Street Beat

ತೆರೆಮೇಲೂ ಸತಿ-ಪತಿಯಾದ ‘ವಿರೋಶ್’ ಜೋಡಿ!

‘ರಣಬಾಲಿ’ಯಲ್ಲಿ ಚಿತ್ರದಲ್ಲೂ ಗಂಡ-ಹೆಂಡತಿ ರೋಲ್‌!

ಮದುವೆ ಬಳಿಕ ರಶ್ಮಿಕಾ-ವಿಜಯ್ ಜೋಡಿಯ ಹೊಸಚಿತ್ರದ ಸುದ್ದಿ… 

ಹೊಸ ಜೋಡಿಗೆ ‘ರಣಬಾಲಿ’ ಚಿತ್ರತಂಡದಿಂದ ಸ್ಪೆಷಲ್‌ ಗಿಫ್ಟ್!

ಇತ್ತೀಚೆಗಷ್ಟೇ ತೆಲುಗು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಸೆಮಣೆ ಏರುವ ಮೂಲಕ ಸತಿ-ಪರಿಗಳಾಗಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಈ ಜೋಡಿ ತೆರೆಮೇಲೂ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಹೊಸ ಚಿತ್ರ ‘ರಣಬಾಲಿ’ಯಲ್ಲಿ ದಂಪತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಈ ಸುದ್ದಿಯನ್ನು ಗೌಪ್ಯವಾಗಿಟ್ಟಿದ್ದ ಚಿತ್ರತಂಡ, ವಿಜಯ್‌ ದೇವರಕೊಂಡ – ರಶ್ಮಿಕಾ ವಿವಾಹದ ಬಳಿಕ ಈ ಸುದ್ದಿಯನ್ನು ಸರ್‌ಪ್ರೈಸ್‌ ಆಗಿ ಅನೌನ್ಸ್‌ ಮಾಡಿದೆ. ಅಷ್ಟೇ ಅಲ್ಲದೆ, ‘ರಣಬಾಲಿ’ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಲುಕ್‌ ಅನ್ನೂ ರಿವೀಲ್‌ ಮಾಡಿದೆ.

‘ರಣಬಾಲಿ’ಯ ಮೊದಲ ಹಾಡು ರಿಲೀಸ್‌…

ಇನ್ನು ‘ರಣಬಾಲಿ’ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ‘ಏನಯ್ಯ ಸ್ವಾಮಿ…’ ಎಂಬ ಈ ಗೀತೆಯಲ್ಲಿ ವಿಜಯ್ ರಶ್ಮಿಕಾ ಗಂಡ ಹೆಂಡತಿಯಾಗಿ ಅಭಿನಯಿಸಿದ್ದಾರೆ. ಈ ಜೋಡಿಯ ಆನ್ ಸ್ಕ್ರೀನ್ ರೋಮ್ಯಾನ್ಸ್ ಸಖತ್ ಆಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ‘ರಣಬಾಲಿ’ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ರಶ್ಮಿಕಾ ಜಯಮ್ಮ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದೇ ವರ್ಷ ‘ರಣಬಾಲಿ’ ತೆರೆಗೆ

‘ರಣಬಾಲಿ’ ಚಿತ್ರವನ್ನು ‘ಮೈತ್ರಿ ಮೂವಿ ಮೇಕರ್ಸ್‌’ನ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ನಿರ್ಮಿಸಿದ್ದಾರೆ ಮತ್ತು ‘ಟಿ-ಸಿರೀಸ್’ ಪ್ರಸ್ತುತಪಡಿಸಿದೆ. ಚಿತ್ರವು 2026ರ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಕಥೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ. ರಾಹುಲ್ ಸಾಂಕೃತ್ಯಾಯನ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶ್ವೇತಾ ಮೋಹನ್ ಮತ್ತು ಕಾರ್ತಿಕ್ ಈ ಗೀತೆಯನ್ನ ಹಾಡಿದ್ದಾರೆ. ಕನ್ನಡದಲ್ಲಿಯೂ ಹಾಡು ಬಿಡುಗಡೆ ಮಾಡಲಾಗಿದೆ.

Related Posts

error: Content is protected !!