ಓಟಿಟಿಗೆ ಬಂತು ‘ಬ್ರ್ಯಾಟ್’ ಚಿತ್ರ
‘ಅಮೇಜಾನ್ ಪ್ರೈಂ’ನಲ್ಲಿ ‘ಬ್ರ್ಯಾಟ್’ ಸಿನೆಮಾ ಸ್ಟ್ರೀಮಿಂಗ್
ಒಂದೂವರೆ ತಿಂಗಳಲ್ಲಿ ಓಟಿಟಿಗೆ ಬಂದ ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿಯ ಹೊಸಚಿತ್ರ
ಕ್ರಿಕೆಟ್ ಬೆಟ್ಟಿಂಗ್ ಮೇಲೊಂದು ಥ್ರಿಲ್ಲರ್ ಚಿತ್ರ
ಇದೇ 2025ರ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ತೆರೆಗೆ ಬಂದ ನಾಯಕ ನಟ ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಈಗ ಓಟಿಟಿಗೆ ಕಾಲಿಟ್ಟಿದೆ.
ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ‘ಬ್ರ್ಯಾಟ್’ ಸಿನೆಮಾದ ಓಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಮ್ ವಿಡಿಯೋ’ ಸಂಸ್ಥೆ ಖರೀದಿಸಿದ್ದು, ಇದೇ ನವೆಂಬರ್ ಕೊನೆಯಲ್ಲಿ ಬ್ರ್ಯಾಟ್ ಸಿನೆಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಏನಿದು ʼಬ್ರ್ಯಾಟ್ʼ ಚಿತ್ರದ ಒಂದೆಳೆ..?
ಕ್ರಿಸ್ಟಿ (ಕೃಷ್ಣ) ನಿಷ್ಠಾವಂತ ಪೊಲೀಸ್ ಕಾನ್ಸ್ಟೆಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ಮಗ. ಆದರೆ, ಈತನಿಗೆ ಒಳ್ಳೆಯ ರೀತಿಯಲ್ಲಿ ಹಣ ಮಾಡಿ ಅಭ್ಯಾಸವೇ ಇಲ್ಲ. ಅಡ್ಡ ದಾರಿ ಹಿಡಿಯುವ ಈತ ಸಾಕಷ್ಟು ಹಣ ಮಾಡುತ್ತಾನೆ. ನಂತರ ಹಣ ಆತನ ಕೈಯಲ್ಲಿ ಉಳಿಯುತ್ತಾ? ಕೊನೆಯಲ್ಲಿ ಏನಾಗುತ್ತದೆ ಎಂಬುದು ‘ಬ್ರ್ಯಾಟ್’ ಸಿನೆಮಾದ ಕಥೆ. ಡ್ರ್ಯಾಗನ್ ಮಂಜು ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಮನಿಶಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್ ಇಂದಿರಾ, ಮಾನಸಿ ಸುಧೀರ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಬ್ರ್ಯಾಟ್’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.















