನ್ನಡ ಚಿತ್ರರಂಗ ರಾಕಿಂಗ್ ಹಂತದಲ್ಲಿದೆ. ಮೇಲಕ್ಕೆ ಏರುತ್ತಿದೆ’ ಎಂದಿದ್ದಾರೆ. ‘ಕಳೆದ ಚಿತ್ರರಂಗ ಎರಡು ದಶಕಗಳ ಬಳಿಕ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮುಂದೆ ಒಳ್ಳೆಯ ದಿನಗಳನ್ನು ನಿರೀಕ್ಷಿಸಬಹುದು’ ಎಂದು ರೆಹಮಾನ್ ಹಾಡಿ ಹೊಗಳಿದ್ದಾರೆ.

ಸದ್ಯ ಎ. ಆರ್‌. ರೆಹಮಾನ್‌ ಆಡಿರುವ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ. ಮತ್ತೊಂದೆಡೆ ಎ. ಆರ್‌. ರೆಹಮಾನ್‌ ಆಡಿರುವ ಮಾತುಗಳು ಕನ್ನಡ ಚಿತ್ರರಂಗದ ಮನ್ನಣೆಯನ್ನು ಪರಭಾಷೆಯಲ್ಲಿ ಎತ್ತಿ ಹಿಡಿಯುವಂತಾದ್ದು ಎಂದು ಚಿತ್ರರಂಗದ ಹಲವರು ವಿಶ್ಲೇಷಿಸುತ್ತಿದ್ದಾರೆ.

Related Posts

error: Content is protected !!